Asianet Suvarna News Asianet Suvarna News

ಪೋಲಿಯೋ ಮೆಟ್ಟಿದ ಬಳೆ ಮಾರುವ ಹುಡುಗ IAS.. ಸೀಮೆಎಣ್ಣೆಗೆ ಪರದಾಡಿದ ಆ ದಿನಗಳು!

ಸವಾಲುಗಳನ್ನು ಮೆಟ್ಟಿ ನಿಂತ ರಾಮು/ ರಮೇಶ್ ಗೋಲಪ್ ಐಎಎಸ್ ಹಾದಿ/ ಪೊಲೀಯೋ, ಬಡತನ ಎಲ್ಲವನ್ನು ಮೀರಿ ಸಾಧನೆ/ ದೇಶಕ್ಕೆ  ಮಾದರಿ ಕೆಲಸ ಮಾಡುತ್ತಿರುವ ಅಧಿಕಾರಿ

 

How A Specially abled Bangle Seller Became An IAS Officer Life of Ramesh Gholap Story mah
Author
Bengaluru, First Published Jan 9, 2021, 5:52 PM IST

ನವದೆಹಲಿ(ಜ. 09)   ಅಕ್ರಮವಾಗಿ ಸೀಮೆಎಣ್ಣೆ ಮಾರುವ ವ್ಯಕ್ತಿಯ ಅಂಗಡಿ ಲೈಸನ್ಸ್ ರದ್ದು ಮಾಡಿದಾಗ ನಾನು ದೀಪದ ಬೆಳಕಿನಲ್ಲಿ ಓದುತ್ತಿದ್ದ ದಿನಗಳು ನೆನಪಾಗುತ್ತವೆ.  ಸೀಮೆಎಣ್ಣೆಗಾಗಿ ಪರದಾಡಿದ ದಿನಗಳು ಕಣ್ಣೇದುರಿಗೆ ಬರುತ್ತವೆ.. ವಿಧವೆ ಒಬ್ಬಳಿಗೆ  ನೆರವು ನೀಡಿದಾಗ ನನ್ನ ತಾಯಿ ಮನೆಗಾಗಿ ಮಾಡಿದ ಹೋರಾಟ ಕಾಣಿಸುತ್ತದೆ. ಸರ್ಕಾರಿ ಆಸ್ಪತ್ರೆಯೊಂದನ್ನು ಪರಿಶೀಲನೆ ಮಾಡಿದಾಗ ನನ್ನ ತಂದೆ ಚಿಕಿತ್ಸೆ ಇಲ್ಲದೆ ಪರದಾಡಿದ ದಿನಗಳ ನೋವು ಕಾಣುತ್ತದೆ.. ಮದ್ಯ ತ್ಯಜಿಸಿದ ತಂದೆಗೆ ಉತ್ತಮ ಚಿಕಿತ್ಸೆ ಸಿಗದೆ ಪರದಾಡಿದ ಆ ಕಠಿಣ ದಿನಗಳು ಕಾಣುತ್ತವೆ.. ಯಾವುದಾದರೂ ಬಡ ಮಗುವಿಗೆ ನೆರವು ನೀಡಿದರೆ ನನ್ನನ್ನೇ ನಾನು ನೆನಪಿಸಿಕೊಳ್ಳುತ್ತೇನೆ.. ನಾನು ರಾಮು ಅಂದರೆ ರಮೇಶ್ ಗೋಲಪ್!

ಸಾಧನೆಗೆ ಯಾವುದು ಅಡ್ಡ ಬರುವುದಿಲ್ಲ.. ಛಲ ಒಂದಿದ್ದರೆ ಸಾಕು.. ಒಂದಷ್ಟು ವ್ಯಕ್ತಿಗಳು  ಇದನ್ನು ಸಾಬೀತು ಮಾಡಿ ತೋರಿಸುತ್ತಲೇ ಇರುತ್ತಾರೆ ಅವರಿಂದ ನಾವೆಲ್ಲ ಜೀವನ ಪಾಠ ಕಲಿಯಲೇಬೇಕು.

ಎಡಗಾಲನ್ನು ಕಾಡಿದ ಪೋಲೀಯೋ: ಪೊಲೀಯೋ ಮಾರಿ ಇವರ ಎಡಗಾಲನ್ನು ತಿಂದು ಹಾಕಿತ್ತು. ಕುಟುಂಬ ನಿರ್ವಹಣೆಗೆ ಬಾಲ್ಯದಿಂದಲೇ ಬಳೆ ಮಾರಾಟ ಮಾಡುವ ಕಾಯಕ.. ಇದೆಲ್ಲವನ್ನು ಮೆಟ್ಟಿ ನಿಂತು ಇದೀಗ ಅವರು ಐಎಎಸ್ ಅಧಿಕಾರಿ.

ಹೌದು.. ನಾವು ಹೇಳುತ್ತಿರುವ ಚೇತನದ ಹೆಸರು  ರಮೇಶ್ ಗೋಲಪ್. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ರಮೇಶ್ ಗೋಲಪ್. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಊರಿನಲ್ಲೇ ಪೂರೈಸಿ ಬಳಿಕ ಬೇರೆ  ಕಡೆ  ತೆರಳಿ ಮುಂದಿನ ಶಿಕ್ಷಣ ಪಡೆದರು. ಬಡತನ, ವಿಕಲಾಂಗತೆ ಎಂಬ ಸುಳ್ಳುಗಳು ಮನೋಸ್ಥೈರ್ಯ, ದೃಢ ನಿಲುವು, ಪರಿಶ್ರಮದ ಮುಂದೆ ಸೋಲುತ್ತದೆ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

How A Specially abled Bangle Seller Became An IAS Officer Life of Ramesh Gholap Story mah

ಇದೀಗ ಐಎಎಸ್;  2012ರ ಬ್ಯಾಚ್ ನಲ್ಲಿ ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದ ರಮೇಶ್  ಜಾರ್ಖಂಡ್ ಇಂಧನ ಇಲಾಖೆ ಜಾಯಿಂಟ್ ಸಕ್ರೆಟರಿಯಾಗಿ ಕೆಲಸ ನಿರ್ವಹಿಸಿ ಮೆಚ್ಚುಗೆ ಪಡೆದುಕೊಂಡರು. 

ತಂದೆಯ ಸೈಕಲ್ ರಿಪೇರಿ ಅಂಗಡಿ; ರಮೇಶ್ ತಂದೆ  ಗೋರಖ್ ಗೋಲಪ್ ಸೈಕಲ್ ರಿಪೇರಿ ಅಂಗಡಿಯೊಂದನ್ನು ನಡೆಸುತ್ತಿದ್ದರು, ಇದು ಅವರ ಕುಟುಂಬದ ಆದಾಯ ಮೂಲವಾಗಿತ್ತು. ಅನಾರೋಗ್ಯಕ್ಕೆ ತುತ್ತಾದ ತಂದೆ ಅಕಾಲಿಕ ಮರಣ ಹೊಂದಿದರು. ಕುಟುಂಬದ ಜವಾಬ್ದಾರಿ ರಮೇಶ್ ಮೇಲೆ ಬಿತ್ತು.

ಹಿರಿಯರ ನಿಸ್ವಾರ್ಥ ಸೇವೆ ಯಾವ ಪ್ರಶಸ್ತಿಗಳು ಬೇಕಿಲ್ಲ

ಜೀವನ ನಿರ್ವಹಣೆಗೆ ಬಳೆ ಮಾರಾಟ;  ಜೀವನ ನಿರ್ವಹಣೆ ಮತ್ತೆ ಓದಿಗೆ ರಮೇಶ್ ಬಳೆ ಮಾರಾಟವನ್ನು ತಮ್ಮ ತಾಯಿಯೊಂದಿಗೆ ಆರಂಭಿಸಿದರು. ಹಳ್ಳಿ ಹಳ್ಳಿಗೆ ತೆರಳಿ ಬಳೆ ಮಾರಾಟ ಮಾಡಿದರು.  ಸಹೋದರರೊಂದಿಗೆ ಸೇರಿ ಬಳೆ ಮಾರಾಟ ಪ್ರತಿದಿನದ ಕಾಯಕವಾಯಿತು.

ಚಿಕ್ಕಪ್ಪನೊಂದಿಗಿನ ಆ ದಿನಗಳು: ರಮೇಶ್ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಬಾರ್ಶಿ ತಾಲ್ಲೂಕಿನ ಮಹಾಗಾಂ  ಹಳ್ಳಿಯವರು. ಅಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ನಂತರ   ಚಿಕ್ಕಪ್ಪನೊಂದಿಗೆ ಬಾರ್ಶಿಯಲ್ಲಿ ಶಿಕ್ಷಣ ಪಡೆಯಲು ತೆರಳಿದರು.  ಆ ವೇಳೆಗೆ ರಮೇಶ್ ಗೆ ಡಿಪ್ಲೋಮಾ ಒಂದನ್ನೇ ಮಾಡಲು ಅವಕಾಶ ಇದ್ದು ಅದೇ ಕೋರ್ಸ್ ಪಡೆದುಕೊಂಡರು. ನಂತರ ಮುಕ್ತ ವಿಶ್ವವಿದ್ಯಾಲಯದಲ್ಲಿ ಕಲಾ ಪದವಿ ಪಡೆದುಕೊಂಡರು. ಆದಾರ ಮೇಲೆ  2009 ರಲ್ಲಿ ಅವರು ಶಿಕ್ಷಕ ವೃತ್ತಿ ಆರಂಭಿಸಿದರು.

How A Specially abled Bangle Seller Became An IAS Officer Life of Ramesh Gholap Story mah

ತಹಶೀಲ್ದಾರ್ ಪ್ರೇರಣೆ; ತಹಶೀಲ್ದಾರ್ ಒಬ್ಬರಿಂದ ಪ್ರೇರಣೆ ಪಡೆದುಕೊಂಡ ನಂತರ ಯುಪಿಎಸ್‌ಸಿ ಕನಸು ಚಿಗುರೊಡೆಯಿತು. ಕೆಲವು ಸ್ನೇಹಿತರು ಮತ್ತು ಸ್ವ ಸಹಾಯ ಗುಂಪುಗಳ ನೆರವು ಪಡೆದುಕೊಂಡು ಯುಪಿಎಸ್‌ಸಿ ತರಬೇತಿಗೆಂದು ಪುಣೆಗೆ ತೆರಳಿದರು.

ಮಳೆಯೇ ಇಲ್ಲದ ಮರುಭೂಮಿಯಲ್ಲಿ ಮರ ಬೆಳೆದ ಕತೆ

ಶಿಕ್ಷಕರಿಗೆ ಧನ್ಯವಾದ: ನನ್ನನ್ನು ಭೇಟಿಯಾದ ಮೊದಲ ಶಿಕ್ಷಕರೆಂದರೆ  ಅತುಲ್ ಲ್ಯಾಂಡೆ. ಯುಪಿಎಸ್ಸಿ ಎಂದರೇನು, ಅದನ್ನು ಮರಾಠಿಯಲ್ಲಿ ತೆಗೆದುಕೊಳ್ಳಬಹುದೇ, ನಾನು ಅದಕ್ಕೆ ಅರ್ಹನಾಗಿದ್ದೇನೆ, ಮುಂತಾದ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡೆ. ನಾನು ಪರೀಕ್ಷೆ ಬರೆಯಲು ಅಡ್ಡಿ ಇಲ್ಲ ಎನ್ನುವುದು ಅಲ್ಲಿ ಗೊತ್ತಾಯಿತು ಎಂದು ರಮೇಶ್ ಹೇಳುತ್ತಾರೆ. ಇನ್ನು ಎತ್ತರಕ್ಕೆ  ಬೆಳೆದು ದೇಶಕ್ಕೆ ಒಳಿತಾಗುವ ಕೆಲಸ ಮಾಡಲಿ.. ಗುಡ್ ಲಕ್ ರಮೇಶ್... 

How A Specially abled Bangle Seller Became An IAS Officer Life of Ramesh Gholap Story mah

How A Specially abled Bangle Seller Became An IAS Officer Life of Ramesh Gholap Story mah

Follow Us:
Download App:
  • android
  • ios