ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 1000 ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-02-2025. ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ, ವಿವರಣಾತ್ಮಕ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನವನ್ನು ಒಳಗೊಂಡಿರುತ್ತದೆ.
ಬೆಂಗಳೂರು (ಜ.30): ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (ಸಿಬಿಐ) ಕ್ರೆಡಿಟ್ ಆಫೀಸರ್ ಹುದ್ದೆಯ ನೇಮಕಾತಿಗಾಗಿ ಉದ್ಯೋಗ ಅಧಿಸೂಚನೆಯನ್ನು ನೀಡಿದೆ. ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಹುದ್ದೆಯ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ್ದಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಆಫೀಸರ್ ನೇಮಕಾತಿ 2025 ಹಿನ್ನೆಲೆಯಲ್ಲಿ 1000 ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಆನ್‌ಲೈನ್ ಮೂಲಕ ಅರ್ ಆಹ್ವಾನಿಸಲಾಗಿದೆ. ಇಂದಿನಿಂದಲೇ ಜ.30ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-02-2025 ಆಗಿದೆ.
ಅರ್ಜಿ ಶುಲ್ಕ : ಮಹಿಳೆಯರು/SC/ST/PWBD ಅಭ್ಯರ್ಥಿಗಳಿಗೆ 150 ರೂಪಾಯಿ. ಹಾಗೂ ಎಲ್ಲಾ ಇತರ ಅಭ್ಯರ್ಥಿಗಳಿಗೆ 750 ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ. ವಯಸ್ಸಿನ ಮಿತಿ ಕೂಡ ಅನ್ವಯ ಆಗಲಿದೆ. ಕನಿಷ್ಠ ವಯಸ್ಸಿನ ಮಿತಿ 20 ವರ್ಷ ಹಾಗೂ ಗರಿಷ್ಠ ವಯಸ್ಸಿನ ಮಿತಿ 30 ವರ್ಷಗಳು. ಇನ್ನು ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಗೆ ಅವಕಾಶವಿದೆ.
ಇದನ್ನೂ ಓದಿ: ಬೆಂಗಳೂರು ಮಹಿಳೆ ₹1.5 ಲಕ್ಷ ಸಂಬಳ ಬಿಟ್ಟು ತನಗಿಷ್ಟದ ಕೆಲಸ ಆಯ್ಕೆ; ಮೆಚ್ಚುಗೆಯ ಮಹಾಪೂರ!
ಕ್ರೆಡಿಟ್ ಆಫೀಸರ್ಸ್ 1000 ಹುದ್ದೆಗಳನ್ನು ಮೀಸಲಾತಿವಾರು ಹಂಚಿಕೆ ಮಾಡಲಾಗಿದೆ.
ಎಸ್‌ಸಿ- 150
ಎಸ್‌ಟಿ- 75
ಒಬಿಸಿ - 270
ಇಡಬ್ಲ್ಯೂಎಸ್- 100
ಸಾಮಾನ್ಯ ವರ್ಗ - 405
ಒಟ್ಟು - 1000
ಸೆಂಟ್ರಲ್ ಬ್ಯಾಂಕ್ ಅಧಕೃತ ಪೇಜ್:https://www.centralbankofindia.co.in/en ಹಾಗೂ ಕ್ರೆಡಿಟ್ ಆಫೀಸರ್ಸ್ ಹುದ್ದೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ವೆಬ್‌ಸೈಟ್ ಲಿಂಕ್: https://ibpsonline.ibps.in/cbicojan25/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳುವ ವಿವರ ಭರ್ತಿ ಮಾಡಿ ಅರ್ಜಿ ಸಲ್ಲಿಕೆ ಮಾಡಿ, ಶುಲ್ಕ ಪಾವತಿಸಬಹುದು.
ಆಯ್ಕೆ ಪ್ರಕ್ರಿಯೆ ಆನ್‌ಲೈನ್ ಪರೀಕ್ಷೆಯ ಮೂಲಕ ನಡೆಯಲಿದೆ. ಇದರಲ್ಲಿ ವಿವರಣಾತ್ಮಕ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನವೂ ಸೇರಿರುತ್ತದೆ. ಇನ್ನು ಪರೀಕ್ಷೆಯನ್ನು 150 ಅಂಕಗಳಿಗೆ ನಡೆಸಲಾಗುತ್ತದೆ. ಇದರಲ್ಲಿ 120 ಅಕಗಳು ಬಹುಆಯ್ಕೆ ಮಾದರಿ ಪ್ರಶ್ನೆಗಳು ಹಾಗೂ ಉಳಿದ 30 ಅಂಕಗಳಿಗೆ ವಿವರಣಾತ್ಮಕ ಬರವಣಿಗೆಯ 2 ಪ್ರಶ್ನೆಗಳನ್ನು ನೀಡಲಾಗುತ್ತದೆ. ಇಂಗ್ಲೀಷ್ ಭಾಷೆ, ಪರಿಮಾಣಾತ್ಮಕ ಪ್ರಶ್ನೆ, ತಾರ್ಕಿ ಸಾಮರ್ಥ್ಯ, ಬ್ಯಾಂಕ್‌ಗೆ ಸಂಬಂಧಿಸಿದಂತೆ ಸಾಮಾನ್ಯ ಜ್ಞಾನದ ಪ್ರಶ್ನೆಗಳಿರುತ್ತವೆ.