ಬೆಳಗಾವಿ: ಸೇನಾ ನೇಮಕಾತಿ, ಕೋವಿಡ್‌ ಪರೀಕ್ಷೆಗಾಗಿ ನೂಕು ನುಗ್ಗಲು

By Kannadaprabha News  |  First Published Feb 3, 2021, 2:11 PM IST

ಫೆ.4 ಮತ್ತು 6ರಂದು ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿ| ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳುವವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ| ಮುಂಜಾನೆಯಿಂದಲೇ ಜಿಲ್ಲಾಸ್ಪತ್ರೆ ಎದುರು ಸರದಿ ಸಾಲಿನಲ್ಲಿ ನಿಂತ ಅಭ್ಯರ್ಥಿಗಳು| 


ಬೆಳಗಾವಿ(ಫೆ.03): ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಫೆ.4 ಮತ್ತು 6ರಂದು ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಅಭ್ಯರ್ಥಿಗಳು ಮಂಗಳವಾರವೇ ನಗರಕ್ಕೆ ಆಗಮಿಸಿದ್ದಾರೆ. 

ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳುವವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯಗೊಳಿಸಿರುವುದು ಅಭ್ಯರ್ಥಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಾವಿರಾರು ಅಭ್ಯರ್ಥಿಗಳು ಜಿಲ್ಲಾಸ್ಪತ್ರೆ ಎದುರು ಮಂಗಳವಾರ ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದು, ಕೋವಿಡ್‌ ಪರೀಕ್ಷೆಗೆ ನೂಕುನುಗ್ಗಲು ಉಂಟಾಯಿತು. 

Latest Videos

undefined

ನೌಕಾಪಡೆಯಲ್ಲಿ ಕೆಲಸ ಮಾಡಬೇಕೆ? ಇಲ್ಲಿವೆ ನೋಡಿ ಖಾಲಿ ಹುದ್ದೆಗಳು

ಕೋವಿಡ್‌ ನಿಯಮ ಗಾಳಿಗೆ ತೂರಲಾಗಿತ್ತು. ಇಲ್ಲಿ ಹೇಳುವವರು, ಕೇಳುವವರು ಯಾರೂ ಇರಲಿಲ್ಲ. ಜಿಲ್ಲಾಸ್ಪತ್ರೆ ಆವರಣದಲ್ಲಿ ಎಲ್ಲಿ ನೋಡಿದರಲ್ಲಿ ಜನಜಂಗುಳಿಯೇ ಕಂಡುಬಂತು. ನೂಕು ನುಗ್ಗಲಿನ ನಡುವೆಯೇ ಅಭ್ಯರ್ಥಿಗಳು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡರು.
 

click me!