
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ BMRCL ಅಧಿಕೃತ ಅಧಿಸೂಚನೆಯ ಮೂಲಕ ಸಹಾಯಕ ಭದ್ರತಾ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ಹೆಸರು : ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ( BMRCL )
ಹುದ್ದೆಗಳ ಸಂಖ್ಯೆ: 50
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಹುದ್ದೆಯ ಹೆಸರು: ಸಹಾಯಕ ಭದ್ರತಾ ಅಧಿಕಾರಿ
ಸಂಬಳ: 30,000 ರಿಂದ 32,950 ಗ್ರೇಡ್ NE-3
ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿರಬೇಕು.
ಡಿಸೆಂಬರ್ 31-2026 ರಂದು ಅಥವಾ ಅದಕ್ಕೂ ಮೊದಲು ನಿವೃತ್ತರಾಗಲಿರುವ ಮಿಲಿಟರಿ ಸಿಬ್ಬಂದಿಯೂ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು 31 ಅಕ್ಟೋಬರ್ 2026ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ ಮತ್ತು ನಿಮ್ಮ ಅರ್ಜಿಯ ಹಾರ್ಡ್ ಪ್ರತಿ 5-11-2026ರ ಸಂಜೆ 4 ಗಂಟೆಯೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿಗಳನ್ನು ಸ್ಪೀಡ್ ಪೋಸ್ಟ್/ಕೊರಿಯರ್ ಮೂಲಕ ಉಪ ಪ್ರಧಾನ ವ್ಯವಸ್ಥಾಪಕರು (ಮಾನವ ಸಂಪನ್ಮೂಲ) ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ III ಮಹಡಿ, ಬಿಎಂಟಿಸಿ ಸಂಕೀರ್ಣ, ಕೆಎಚ್ ರಸ್ತೆ ಶಾಂತಿನಗರ ಬೆಂಗಳೂರು 560 027ಗೆ ಕಳುಹಿಸಬೇಕು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಅ. 09-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅ.31-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನ.5-2026
ಗುಲಾಬಿ ಬಣ್ಣದ ಮೆಟ್ರೋ ಸಾರ್ವಜನಿಕ ಸೇವೆಗೆ ರೆಡಿಯಾಗಿದ್ದು ಉದ್ಘಾಟನೆಗೆ ದಿನಾಂಕ ಹುಡುಕಲಾಗುತ್ತಿದೆ. ಇದಕ್ಕಾಗಿ ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪತ್ರ ಕೂಡ ಬರೆದಿದ್ದಾರೆ. ಸುರಕ್ಷತಾ ಪರೀಕ್ಷೆಗಳು ನಡೆಯುತ್ತಿದ್ದು, ಕಂಡುಬಂದಿರುವ ದೋಷಗಳನ್ನು ಸರಿಪಡಿಸಲಾಗುತ್ತಿದೆ. ಇದರ ಬೆನ್ನಲ್ಲೇ ಈಗ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋದಲ್ಲಿ ಕಾರ್ಯನಿರ್ವಹಿಸಲು ಭದ್ರತಾ ಸಿಬ್ಬಂದಿಗಳನ್ನು ಹುಡುಕುತ್ತಿದೆ. ಅರ್ಹ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸಿ ಕೆಲಸ ಗಿಟ್ಟಿಸಿಕೊಳ್ಳಿ. ಹೆಚ್ಚಿನ ಮಾಹಿತಿಗೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.