ಯುಪಿಎಸ್ಸಿ : ಅಭ್ಯರ್ಥಿಗಳಿಗೆ ಸರ್ಕಾರದಿಂದ ಇಲ್ಲಿದೆ ಗುಡ್‌ ನ್ಯೂಸ್

By Kannadaprabha NewsFirst Published Feb 6, 2021, 8:32 AM IST
Highlights

UPSC ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಇದೆ. ಏನದು ವಿಚಾರ.. ನೀವು ಈ ಅಭ್ಯರ್ಥಿಗಳಾ...? ಇದನ್ನೊಮ್ಮೆ ಗಮನಿಸಿ 

ನವದೆಹಲಿ (ಫೆ.06): ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ನಡೆದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ‘ಕೊನೆಯ ಪ್ರಯತ್ನ’(ಲಾಸ್ಟ್‌ ಅಟೆಂಪ್ಟ್‌)ದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಶುಕ್ರವಾರ ಕೇಂದ್ರ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ.

ಸುಪ್ರೀಂಕೋರ್ಟಿನ ನ್ಯಾ. ಎ.ಎಂ ಖಾನ್ವಿಲ್ಕರ್‌ ನೇತೃತ್ವದ ಪೀಠದ ಎದುರು ತನ್ನ ನಿರ್ಧಾರ ತಿಳಿಸಿರುವ ಕೇಂದ್ರ ಸರ್ಕಾರ,‘ಕೊರೋನಾ ಕಾರಣದಿಂದಾಗಿ 2020ರಲ್ಲಿ ನಡೆದ ಪರೀಕ್ಷೆಯಲ್ಲಿ ಭಾಗಿಯಾಗಲು ಸಾಧ್ಯವಾಗದ ಲಾಸ್ಟ್‌ ಅಟೆಂಪ್ಟ್‌ ಅಭ್ಯರ್ಥಿಗಳಿಗೆ 2021ರಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯಲು ವಿನಾಯಿತಿ ನೀಡಲಾಗುತ್ತದೆ. ಇವರು 2021ರಲ್ಲಿ ಒಮ್ಮೆ ಮಾತ್ರ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ’ ಎಂದು ತಿಳಿಸಿದೆ.

ಪೋಲಿಯೋ ಮೆಟ್ಟಿದ ಬಳೆ ಮಾರುವ ಹುಡುಗ IAS.. ಸೀಮೆಎಣ್ಣೆಗೆ ಪರದಾಡಿದ ಆ ದಿನಗಳು! ..

ಹಾಗೆಯೇ ಇನ್ನೂ ಪರೀಕ್ಷೆ ಬರೆಯಲು ಹಲವು ಅವಕಾಶ ಇರುವ ಅಥವಾ ಮತ್ತಿತರ ಕಾರಣಗಳಿಂದ ಪರೀಕ್ಷೆಗೆ ಹಾಜರಾಗದ ಅಭ್ಯರ್ಥಿಗಳಿಗೆ ಈ ವಿನಾಯಿತಿ ಇಲ್ಲ ಎಂದೂ ಸ್ಪಷ್ಟಪಡಿಸಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಕೋರ್ಟ್‌ ಈ ನಿರ್ಣಯದ ಬಗ್ಗೆ ಸುತ್ತೋಲೆ ಹೊರಡಿಸಲು ಕೇಂದ್ರಕ್ಕೆ ಸೂಚಿಸಿದೆ. ಹಾಗೆಯೇ ಅರ್ಜಿದಾರರಿಂದ ಈ ಬಗ್ಗೆ ಪ್ರತಿಕ್ರಿಯೆ ಕೇಳಿ, ವಿಚಾರಣೆಯನ್ನು ಫೆ.8ಕ್ಕೆ ಮುಂದೂಡಿದೆ.

click me!