ಯಾವುದೂ ಕೆಲಸ ಇಲ್ಲ ಅಂತ ಬರಿಗೈನಲ್ಲಿ ಬಿಗ್ ಬಾಸ್ ಮನೆಗೆ ಬಂದಿದ್ದ ಗಿಲ್ಲಿ ಗೆದ್ದಿದ್ದು ಇಷ್ಟೊಂದಾ? SUV ಕಾರಿನ ಬೆಲೆ ಎಷ್ಟು?

Published : Jan 19, 2026, 02:10 PM IST
Bigg Boss Gilli Nata

ಸಾರಾಂಶ

ಮಂಡ್ಯದ ಗ್ರಾಮೀಣ ಪ್ರತಿಭೆ ಗಿಲ್ಲಿ ನಟ, ಬಿಗ್ ಬಾಸ್ 12ನೇ ಸೀಸನ್‌ನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ತಮ್ಮ ವಿಶಿಷ್ಟ ಶೈಲಿಯಿಂದ ಕನ್ನಡಿಗರ ಮನಗೆದ್ದ ಅವರು, 50 ಲಕ್ಷ ನಗದು, ಕಿಚ್ಚ ಸುದೀಪ್ ಅವರಿಂದ 10 ಲಕ್ಷ ವಿಶೇಷ ಬಹುಮಾನ ಹಾಗೂ 20 ಲಕ್ಷ ಮೌಲ್ಯದ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬೆಂಗಳೂರು: ಮಂಡ್ಯ ಜಿಲ್ಲೆಯ ಮಳವಳ್ಳಿ ಸಮೀಪದ ದಡದಪುರದ ಗ್ರಾಮೀಣ ಪ್ರತಿಭೆ ಗಿಲ್ಲಿ ನಟ 12ನೇ ಸೀಸನ್‌ ಬಿಗ್ ಬಾಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ತನ್ನ ವಿಭಿನ್ನ ಮ್ಯಾನರಿಸಂ ಹಾಗೂ ಪಂಚಿಂಗ್ ಡೈಲಾಗ್ ಮೂಲಕವೇ ಕನ್ನಡಿಗರ ಮನ ಗೆದ್ದ ಗಿಲ್ಲಿ ನಿರೀಕ್ಷೆಯಂತೆಯೇ ಬಿಗ್ ಬಾಸ್ ಚಾಂಪಿಯನ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಬರಿಗೈನಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದ ಗಿಲ್ಲಿ ನಟ, ಕೋಟ್ಯಾಂತರ ಜನರ ತುಂಬು ಪ್ರೀತಿಯ ಜತೆಗೆ ಲಕ್ಷಾಂತರ ರುಪಾಯಿ ನಗದು ಬಹುಮಾನವನ್ನು ಜೇಬಿಗಿಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

12ನೇ ಸೀಸನ್‌ ಬಿಗ್‌ ಬಾಸ್‌ನಲ್ಲಿ 24 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಅಂತಿಮವಾಗಿ ಗಿಲ್ಲಿ ನಟರಾಜ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಇನ್ನು ರಕ್ಷಿತಾ ಶೆಟ್ಟಿ ಮೊದಲ ರನ್ನರ್ ಅಪ್ ಆದರೆ, ಅಶ್ವಿನಿ ಗೌಡ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಬಾರಿಯ ಬಿಗ್‌ ಬಾಸ್‌ನಲ್ಲಿ ಗಿಲ್ಲಿಯ ಕ್ರೇಝ್ ಹೇಗಿತ್ತು ಅಂದ್ರೆ ಹಳ್ಳಿಯ ಮೂಲೆ ಮೂಲೆಗಳಿಂದ ಹಿಡಿದು ನಗರದ ಗಲ್ಲಿ ಗಲ್ಲಿಯಲ್ಲೂ ಗಿಲ್ಲಿಯದ್ದೇ ಮಾತು ಕೇಳುತ್ತಿತ್ತು. ಆ ಮಟ್ಟಿಗೆ ಗಿಲ್ಲಿ ಬಿಗ್ ಬಾಸ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೊದಲೇ ನಾಲ್ಕೈದು ಟಿ.ವಿ ಶೋಗಳಲ್ಲಿ ಭಾಗವಹಿಸಿದ್ದರೂ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿದ್ದ ಗಿಲ್ಲಿ, ಕೊನೆಗೂ ಇದೀಗ ಬಿಗ್ ಬಾಸ್‌ನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

 

ಬಿಗ್‌ ಬಾಸ್ ಮೂಲಕ ಗಿಲ್ಲಿ ನಟ ಒಟ್ಟು ಗಳಿಸಿದ್ದೆಷ್ಟು?

12ನೇ ಸೀಸನ್ ಬಿಗ್ ಬಾಸ್ ಚಾಂಪಿಯನ್ ಗಿಲ್ಲಿ ನಟನಿಗೆ ಈ ಬಾರಿ ಭರ್ಜರಿ ಜಾಕ್‌ಪಾಟ್ ಹೊಡೆದಿದೆ. ಬಿಗ್ ಬಾಸ್‌ ಮನೆಗೆ ಯಾಕೆ ಬಂದ್ರಿ ಎನ್ನುವ ಪ್ರಶ್ನೆಗೆ ಏನೂ ಕೆಲಸ ಇರಲಿಲ್ಲ. ಹಾಗಾಗಿ ಬಂದೆ ಎಂದಿದ್ದ ಗಿಲ್ಲಿ ಇಂದು ಕೋಟ್ಯಾಂತರ ಕನ್ನಡಿಗರ ಮನೆಮಗನೆನಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಬಿಗ್ ಚಾಂಪಿಯನ್ ಗಿಲ್ಲಿಗೆ ಪ್ರತಿ ಬಾರಿ ವಿನ್ನರ್‌ಗೆ ಸಿಗುವಂತೆ 50 ಲಕ್ಷ ರುಪಾಯಿ ನಗದು ಬಹುಮಾನ ಸಿಕ್ಕಿದೆ. ಇದರ ಜತೆಗೆ ಈ ಬಿಗ್ ಬಾಸ್ ಶೋನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಗಿಲ್ಲಿಗೆ, ಕಿಚ್ಚ ಸುದೀಪ್ ವೈಯುಕ್ತಿಕವಾಗಿ 10 ಲಕ್ಷ ರುಪಾಯಿ ನೀಡುವುದಾಗಿ ಬಿಗ್ ಬಾಸ್ ಮನೆಯಲ್ಲೇ ಘೋಷಿಸಿದರು. ಅಲ್ಲಿಗೆ ಗಿಲ್ಲಿಗೆ 60 ಲಕ್ಷ ರುಪಾಯಿ ನಗದು ಬಹುಮಾನ ಸಿಕ್ಕಿದೆ.

ಗಿಲ್ಲಿಗೆ ಸಿಕ್ ಕಾರಿನ ಬೆಲೆ - ವಿಶೇಷತೆ ಏನು?

ಇನ್ನು ಈ ಬಾರಿ ಗಿಲ್ಲಿಗೆ ಸುಮಾರು 20 ಲಕ್ಷ ರುಪಾಯಿ ಮೌಲ್ಯದ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಕೂಡಾ ಗಿಫ್ಟ್ ಆಗಿ ಸಿಕ್ಕಿದೆ. ಈ ಕಾರು 1490 ಸಿಸಿ ಹೊಂದಿದ್ದು, ಗ್ಲೋಬಲ್ ನ್‌ಕ್ಯಾಪ್‌ನಲ್ಲಿ 5 ಸ್ಟಾರ್ ರೇಟಿಂಗ್ ಹೊಂದಿದೆ. ಇದರ ಜತೆಗೆ ಆರು ಏರ್‌ಬ್ಯಾಗ್ ಕೂಡಾ ಈ ಕಾರು ಹೊಂದಿದೆ. ಈ ಕಾರು 10.50 ಲಕ್ಷ ರುಪಾಯಿ ಆರಂಭಿಕ ಬೆಲೆ ಹೊಂದಿದ್ದು, 19.99 ಲಕ್ಷ ರುಪಾಯಿಗೆ ಟಾಪ್‌ ಮಾಡೆಲ್ ವೇರಿಯಂಟ್ ಲಭ್ಯವಿದೆ.

ಇನ್ನು ಗಿಲ್ಲಿಗೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಒಂದೂವರೆ ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಇದ್ದು, ಬ್ರ್ಯಾಂಡ್ ಕೊಲಾಬರೇಷನ್ ಮೂಲಕವೂ ಗಿಲ್ಲಿ ಇನ್ಮುಂದೆ ಲಕ್ಷ ಲಕ್ಷ ರುಪಾಯಿ ಸಂಪಾದಿಸಲಿದ್ದಾರೆ. ಇದರ ಜತೆಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಸಿನಿಮಾ ಅವಕಾಶಗಳು ಗಿಲ್ಲಿಯನ್ನು ಹುಡುಕಿಕೊಂಡು ಬಂದ್ರೆ ಅಚ್ಚರಿಯೇನಿಲ್ಲ. ಒಟ್ಟಿನಲ್ಲಿ ಬಡವರ ಪ್ರತಿಭಾನ್ವಿತ ಮಕ್ಕಳು ಬೆಳಿಬೇಕು ಎನ್ನುವುದಕ್ಕೆ ಕನ್ನಡಿಗರು ಮತ್ತೊಮ್ಮೆ ಸಾಥ್ ಕೊಟ್ಟಿದ್ದಾರೆ ಎನ್ನುವುದಂತೂ ಸುಳ್ಳಲ್ಲ.

PREV
Read more Articles on
click me!

Recommended Stories

Job Interview: ಕೆಲಸ ಯಾಕೆ ಬದಲಿಸ್ತೀರಾ ಅಂದ್ರೇನು ಉತ್ತರಿಸಬೇಕು? ಸಂದರ್ಶನದಲ್ಲಿ ಈ ತಪ್ಪಂತೂ ಮಾಡಲೇ ಬೇಡಿ!
ವೃತ್ತಿಜೀವನಕ್ಕೆ ಹೊಸ ತಿರುವು, ಪ್ರಸಾರ ಭಾರತಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ, 50000 ರೂ ವರೆಗೆ ವೇತನ!