BSF ನಲ್ಲಿ ಒಂದು ಸಾವಿರಕ್ಕೂ ಅಧಿಕ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ, 1 ಲಕ್ಷದವರೆಗೂ ವೇತನ!

Published : Nov 16, 2026, 02:37 PM IST
Border Security Force

ಸಾರಾಂಶ

ಭಾರತೀಯ ಗಡಿ ಭದ್ರತಾ ಪಡೆಯ ವಿಭಾಗಗಳಲ್ಲಿ ಖಾಲಿ ಇರುವ 1167 ಸಬ್- ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾಗಿ ಉದ್ಯೋಗ ಪಡೆಯುವ ಅಭ್ಯರ್ಥಿಗಳಿಗೆ ಮಾಸಿಕ ಕನಿಷ್ಠದಿಂದ 1 ಲಕ್ಷಕ್ಕೂ ಅಧಿಕ ವೇತನ ಸಿಗಲಿದೆ.

ಭಾರತೀಯ ಗಡಿ ಭದ್ರತಾ ಪಡೆಯ ಬಿಎಸ್‌ಎಫ್, ಸಿಆರ್‌ಪಿಎಫ್, ಐಟಿಬಿಪಿ ಮತ್ತು ಎಸ್‌ಎಸ್‌ಬಿಗಳಲ್ಲಿ 1167 ಸಬ್-ಇನ್‌ಸ್ಪೆಕ್ಟರ್ (ಜಿಡಿ) ಹುದ್ದೆಗಳು ಖಾಲಿ ಇವೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ವಯಸ್ಸಿನ ಅವಶ್ಯಕತೆಗಳು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ಅಧಿಸೂಚನೆಯಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಅಥವಾ ಅಧಿಕೃತ ವೆಬ್‌ತಾಣ bsf.mha.gov.in ನಲ್ಲಿ ಮಾಹಿತಿ ಪಡೆಯಬಹುದು.

ಇಲಾಖೆ ಹೆಸರು : ಗಡಿ ಭದ್ರತಾ ಪಡೆ

ಹುದ್ದೆಗಳ ಸಂಖ್ಯೆ : 1167

ಹುದ್ದೆಗಳ ಹೆಸರು : ಸಬ್- ಇನ್‌ಸ್ಪೆಕ್ಟರ್

ಉದ್ಯೋಗ ಸ್ಥಳ : ಅಖಿಲ ಭಾರತ

ಅಪ್ಲಿಕೇಶನ್ ಮೋಡ್ : ಆನ್ ಲೈನ್ ಮೋಡ್

ಸಂಬಳದ ವಿವರ

ಗಡಿ ಭದ್ರತಾ ಪಡೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ

₹35,400- ₹1,12,400/- ಸಂಬಳ ನೀಡಲಾಗುವುದು.

ವಯೋಮಿತಿ

ಗಡಿ ಭದ್ರತಾ ಪಡೆ ನೇಮಕಾತಿ ಅಧಿಸೂಚನೆಯ ಪ್ರಕಾರ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 32 ವರ್ಷ ವಯಸ್ಸು ಮೀರಬಾರದು.

ಶೈಕ್ಷಣಿಕ ಅರ್ಹತೆ

ಗಡಿ ಭದ್ರತಾ ಪಡೆ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಗಳು / ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು .

ಆಯ್ಕೆ ಪ್ರಕ್ರಿಯೆ

  • ಲಿಖಿತ ಪರೀಕ್ಷೆ (ಸಿಬಿಟಿ ಮೋಡ್)
  • ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ)
  • ದಾಖಲೆಗಳ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ.

ಅರ್ಜಿ ಸಲ್ಲಿಸುವುದು ಹೇಗೆ?

1. ಕೆಳಗಿನ ಲಿಂಕ್/ಅಧಿಕೃತ bsf.nic.inವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ.

2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.

3. ಕೆಳಗಿನ ಆನ್‌ಲೈನ್/ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.

4. ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.

5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)

6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.

7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.

8. ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.

ಪ್ರಮುಖ ದಿನಾಂಕಗಳು

  • ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12-11-2026
  • ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2026

PREV
Read more Articles on
click me!

Recommended Stories

ʻಡೆಸ್ಕ್‌ ಮೇಲೆ ಮಲಗ್ತಾರೆ, ಅತೀ ಸೋಮಾರಿʼ ಅಂತ ಕೆಲ್ಸದಿಂದ ತೆಗೆದು ಹಾಕಿದ್ದ ಕಂಪನಿ, ಕೋರ್ಟ್ ನಲ್ಲಿ ಕೇಸ್ ಗೆದ್ದ ಮಹಿಳೆ
ಅಂದು ಕೆಲಸದಿಂದ ವಜಾಗೊಳಿಸಿದ ಬಾಸ್‌ಗೆ ಇಂದು ಉದ್ಯೋಗದ ಆಫರ್! 20% ಸಂಬಳ ಹೆಚ್ಚಳದೊಂದಿಗೆ ಬಂದ ಮಾಜಿ ಉದ್ಯೋಗಿ, ಮುಂದೇನಾಯ್ತು?