ಕೆಎಎಸ್‌ ಪರೀಕ್ಷೆ 2 ತಿಂಗಳು ಮುಂದೂಡಿಕೆ..?

By Kannadaprabha NewsFirst Published Nov 16, 2020, 7:54 AM IST
Highlights

ಐಎಎಸ್‌ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಆಕಾಂಕ್ಷಿಗಳ ಹಿತದೃಷ್ಟಿಯಿಂದ ಕೆಎಎಸ್‌ ಮುಖ್ಯಪರೀಕ್ಷೆ ದಿನಾಂಕವನ್ನು ಕನಿಷ್ಠ ಎರಡು ತಿಂಗಳು ಮುಂದೂಡಲು ಆಗ್ರಹ

ಎರಡೂ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ನೂರಾರು ಅಭ್ಯರ್ಥಿಗಳ ಪೋಷಕರು ಆಗ್ರಹ

ಬೆಂಗಳೂರು (ನ.16) :  ರಾಜ್ಯದಿಂದ ಐಎಎಸ್‌ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಆಕಾಂಕ್ಷಿಗಳ ಹಿತದೃಷ್ಟಿಯಿಂದ ಕೆಎಎಸ್‌ ಮುಖ್ಯಪರೀಕ್ಷೆ ದಿನಾಂಕವನ್ನು ಕನಿಷ್ಠ ಎರಡು ತಿಂಗಳಾದರೂ ಮುಂದೂಡಬೇಕು ಎಂದು ಎರಡೂ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ನೂರಾರು ಅಭ್ಯರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ. ಇವರ ಕೂಗಿಗೆ ಕವಿ, ಗಣ್ಯರೂ ದನಿಗೂಡಿಸಿದ್ದಾರೆ.

ಐಎಎಸ್‌ ಮುಖ್ಯ ಪರೀಕ್ಷೆಗೆ ಮುನ್ನವೇ ಕೆಎಎಸ್‌ ಮುಖ್ಯ ಪರೀಕ್ಷೆಗೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ದಿನಾಂಕ ನಿಗದಿ ಮಾಡಿದ್ದು, ಆಕಾಂಕ್ಷಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಕೆಎಎಸ್‌ ಪರೀಕ್ಷೆ ಮುಂಚಿತವಾಗಿ ನಡೆಯುವುದರಿಂದ ಐಎಎಸ್‌ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಭ್ಯರ್ಥಿಗಳು ಅಧ್ಯಯನ ನಡೆಸಲು ಸಾಧ್ಯವಾಗದಂತಾಗಿದೆ. ಆದ್ದರಿಂದ ಕೆಎಎಸ್‌ ಮುಖ್ಯ ಪರೀಕ್ಷೆಯ ದಿನಾಂಕವನ್ನು ಎರಡು ತಿಂಗಳ ಕಾಲ ಮುಂದೂಡಬೇಕು. ಅಲ್ಲದೆ, ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಯಾವುದೇ ಗೊಂದಲಕ್ಕೆ ಸಿಲುಕದಂತೆ ತಯಾರಾಗಲು ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನದಲ್ಲಿ ಶೀಘ್ರದಲ್ಲಿ ಸರ್ಕಾರ ಮತ್ತು ಕೆಪಿಎಸ್‌ಸಿ ನಿರ್ಧಾರ ಕೈಗೊಳ್ಳಬೇಕು. ಕೆಎಎಸ್‌ ಪರೀಕ್ಷಾ ದಿನಾಂಕ ಮುಂದೂಡುವಂತೆ ಸರ್ಕಾರ ಕೆಪಿಎಸ್‌ಸಿಗೆ ಸೂಚನೆ ನೀಡಬೇಕು. ಕೆಪಿಎಸ್‌ಸಿ ಸಹಾ ಇದಕ್ಕೆ ಸಮ್ಮತಿ ನೀಡಬೇಕು ಎಂದು ಹಲವು ಅಭ್ಯರ್ಥಿಗಳು ಮತ್ತವರ ಪೋಷಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು, ಹೈದ್ರಾಬಾದ್‌ನಲ್ಲಿ ಗುತ್ತಿಗೆ ಉದ್ಯೋಗಗಳು ಹೆಚ್ಚು? ...

ದೇಶದಲ್ಲಿ ಸರ್ಕಾರಿ ಹುದ್ದೆಗಳಲ್ಲಿ ಐಎಎಸ್‌ ಅತ್ಯುನ್ನತ ಹುದ್ದೆ. ಈ ಹುದ್ದೆಗೆ ಆಯ್ಕೆಯಾಗಲು ಅತ್ಯಂತ ಶ್ರಮ ಪಡಬೇಕು. ಆದರೆ, ಕೆಎಎಸ್‌ ಮುಖ್ಯ ಪರೀಕ್ಷೆಗೆ ದಿನಾಂಕ ಪ್ರಕಟ ಮಾಡಿರುವುದನ್ನು ಗಮನಿಸಿದರೆ, ರಾಜ್ಯದ ಅಭ್ಯರ್ಥಿಗಳು ಕೇಂದ್ರ ಸೇವೆಗೆ ಹೋಗಬಾರದು ಎಂಬ ಉದ್ದೇಶವನ್ನು ಕೆಪಿಎಸ್‌ಸಿ ಹೊಂದಿರುವಂತೆ ಕಾಣುತ್ತಿದೆ. ಇದೇ ಕಾರಣದಿಂದ ಎರಡೂ ಪರೀಕ್ಷೆಗಳ ನಡುವೆ ಕೇವಲ ಎರಡು ದಿನ ಮಾತ್ರ ಅಂತರ ಉಳಿಸಿದೆ. ಈ ಬೆಳವಣಿಗೆ ಅಭ್ಯರ್ಥಿಗಳು ಒತ್ತಡದಲ್ಲಿ ಸಿಲುಕುವಂತೆ ಮಾಡಿದೆ ಎಂದು ಅಭ್ಯರ್ಥಿಯೊಬ್ಬರ ತಂದೆ ಚೆನ್ನಕೃಷ್ಣ ಎಂಬುವರು ಆರೋಪಿಸಿದ್ದಾರೆ.

ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ ಕರ್ನಾಟಕದಿಂದ ಕೇಂದ್ರ ನಾಗರಿಕ ಸೇವೆಗಳಿಗೆ ಆಯ್ಕೆಯಾಗುವವರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಹೀಗಿರುವಾಗ ಐಎಎಸ್‌ ಮುಖ್ಯ ಪರೀಕ್ಷೆಗೆ ಆಯ್ಕೆಯಾಗಿರುವವರಿಗೆ ನೆರವಾಗುವ ರೀತಿಯಲ್ಲಿ ಕೆಎಎಸ್‌ ಮುಖ್ಯ ಪರೀಕ್ಷೆಗಳ ದಿನಾಂಕ ನಿಗದಿ ಮಾಡಬೇಕು. ಆದರೆ, ಇದಕ್ಕೆ ತದ್ವಿರುದ್ಧವಾಗಿ ಕೆಪಿಎಸ್‌ಸಿ ನಡೆದುಕೊಳ್ಳುತ್ತಿದೆ. ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ದಿನಾಂಕ ನಿಗದಿ ಪಡಿಸಿರುವ ಅಂಶ ಗೊತ್ತಿದ್ದರೂ, ಇತ್ತ ಗಮನಿಸದೆ ಕೆಎಎಸ್‌ ಮುಖ್ಯ ಪರೀಕ್ಷೆಗೆ ಕೆಪಿಎಸ್‌ಸಿ ದಿನಾಂಕ ಪ್ರಕಟಿಸುವ ಮೂಲಕ ರಾಜ್ಯದ ಅಭ್ಯರ್ಥಿಗಳಿಗೆ ತೊಂದರೆ ನೀಡುತ್ತಿದೆ ಎಂದು ದೂರಿದ್ದಾರೆ.

click me!