SI ಹುದ್ದೆಗೆ ಅರ್ಜಿ ಕರೆದ ಕರ್ನಾಟಕ ಪೊಲೀಸ್ ಇಲಾಖೆ

By Web Desk  |  First Published Jul 27, 2019, 2:03 PM IST

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಬ್ ಇನ್ಸ್‌ಪೆಕ್ಟರ್ ಹುದ್ದಿಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಪುರುಷರು ಹಾಗೂ ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.


ಬೆಂಗಳೂರು [ಜು.27]: ಕರ್ನಾಟಕ ಪೊಲೀಸ್ ಇಲಾಖೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಸಬ್ ಇನ್ಸ್‌ಪೆಕ್ಟರ್ ಪೋಸ್ಟಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಇದಕ್ಕೂ ಕೆಳಗಿನ ಹುದ್ದಿಯಲ್ಲಿ ಸೇವೆ ಸಲ್ಲಿಸುತ್ತಿರುವವರೂ ಅರ್ಜಿ ಸಲ್ಲಿಸಬಹುದು. 

ಅರ್ಜಿ ಸಲ್ಲಿಸಲು ಆಸಕ್ತರು ಪದವಿ ವ್ಯಾಸಂಗ ಮಾಡಿದ್ದು, ವಯೋಮಿತಿ ಆಗಸ್ಟ್ 5,  2019 ಕ್ಕೆ ಅನ್ವಯಿಸುವಂತೆ 21 ವರ್ಷ ತುಂಬಿರಬೇಕು. ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ 28 ವರ್ಷ, SC, ST - 30 ವರ್ಷವಿದೆ. 

Tap to resize

Latest Videos

undefined

ಮೀಸಲು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ 26 ವರ್ಷ, SC-ST-  28. ಸೇವಾನಿರತರಿಗೆ 35 ವರ್ಷ ನಿಗದಿಗೊಳಿಸಲಾಗಿದೆ. 

*ಪೊಲೀಸ್ ಸಬ್ ಇನ್ಸ್ ಪೆಕ್ಟರ್ 
ಪುರುಷರು - 138
ಮಹಿಳೆಯರು - 41
ಸೇವೆಯಲ್ಲಿ ಇರುವವರು - 21

*ಮೀಸಲು ಪೊಲೀಸ್ ಸಬ್ ಇನ್ಸ್ ಪೆಕ್ಟರ್ 
ಪುರುಷರು - 37
ಸೇವೆಯಲ್ಲಿ ಇರುವವರು 3 

ಹೆಚ್ಚಿನ ಮಾಹಿತಿಗೆ  https://www.ksp.gov.in/ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ. 

click me!