ಅಮೆಜಾನ್-ಫ್ಲಿಪ್‌ಕಾರ್ಟ್‌ನಿಂದ 37 ಲಕ್ಷ ಜಾಬ್; ಅರ್ಜಿ ಸಲ್ಲಿಸೋದು ಹೇಗೆ?

Published : Aug 25, 2025, 07:11 PM IST
Flipkart Amazon Jobs 2025

ಸಾರಾಂಶ

ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಈ ಹಬ್ಬದ ಸೀಸನ್‌ನಲ್ಲಿ ಒಟ್ಟು 3.7 ಮಿಲಿಯನ್ ಸೀಸನಲ್ ಉದ್ಯೋಗಗಳನ್ನು ನೀಡುತ್ತಿವೆ. ಫ್ಲಿಪ್‌ಕಾರ್ಟ್ 2.2 ಲಕ್ಷ ಹಾಗೂ ಅಮೆಜಾನ್ 1.5 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.

Flipkart-Amazon Festive Season Jobs 2025: ಈ ಬಾರಿಯ ಹಬ್ಬದ ಸೀಸನ್ ಗ್ರಾಹಕರಿಗೆ ಮಾತ್ರವಲ್ಲ, ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೂ ಸಂತಸದ ಸುದ್ದಿ ತಂದಿದೆ. ಪ್ರತಿ ವರ್ಷ ದೀಪಾವಳಿ ಮತ್ತು ಹಬ್ಬದ ಕೊಡುಗೆಗಳ ಸಮಯದಲ್ಲಿ ಆನ್‌ಲೈನ್ ಶಾಪಿಂಗ್‌ನ ಬೇಡಿಕೆ ಹಲವು ಪಟ್ಟು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಈ ಬಾರಿ ದೇಶದ ಎರಡು ದೈತ್ಯ ಇ-ಕಾಮರ್ಸ್ ಕಂಪನಿಗಳಾದ ಫ್ಲಿಪ್‌ಕಾರ್ಟ್ (Flipkart Festive Season Jobs 2025) ಮತ್ತು ಅಮೆಜಾನ್ (Amazon Festive Season Jobs 2025) ಸುಮಾರು 3.7 ಮಿಲಿಯನ್ (37 ಲಕ್ಷ ಉದ್ಯೋಗಗಳು) ಸೀಸನಲ್ ಉದ್ಯೋಗಗಳನ್ನು ನೀಡುತ್ತಿವೆ. ಅಂದರೆ ಲಕ್ಷಾಂತರ ಯುವಕರಿಗೆ ಉದ್ಯೋಗದ ಸುವರ್ಣಾವಕಾಶ ದೊರೆಯಲಿದೆ. ಈ ಮೂಲಕ ಎರಡು ದೈತ್ಯ ಕಂಪನಿಗಳು ಉದ್ಯೋಗ ಮೇಳವನ್ನು ಆರಂಭಿಸಿವೆ.

ಫ್ಲಿಪ್‌ಕಾರ್ಟ್‌ನಿಂದ 2.2 ಲಕ್ಷ ಹೊಸ ನೇಮಕಾತಿ

ಫ್ಲಿಪ್‌ಕಾರ್ಟ್ ತನ್ನ ದಿ ಬಿಗ್ ಬಿಲಿಯನ್ ಡೇಸ್ (TBBD) ಮಾರಾಟಕ್ಕಾಗಿ ಈ ಬಾರಿ ದಾಖಲೆ ಮುರಿಯುವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕಂಪನಿಯು ಸುಮಾರು 2.2 ಲಕ್ಷಕ್ಕೂ ಹೆಚ್ಚು ಸೀಸನಲ್ ಸಹವರ್ತಿಗಳು ತಮ್ಮ ತಂಡವನ್ನು ಸೇರುತ್ತಾರೆ ಎಂಬ ಮಾಹಿತುಯನ್ನು ಫ್ಲಿಪ್‌ಕಾರ್ಟ್ ಬಿಡುಗಡೆ ಮಾಡಿದೆ. ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ವಿಕಲಚೇತನರೂ ಸೇರಿದ್ದಾರೆ. ಈ ಬಾರಿ ತಂಡ ಸೇರಿಕೊಳ್ಳುವ ಇವರೆಲ್ಲರೂ 1.6 ಮಿಲಿಯನ್‌ಗಿಂತಲೂ ಹೆಚ್ಚು ಮಾರಾಟಗಾರರಿಗೆ ಬೆಂಬಲವಾಗಿ ನಿಂತು ಕೆಲಸ ಮಾಡುತ್ತಾರೆ. ಇದರ ಜೊತೆಯಲ್ಲಿಯೇ ವಿತರಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುತ್ತಾರೆ ಎಂದು ಕಂಪನಿ ಹೇಳಿದೆ. ಫ್ಲಿಪ್‌ಕಾರ್ಟ್ ಹೇಳುವಂತೆ ಈ ಸಮಯ ಅವರಿಗೆ ಅತ್ಯಂತ ವಿಶೇಷವಾಗಿದೆ ಏಕೆಂದರೆ ಈ ಸಮಯದಲ್ಲಿ ಲಕ್ಷಾಂತರ ಪ್ಯಾಕೇಜ್‌ಗಳು, ಕೋಟ್ಯಂತರ ನಗುಗಳಾಗಿ ಬದಲಾಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಅಮೆಜಾನ್‌ ಘೋಷಣೆ: 1.5 ಲಕ್ಷಕ್ಕೂ ಹೆಚ್ಚು ಸೀಸನಲ್ ಉದ್ಯೋಗಗಳು

ಅಮೆಜಾನ್ ಇಂಡಿಯಾ ಕೂಡ ಹಬ್ಬಗಳ ಮೊದಲು 1.5 ಲಕ್ಷಕ್ಕೂ ಹೆಚ್ಚು ಸೀಸನಲ್ ಉದ್ಯೋಗಗಳನ್ನು ಘೋಷಿಸಿದೆ. ಈ ಅವಕಾಶಗಳು ಕಂಪನಿಯ ಫುಲ್‌ಫಿಲ್‌ಮೆಂಟ್ ಸೆಂಟರ್‌ಗಳು (FCಗಳು), ವಿಂಗಡಣಾ ಕೇಂದ್ರಗಳು ಮತ್ತು ವಿತರಣಾ ಜಾಲದಲ್ಲಿ ನೀಡಲಾಗುವುದು ಎಂದು ಮಾಹಿತಿ ನೀಡಿದೆ. ಅಮೆಜಾನ್ ಈಗಾಗಲೇ ಇವರಲ್ಲಿ ಹೆಚ್ಚಿನವರನ್ನು ಆನ್‌ಬೋರ್ಡ್ ಮಾಡಿಕೊಂಡಿದೆ. ಕಂಪನಿಯು ಈ ಉದ್ಯೋಗಗಳಲ್ಲಿ ಮಹಿಳೆಯರು ಮತ್ತು 2,000 ಕ್ಕೂ ಹೆಚ್ಚು PWD ಗಳನ್ನು (ವಿಕಲಚೇತನರು) ಸೇರಿಸಲು ವಿಶೇಷ ಕಾಳಜಿ ವಹಿಸಿದೆ ಎಂಬುವುದು ಗಮನಾರ್ಹವಾಗಿದೆ.

ಅಮೆಜಾನ್‌ ಬಿಗ್ ನೆಟ್‌ವರ್ಕಿಂಗ್ ಮತ್ತು ಹೊಸ ನೇಮಕಾತಿ

ಅಮೆಜಾನ್ ಇಂಡಿಯಾ ತನ್ನ ಬಳಿ ದೇಶಾದ್ಯಂತ ಬಲವಾದ ಜಾಲವಿದೆ ಎಂದು ಹೇಳುತ್ತದೆ. ಅಮೆಜಾನ್ ಇಂಡಿಯಾ 15 ರಾಜ್ಯಗಳಲ್ಲಿ ಹರಡಿರುವ ಫುಲ್‌ಫಿಲ್‌ಮೆಂಟ್ ಸೆಂಟರ್‌ ಮತ್ತು ಸುಮಾರು 2,000 ವಿತರಣಾ ಕೇಂದ್ರಗಳನ್ನು ಹೊಂದಿದ್ದು, ದೊಡ್ಡ ಪ್ರಮಾಣದಲ್ಲಿಯೇ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಕಂಪನಿಯು 28,000 ‘ಐ ಹ್ಯಾವ್ ಸ್ಪೇಸ್’ ಪಾಲುದಾರರು ಮತ್ತು ಸಾವಿರಾರು ಅಮೆಜಾನ್ ಫ್ಲೆಕ್ಸ್ ಪಾಲುದಾರರನ್ನು ಹೊಂದಿದೆ. ಹೊಸ ನೇಮಕಾತಿಗಳ ಸೇರ್ಪಡೆಯಿಂದ ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ಸರಕುಗಳನ್ನು ತಲುಪಿಸುವುದು ಸುಲಭವಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ತಮ್ಮ ವಸ್ತುಗಳು ಕಡಿಮೆ ಸಮಯದಲ್ಲಿ ದೊರಕಲಿವೆ ಎಂದು ಅಮೆಜಾನ್ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಉದ್ಯೋಗ ಪಡೆಯಲು ಈ ಅವಕಾಶ ಏಕೆ ವಿಶೇಷ?

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡೂ ತಮ್ಮ ಸಹವರ್ತಿಗಳಿಗೆ ಸುರಕ್ಷಿತ ಮತ್ತು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿವೆ. ಅಮೆಜಾನ್ ತನ್ನ ಉದ್ಯೋಗಿಗಳಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ. ಈ ಉದ್ಯೋಗಿಗಳು ಪಡೆದುಕೊಳ್ಳುವ ಸೌಲಭ್ಯಗಳು ಈ ಕೆಳಗಿನಂತಿವೆ.

  • ಸುರಕ್ಷಿತ ಮತ್ತು ಆರಾಮದಾಯಕ ಕೆಲಸದ ಸ್ಥಳ, ಸ್ವಚ್ಛ ಶೌಚಾಲಯ ಮತ್ತು ಕೆಫೆಟೇರಿಯಾ ಲಭ್ಯವಿರುತ್ತದೆ.
  • ಆನ್‌ಸೈಟ್ ವೈದ್ಯಕೀಯ ಸೌಲಭ್ಯಗಳು ಮತ್ತು ಆರೋಗ್ಯ ತಪಾಸಣಾ ಶಿಬಿರದ ವ್ಯವಸ್ಥೆ
  • ಹವಾಮಾನದಿಂದ ರಕ್ಷಣೆಗಾಗಿ ಮುಂಜಾಗ್ರತ ಎಚ್ಚರಿಕೆಗಳು ಮತ್ತು ಸುರಕ್ಷಿತ ಕೆಲಸದ ಸಂಸ್ಕೃತಿಯನನ್ನು ಅಳವಡಿಸಿಕೊಂಡಿವೆ.
  • ಅಮೆಜಾನ್‌ನ ಆರಂಭಿಕ ವೇತನ ಪಡೆಯುವ ಯೋಜನೆ (ಅಲ್ಲಿ ಸಹವರ್ತಿಗಳು ವೇತನ ಮುಂಗಡವನ್ನು ಪಡೆಯಬಹುದು)
  • ವಾರದಲ್ಲಿ 5 ದಿನ ಕೆಲಸ ಮತ್ತು ರಜಾದಿನಗಳ ಸೌಲಭ್ಯ ಸಿಗುತ್ತದೆ.
  • ಪಿಎಫ್, ಇಎಸ್‌ಐಸಿ, ಗ್ರಾಚ್ಯುಟಿ ಮುಂತಾದ ಸಾಮಾಜಿಕ ಭದ್ರತಾ ಪ್ರಯೋಜನಗಳು
  • ವಿಮಾ ರಕ್ಷಣೆ ಮತ್ತು ಅಪಘಾತ ರಕ್ಷಣೆಯೂ ಈ ಉದ್ಯೋಗ ಒಳಗೊಂಡಿರುತ್ತದೆ.
  • ಕೆಲಸದ ಸ್ಥಳ, ಅಲ್ಲಿ ಮಹಿಳೆಯರು ಮತ್ತು ವಿಕಲಚೇತನರು ಸಮಾನವಾಗಿ ಕೆಲಸ ಮಾಡಬಹುದು.

ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಉದ್ಯೋಗಗಳು 2025: ಎಲ್ಲಿ ಅರ್ಜಿ ಸಲ್ಲಿಸಬೇಕು?

ಹಬ್ಬದ ಸೀಸನ್‌ನಲ್ಲಿ ಈ ಉದ್ಯೋಗಗಳು ಯುವಕರಿಗೆ ಕೆಲಸದ ಅವಕಾಶವನ್ನು ಮಾತ್ರ ನೀಡುವುದಿಲ್ಲ, ಆದರೆ ದೊಡ್ಡ ವೇದಿಕೆಯಲ್ಲಿ ಕೆಲಸ ಮಾಡುವ ಅನುಭವವನ್ನೂ ನೀಡುತ್ತದೆ. ವಿಶೇಷವೆಂದರೆ ಈ ಉದ್ಯೋಗಗಳು ಕಾಲೋಚಿತವಾಗಿದ್ದರೂ ಕೆಲವೊಮ್ಮೆ ಶಾಶ್ವತ ಉದ್ಯೋಗಗಳಾಗಿ ಬದಲಾಗುತ್ತವೆ. ನೀವು ಕೂಡ ಈ ಸೀಸನ್‌ನಲ್ಲಿ ಉದ್ಯೋಗ ಹುಡುಕುತ್ತಿದ್ದರೆ, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ದೊಡ್ಡ ಕಂಪನಿಗಳೊಂದಿಗೆ ಕೆಲಸ ಮಾಡುವ ಈ ಅವಕಾಶ ನಿಮಗೆ ಉತ್ತಮ ವೃತ್ತಿಜೀವನದ ಆರಂಭವಾಗಬಹುದು. ಇತ್ತೀಚಿನ ಉದ್ಯೋಗ ತೆರೆಯುವಿಕೆಗಳಿಗಾಗಿ ಸಂಬಂಧಿತ ವೆಬ್‌ಸೈಟ್‌ನ ವೃತ್ತಿ ವಿಭಾಗಕ್ಕೆ ಭೇಟಿ ನೀಡಿ ವಿವರಗಳನ್ನು ಪರಿಶೀಲಿಸಿ.

PREV
Read more Articles on
click me!

Recommended Stories

ಏರ್ ಇಂಡಿಯಾ ಗಗನಸಖಿಯಾಗಿ 35 ವರ್ಷ ಸೇವೆ, ಕೊನೆ ಹಾರಾಟದ ಭಾವುಕ ಕ್ಷಣ ವೈರಲ್
30 ಸಾವಿರ ನೌಕರರನ್ನು ಮನೆಗೆ ಕಳುಹಿಸಿದ ಬೃಹತ್​ ಕಂಪೆನಿ! ರಾಜ್ಯದಲ್ಲಿ ಯಾರ ಕೆಲಸಕ್ಕೆ ಬಿತ್ತು ಕತ್ತರಿ?