DA Hike: ಡಿಎ ಏರಿಕೆ ಬಗ್ಗೆ ಬಿಗ್ ಅಪ್ಡೇಟ್… ಹೆಚ್ಚಳವಾಗಲಿದೆ ಕೇಂದ್ರ ಸರ್ಕಾರಿ ನೌಕರರ ಸಂಬಳ

By Roopa Hegde  |  First Published Aug 29, 2024, 3:30 PM IST

ಸೆಪ್ಟೆಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳವಾಗುವ ಸಾಧ್ಯತೆ ಇದೆ. ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರವು ಡಿಎಯನ್ನು ಶೇಕಡಾ 3 ರಷ್ಟು ಹೆಚ್ಚಿಸಬಹುದು, ಇದು ನೌಕರರ ಸಂಬಳದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗುತ್ತದೆ.


ಆಗಸ್ಟ್ ತಿಂಗಳು (August month) ಮುಗಿತಾ ಇದೆ. ಇನ್ನೇನು ಎರಡು ದಿನಗಳ ನಂತ್ರ ಸೆಪ್ಟೆಂಬರ್ ತಿಂಗಳಿಗೆ ನಾವು ಕಾಲಿಡ್ತಿದ್ದೇವೆ. ಗಣೇಶ ಚತುರ್ಥಿ ( Ganesh Chaturthi) ಸೇರಿದಂತೆ ಹಬ್ಬದ ಸ್ವಾಗತಕ್ಕೆ ತಯಾರಿ ನಡೆಸುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ (Central Government Employees) ಈ ಸಮಯದಲ್ಲಿ ಮತ್ತಷ್ಟು ಖುಷಿ ಸುದ್ದಿ ಸಿಗುವ ನಿರೀಕ್ಷೆ ಹೆಚ್ಚಿದೆ. ಕೇಂದ್ರ ಸರ್ಕಾರ (Central Govt) ವರ್ಷದ ಎರಡನೇ ಡಿಎ ಹೆಚ್ಚಳ (DA Increase) ಘೋಷಣೆ ಮಾಡುವ ಸಾಧ್ಯತೆ ಇದೆ. ಮಾಧ್ಯಮಗಳ ವರದಿ ಪ್ರಕಾರ, ಸರ್ಕಾರ ಸೆಪ್ಟೆಂಬರ್ ನಲ್ಲಿ ಡಿಎ ಏರಿಕೆ ಘೋಷಣೆಯಾಗಲಿದೆ. 

ಕೇಂದ್ರ ಸರ್ಕಾರ ಪ್ರತಿ ವರ್ಷ ಎರಡು ಬಾರಿ ತನ್ನ ನೌಕರರ ಡಿಎಯನ್ನು ಏರಿಸುತ್ತದೆ. ಮಾರ್ಚ್ ಮತ್ತು ಸೆಪ್ಟೆಂಬರ್ ನಲ್ಲಿ ತುಟ್ಟಿ ಭತ್ಯೆ ಹೆಚ್ಚಳದ ಘೋಷಣೆ ಮಾಡುತ್ತದೆ. ಜನವರಿ ಮತ್ತು ಜುಲೈನಲ್ಲಿ ಇದು ಜಾರಿಗೆ ಬರುತ್ತದೆ. ಈ ಬಾರಿ ಡಿಎ ಮತ್ತು ಡಿಆರ್ ಹೆಚ್ಚಳದ ಬಗ್ಗೆ ಯಾವುದೇ ಘೋಷಣೆ ಇನ್ನೂ ಹೊರಗೆ ಬಿದ್ದಿಲ್ಲ. ಸೆಪ್ಟೆಂಬರ್ ನಲ್ಲಿ ಹೆಚ್ಚಳದ ಸುದ್ದಿ ಸಿಗಲಿದೆ ಎಂಬ ನಿರೀಕ್ಷೆ ಹೆಚ್ಚಿದೆ. 

Tap to resize

Latest Videos

undefined

ಮುಂದಿನದೊಂದು ದಶಕದಲ್ಲಿ ವಿಶ್ವವನ್ನೇ ಆಳುವ ಉದ್ಯೋಗಗಳಿವು!

ಮಾಧ್ಯಮಗಳ ವರದಿ ಪ್ರಕಾರ, ನರೇಂದ್ರ ಮೋದಿ (Narendra Modi) ಸರ್ಕಾರ ಈ ಬಾರಿ ಡಿಎಯನ್ನು ಶೇಕಡಾ 3ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಿ ನೌಕರರಿಗೆ ಜನವರಿ ಒಂದರಂದು ಕೇಂದ್ರ ಭರ್ಜರಿ ಉಡುಗೊರೆ ನೀಡಿತ್ತು. ನೌಕರರ ತುಟ್ಟಿ ಭತ್ಯೆಯನ್ನು ಶೇಕಡಾ 4ರಷ್ಟು ಏರಿಕೆ ಮಾಡಿ ಅದನ್ನು ಶೇಕಡಾ 50ಕ್ಕೆ ತಂದು ನಿಲ್ಲಿಸಿತ್ತು. ಕೇಂದ್ರ ನೌಕರರ ಡಿಎ ಈಗ ಶೇಕಡಾ 50ರಷ್ಟಿದೆ. ಡಿಆರ್ ನಲ್ಲಿಯೂ ಏರಿಕೆ ಆಗಿದ್ದರಿಂದ ಪಿಂಚಣಿದಾರರು ಖುಷಿಯಾಗಿದ್ದರು. ಇದಾದ್ಮೇಲೆ ಮನೆ ಬಾಡಿಗೆ ಭತ್ಯೆ (House Rent Allowance) ಸೇರಿದಂತೆ ಇತರ ಭತ್ಯೆಯಲ್ಲೂ ಏರಿಕೆಯಾಗಿತ್ತು. ಕೊನೆಯದಾಗಿ ಕೇಂದ್ರ ಸರ್ಕಾರ ಈ ವರ್ಷ ಮಾರ್ಚ್ ನಲ್ಲಿ ತುಟ್ಟಿ ಭತ್ಯೆಯನ್ನು ಹೆಚ್ಚಿಸಿತ್ತು. ಅದು ಜನವರಿ ಒಂದರಿಂದ ಜಾರಿಗೆ ಬಂದಿತ್ತು. 

ಒಂದ್ವೇಳೆ ಈಗ ನರೇಂದ್ರ ಮೋದಿ ಸರಕಾರ, ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 3ರಷ್ಟು ಹೆಚ್ಚಿಸಿದರೆ, ಈಗಿರುವ ಶೇಕಡಾ 50ರಿಂದ ಶೇಕಡಾ 53ಕ್ಕೆ ಡಿಎ ಏರಿಕೆಯಾಗಲಿದೆ. ಇದು ನೌಕರರ ಸಂಬಳ ಹೆಚ್ಚಿಸಲಿದೆ. ಈವರೆಗೆ ಡಿಎ ಹೆಚ್ಚಳದ ಬಗ್ಗೆ ಸರ್ಕಾರದಿಂದ ಯಾವುದೇ ಹೇಳಿಕೆ ಬಂದಿಲ್ಲ.  

ನೌಕರರ ಸಂಬಳ ಎಷ್ಟು ಹೆಚ್ಚಾಗಲಿದೆ? : ಡಿಎ ಹೆಚ್ಚಳದಿಂದ ನೌಕರರ ಸಂಬಳದಲ್ಲಿ ಏರಿಕೆ ಕಾಣಬಹುದಾಗಿದೆ. ಒಂದ್ವೇಳೆ 18 ಸಾವಿರ ರೂಪಾಯಿ ಮೂಲ ವೇತನ ಹೊಂದಿರುವ ಕೇಂದ್ರ ಸರ್ಕಾರಿ ನೌಕರನ ಡಿಎ ಶೇಕಡಾ 3ರಷ್ಟು ಹೆಚ್ಚಳವಾದ್ರೆ ಆತನ ತಿಂಗಳ ಸಂಬಳ 540 ರೂಪಾಯಿ ಹೆಚ್ಚಾಗಲಿದೆ. ಅಂದ್ರೆ ಆತ ವರ್ಷಕ್ಕೆ 6,480 ರೂಪಾಯಿ ಹೆಚ್ಚಿನ ಆದಾಯ ಪಡೆಯುತ್ತಾನೆ. ಅದೇ ನೌಕರನ ಮೂಲ ಸಂಬಳ 56,900 ರೂಪಾಯಿ ಆಗಿದ್ದರೆ, ಡಿಎ ಹೆಚ್ಚಳದ ನಂತರ, ಅವನ ವೇತನ ತಿಂಗಳಿಗೆ 1,707 ರೂಪಾಯಿ ಹೆಚ್ಚಾಗಲಿದೆ. ವರ್ಷಕ್ಕೆ 20,484 ರೂಪಾಯಿ ಹೆಚ್ಚಿನ ಸಂಬಳವನ್ನು ಆತ ಪಡೆಯುತ್ತಾನೆ. 

ಟಾಟಾ ಸಮೂಹದಿಂದ 4,000 ಮಹಿಳೆಯರಿಗೆ ಉದ್ಯೋಗಾವಕಾಶ, 10ನೇ ತರಗತಿ ಆಗಿದ್ರೆ ಸಾಕು

ಕೊರೊನಾ ಸಮಯದಲ್ಲಿ ಕೇಂದ್ರ ಸರ್ಕಾರ, ಡಿಎ ಹೆಚ್ಚಳಕ್ಕೆ ಕಠಿವಾಣ ಹಾಕಿತ್ತು. 18 ತಿಂಗಳ ಹಣವನ್ನು ಸರ್ಕಾರ ಇನ್ನೂ ಬಾಕಿ ಉಳಿಸಿಕೊಂಡಿದ್ದು, ನೌಕರರಿಗೆ ಈ ಹಣ ಪಾವತಿಯಾಗಿಲ್ಲ. ಈ ಬಾರಿ ಸರ್ಕಾರ ಫ್ರೀಜ್ ಮಾಡಿದ್ದ ಹಣವನ್ನು ಬಿಡುಗಡೆ ಮಾಡಲಿದೆ ಎಂಬ ನಿರೀಕ್ಷೆಯಲ್ಲಿ ನೌಕರರಿದ್ದಾರೆ. ತುಟ್ಟಿಭತ್ಯೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನದ ಒಂದು ಅಂಶವಾಗಿದೆ. ಡಿಎಯನ್ನು ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುತ್ತದೆ. ಡಿಆರ್ ಅನ್ನು ಪಿಂಚಣಿದಾರ ನಿವೃತ್ತ ನೌಕರರಿಗೆ ನೀಡಲಾಗುತ್ತದೆ.     

click me!