ಬೆಂಗಳೂರು ಮಹಿಳೆ ₹1.5 ಲಕ್ಷ ಸಂಬಳ ಬಿಟ್ಟು ತನಗಿಷ್ಟದ ಕೆಲಸ ಆಯ್ಕೆ; ಮೆಚ್ಚುಗೆಯ ಮಹಾಪೂರ!

ಬೆಂಗಳೂರಿನ ಯುವತಿಯೊಬ್ಬರು 1.5 ಲಕ್ಷ ರೂ. ಸಂಬಳದ ಕಾರ್ಪೊರೇಟ್ ಕೆಲಸ ಬಿಟ್ಟು, ತನಗಿಷ್ಟವಾದ ಬೇಕಿಂಗ್ ಕೆಲಸ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Bengaluru woman quits 2 lakh paying corporate job to pursue passion for baking sat

ಸ್ವಂತ ಆಸೆಗಳ ಹಿಂದೆ ಓಡೋದೇ ಮನುಷ್ಯ. ಇಷ್ಟದ ಊಟ ತಿನ್ನೋಕೆ, ಇಷ್ಟದ ಜಾಗಕ್ಕೆ ಹೋಗೋಕೆ, ಇಷ್ಟದ ಕೆಲಸ ಮಾಡೋಕೆ... ಹೀಗೆ ಸ್ವಂತ ಇಷ್ಟಗಳ ಹಿಂದೆ ನಾವೆಲ್ಲರೂ ಓಡುತ್ತೇವೆ. ಆದರೆ, ಮಾಡುವ ಕೆಲಸದಲ್ಲಿ ಮಾತ್ರ ಇಷ್ಟವಾದದ್ದನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ತೀರಾ ಕಡಿಮೆ ಇರುತ್ತದೆ. ಅನಿವಾರ್ಯವಾಗಿ ಇಷ್ಟವಿಲ್ಲದ ಕೆಲಸ ಮಾಡುವವರ ಸಂಖ್ಯೆಯೇ ಹೆಚ್ಚಾಗಿದ್ದಾರೆ. ಆದರೆ, ಇಲ್ಲೊಬ್ಬ ಯುವತಿ ತಾನು 1.5 ಲಕ್ಷ ರೂ. ಸಂಬಳ ಪಡೆಯುವ ಕೆಲಸ ಬಿಟ್ಟು, ತನಗಿಷ್ಟವಾದ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾಳೆ.

ಇದೀಗ ತನಗೆ ಇಷ್ಟವಾದ ಕೆಲಸವನ್ನು ಆಯ್ಕೆ ಮಾಡಿಕೊಂಡ ಯುವತಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಜನ ಹೊಗಳುತ್ತಿದ್ದಾರೆ. ಅದಕ್ಕಾಗಿ ಆಕೆ ಮಾಸಿಕ ₹1.5 ಲಕ್ಷ ಸಂಬಳದ ಕಾರ್ಪೊರೇಟ್ ಕೆಲಸವನ್ನು ಬಿಟ್ಟು ಬಂದಿದ್ದಾಳೆ. ಬೆಂಗಳೂರಿನ ಪ್ರಸಿದ್ಧ ಕಾರ್ಪೊರೇಟ್ ಕಂಪನಿಯಲ್ಲಿ HR ಪ್ರೊಫೆಷನಲ್ ಆಗಿ ಅಸ್ಮಿತಾ ಕೆಲಸ ಮಾಡುತ್ತಿದ್ದರು. ಮಾಸಿಕ ₹1.5 ಲಕ್ಷ ಸಂಬಳ. ಆದರೆ 2023 ರಲ್ಲಿ ಅಸ್ಮಿತಾ ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಯೂಟರ್ನ್ ತೆಗೆದುಕೊಂಡಿದ್ದಾರೆ. ಕೆಲಸ ಬಿಟ್ಟು ತಮ್ಮ ಇಷ್ಟದ ಬೇಕಿಂಗ್ (ಬೇಕರಿ ಪ್ರಾಡಕ್ಟ್ ತಯಾರಿಕೆ) ಕಡೆ ಮುಖ ಮಾಡಿದ್ದಾರೆ.

Latest Videos

ಇದನ್ನೂ ಓದಿ: NLCIL ಕಂಪನಿ ಕಾರ್ಯದರ್ಶಿ ಹುದ್ದೆಗೆ ಸಂದರ್ಶನ, ನಿಮಗೊಂದು ಸುವರ್ಣಾವಕಾಶ

ಅಸ್ಮಿತಾ ಪೌಲ್ ಅವರ ಈ ಬದಲಾವಣೆಯನ್ನ ಅವರ ಪತಿ ಸಾಗರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ್ಮೇಲೆ ಇದು ವೈರಲ್ ಆಗಿದೆ. ಬ್ಲೂಬೆರಿ ಇಟ್ಟು ಅಲಂಕರಿಸಿದ ಕಪ್ ಕೇಕ್ ಚಿತ್ರ ಹಂಚಿಕೊಂಡು ಸಾಗರ್ ಬರೆದಿದ್ದು ಹೀಗೆ, 'ಇದನ್ನ ಮಾಡೋಕೆ ನನ್ನ ಹೆಂಡತಿ ಮಾಸಿಕ ₹1.5 ಲಕ್ಷ ಸಂಬಳದ ಕೆಲಸ ಬಿಟ್ಟಳು. ದೇವರಿಗೆ ಧನ್ಯವಾದಗಳು. ಅವಳಿಗೆ ಅದು ಸಾಧ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋ ಮತ್ತು ಬರಹ ಸೋಶಿಯಲ್ ಮೀಡಿಯಾದಲ್ಲಿ ಬಹಳ ಬೇಗನೇ ಜನರ ಗಮನ ಸೆಳೆಯಿತು. ಅಸ್ಮಿತಾ ಅವರ ನಿರ್ಧಾರಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವರು ತಮ್ಮ ಕನಸುಗಳ ಹಿಂದೆ ಓಡೋ ಅಸ್ಮಿತಾ ಅವರ ನಿರ್ಧಾರವನ್ನ ಶ್ಲಾಘಿಸಿದ್ದಾರೆ.

My wife left a 1.5 L pm job
to make these

thank god she did! pic.twitter.com/Bwv6qGjbmY

— Sagar👨‍💻 🚀 (@code_sagar)

'ಇದು ನೋಡೋಕೆ ಚೆನ್ನಾಗಿದೆ, ನಿಮ್ಮ ಹೆಂಡತಿ ತನ್ನ ಇಷ್ಟದ ಹಿಂದೆ ಹೋದಿದ್ದು ಒಳ್ಳೆಯದು. ಅವರು ಖಂಡಿತ ಯಶಸ್ಸು ಕಾಣುತ್ತಾರೆ' ಅಂತ ಒಬ್ಬರು ಬರೆದಿದ್ದಾರೆ. 'ಇವತ್ತಿನ ಕಾಲದಲ್ಲಿ ₹1.5 ಲಕ್ಷ ದೊಡ್ಡ ಮೊತ್ತ ಅಲ್ಲ. ಏನಿಲ್ಲದಿದ್ದರೂ ಅವರು ತಮ್ಮ ಇಷ್ಟದ್ದನ್ನ ಮಾಡ್ತಿದ್ದಾರಲ್ಲ' ಅಂತ ಇನ್ನೊಬ್ಬರು ಬರೆದಿದ್ದಾರೆ. 'ಜನ ವರ್ಷಕ್ಕೆ ₹30 ಲಕ್ಷ ಸಂಬಳದ ಕೆಲಸ ಮಾಡುತ್ತಾರೆ, ಆದರೆ ಅವರು ತೃಪ್ತರಾಗಿಲ್ಲ. ಆದರೆ ಸ್ವಂತ ಇಷ್ಟದ ಕೆಲಸ ಮಾಡೋದಕ್ಕಿಂತ ಬೇರೆ ಸಂತೋಷ ಇಲ್ಲ' ಅಂತ ಮತ್ತೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ: ಐಒಸಿಎಲ್ ನಲ್ಲಿ 456 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಯಾವುದೇ ಪರೀಕ್ಷೆ ಇಲ್ಲ

ಸಿಲಿಕಾನ್ ಸಿಟಿ ಬೆಂಗಳೂರು ಅವಕಾಶಗಳ ನಗರ, ಜನ ರಿಸ್ಕ್ ತಗೊಳ್ಳೋದು, ಹೊಸ ಕಂಪನಿ ಶುರು ಮಾಡೋದು, ಹೊಸತನ್ನ ಪ್ರಯತ್ನಿಸೋದನ್ನ ನೋಡಿ ನಾನು ಯಾವಾಗ್ಲೂ ಆಕರ್ಷಿತಳಾಗಿದ್ದೆ. ಹಾಗಾಗಿ ನಂಬಿಕೆಯ ಒಂದು ಹೆಜ್ಜೆ ಇಡೋಕೆ ಮತ್ತು ಇನ್ನೊಂದು ಕಡೆ ಏನಿದೆ ಅಂತ ನೋಡೋಕೆ ನನಗೆ ಪ್ರೇರಣೆ ಸಿಕ್ತು' ಅಂತ ತಮ್ಮ ಹೊಸ ಆಯ್ಕೆಯ ಬಗ್ಗೆ ಅಸ್ಮಿತಾ ಹಿಂದೂಸ್ತಾನ್ ಟೈಮ್ಸ್‌ಗೆ ಹೇಳಿದ್ದಾರೆ.

vuukle one pixel image
click me!
vuukle one pixel image vuukle one pixel image