ಆಂಧ್ರ ಪೊಲೀಸ್ ಪೇದೆ ಹುದ್ದೆಗೆ ವೈದ್ಯರು, ಎಲ್ಎಲ್‌ಬಿ, ಎಂಟೆಕ್ ಪದವೀಧರರಿಂದ ಅತೀ ಹೆಚ್ಚು ಅರ್ಜಿ!

By Suvarna News  |  First Published Jan 21, 2023, 8:47 PM IST

ಖಾಸಗಿ ಉದ್ಯೋಗದಲ್ಲಿ ಭದ್ರತೆ ಕಾಡುತ್ತಿದೆ. ತಕ್ಷಣ ವಜಾ, ಆರ್ಥಿಕ ಹಿಂಜರಿದಿಂದ ಉದ್ಯೋಗ ಕಡಿತ ನಡೆಯುತ್ತಲೇ ಇದೆ. ಹೀಗಾಗಿ ಇದೀಗ ಯಾವುದೇ ಸರ್ಕಾರಿ ಹುದ್ದೆ ಭರ್ತಿಗೆ ಅರ್ಜಿ ಕರೆದರು ಸಾಕು, ಡಬಲ್ ಡಿಗ್ರಿ ಸೇರಿದಂತೆ ಎಲ್ಲರೂ ಮುಗಿಬೀಳುತ್ತಿದ್ದಾರೆ. ಇದೀಗ ಪೊಲೀಸ್ ಪೇದೆ ಹುದ್ದಗೆ ಬಂದಿರುವ ಅರ್ಜಿಗಳು ಅಚ್ಚರಿ ತಂದಿದೆ.


ವಿಶಾಖಪಟ್ಟಣಂ(ಜ.21):  ಪೊಲೀಸ್ ಪೇದೆ ಹುದ್ದೆ ಭರ್ತಿಗೆ ಅರ್ಜಿ ಕರೆಯಲಾಗಿದೆ. ಇದೇ ಜನವರಿ 22ರಂದು ಪರೀಕ್ಷೆ ನಡೆಯಲಿದೆ. ಆದರೆ ಪೊಲೀಸ್ ಪೇದೆಗೆ ಹುದ್ದೆಗೆ ಬಂದಿರುವ ಅತೀ ಹೆಚ್ಚು ಅರ್ಜಿಗಳು ಪರಿವೀಕ್ಷಕರ ಅಚ್ಚರಿಗೆ ಕಾರಣವಾಗಿದೆ. ಆಂಧ್ರ ಪ್ರದೇಶ ಪೊಲೀಸ್ ಪೇದೆ ಹುದ್ದೆಗೆ ಈ ಬಾರಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಎಂಬಿಬಿಎಸ್ ಮುಗಿಸಿರುವ ವೈದ್ಯ ಪದವೀಧರರು, ಎಲ್‌ಎಲ್‌ಬಿ, ಎಂಟೆಕ್ ಪದವೀಧರರು ಅರ್ಜಿ ಹಾಕಿದ್ದಾರೆ. ಇಷ್ಟೇ ಅಲ್ಲ ಪಿಎಚ್‌ಡಿ ಮುಗಿಸಿರುವ 10 ಮಂದಿ ಪೊಲೀಸ್ ಪೇದೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. 

ಈ ಕುರಿತು ಆಂಧ್ರಪ್ರದೇಶ ಪೊಲೀಸ್ ನೇಮಕಾತಿ ವಿಭಾಗ ಮಹತ್ವದ ಮಾಹಿತಿ ಬಹಿರಂಗಪಡಿಸಿದೆ. ಆಂಧ್ರ ಪ್ರದೇಶದ 6,400 ಪೊಲೀಸ್ ಪೇದೆ ಹುದ್ದೆಗೆ ಜನವರಿ 20ಕ್ಕೆ ಪರೀಕ್ಷೆ ನಡೆಯಲಿದೆ. ಇದಕ್ಕಾಗಿ 10 ಪಿಎಚ್‌ಡಿ ಪಡೆದಿರುವ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು 930 ಎಂಟೆಕ್ ಪದವೀಧರರು ಅರ್ಜಿ ಸಲ್ಲಿಸಿದ್ದಾರೆ. ಇನ್ನು 5,284 ಎಂಬಿಎ ಪದವೀಧರರು, 4,365 ಎಂಎಸ್‌ಸಿ ಪದವೀಧರರು, 95 ಎಲ್‌ಎಲ್‌ಬಿ ಪದವೀಧರರು ಅರ್ಜಿ ಸಲ್ಲಿಸಿದ್ದಾರೆ.

Tap to resize

Latest Videos

ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆ ವಯೋಮಿತಿ 2 ವರ್ಷ ಹೆಚ್ಚಳ

ಒಟ್ಟಾರೆ 13,961 ಉನ್ನತ ವ್ಯಾಸಂಗ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. 1,55,537 ಪದವೀದರರು ಸೇರಿದಂತೆ 5 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿ ಖಾಲಿ ಇರುವ ಹುದ್ದೆ ಸಂಖ್ಯೆ  6,400 ಮಾತ್ರ. ಇದರಲ್ಲಿ 3,95,415 ಪುರುಷ ಅಭ್ಯರ್ಥಿಗಳಾಗಿದ್ದರೆ, 1,08,071 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. 

ಆಂಧ್ರ ಪ್ರದೇಶದಲ್ಲಿ ಇದೀಗ ಚರ್ಚೆಯೊಂದು ಶುರುವಾಗಿದೆ. ಉನ್ನಂತ ವ್ಯಾಸಾಂಗ, ಪಿಎಚ್‌ಡಿ ಸೇರಿದಂತೆ ಡಬಲ್ ಡಿಗ್ರಿ ಪೂರೈಸಿದವರೇ ಪೊಲೀಸ್ ಪೇದೆ ಹುದ್ದೆಗೆ ಅರ್ಜಿ ಯಾಕೆ ಸಲ್ಲಿಸಿದ್ದಾರೆ. ಆಂಧ್ರದಲ್ಲಿ ನಿರುದ್ಯೋಗದ ಸಮಸ್ಯೆ ಕಾಡುತ್ತಿದೆಯಾ? ಸರ್ಕಾರ ಯುವಕರಿಗೆ ಸೂಕ್ತ ಉದ್ಯೋಗ ಕೊಡುವಲ್ಲಿ ವಿಫಲವಾಗಿದೆಯಾ? ಈ ಕುರಿತು ಸಾಲು ಸಾಲು ಚರ್ಚಗಳು ನಡೆಯುತ್ತಿದೆ.

ಯುವ ಸಮೂಹದಲ್ಲಿ ಉದ್ಯೋಗ ಭದ್ರತೆ ಕುರಿತು ಚರ್ಚೆಗಳು ನಡೆಯುತ್ತಿದೆ. ಇತ್ತೀಚೆಗೆ ಖಾಸಗಿ ಕಂಪನಿಗಳು ಉದ್ಯೋಗ ಕಡಿತ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಪರಿಣಾಮವಾಗಿ ಯುವ ಸಮೂಹ ಸರ್ಕಾರಿ ಹುದ್ದೆಗಳತ್ತ ಒಲವು ತೋರಿಸುತ್ತಿದ್ದಾರೆ ಅನ್ನೋ ವಾದಗಳು ಹುಟ್ಟಿಕೊಂಡಿದೆ.

ಈ ವರ್ಷ 5 ಸಾವಿರ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿ: ಸಚಿವ ಆರಗ ಜ್ಞಾನೇಂದ್ರ

ಗೂಗಲ್‌ನಿಂದ 12000, ಸ್ವಿಗ್ಗಿಯಿಂದ 380 ನೌಕರರು ವಜಾ
 ಜಾಗತಿಕ ಆರ್ಥಿಕ ಹಿಂಜರಿಕೆ ಭೀತಿಯಿಂದ ದೊಡ್ಡ ದೊಡ್ಡ ಕಂಪನಿಗಳು ನೌಕರರನ್ನು ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆ ಇನ್ನಷ್ಟುವೇಗ ಪಡೆದಿದ್ದು, ಗೂಗಲ್‌ನ ಪೋಷಕ ಕಂಪನಿಯಾದ ಆಲ್ಫಾಬೆಟ್‌ 12,000 ನೌಕರರನ್ನು ಹಾಗೂ ಸ್ವಿಗ್ಗಿ ಕಂಪನಿ 380 ನೌಕರರನ್ನು ವಜಾಗೊಳಿಸಲು ನಿರ್ಧರಿಸಿವೆ. ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿರುವ ಆಲ್ಫಾಬೆಟ್‌ 12,000 ನೌಕರರನ್ನು ವಜಾಗೊಳಿಸಲಿದೆ ಎಂದು ಅದರ ಸಿಇಒ ಸುಂದರ್‌ ಪಿಚೈ ಎಲ್ಲಾ ನೌಕರರಿಗೆ ಮೆಮೋ ಕಳುಹಿಸಿದ್ದಾರೆ. ಪ್ರತಿಸ್ಪರ್ಧಿ ಕಂಪನಿ ಮೈಕ್ರೋಸಾಫ್‌್ಟ10,000 ನೌಕರರನ್ನು ವಜಾಗೊಳಿಸುವ ಸುದ್ದಿ ಬಂದ ಮರುದಿನವೇ ಗೂಗಲ್‌ ಕಂಪನಿ ಜಗತ್ತಿನಾದ್ಯಂತ 12,000 ನೌಕರರನ್ನು ವಜಾಗೊಳಿಸುವ ಮಾಹಿತಿ ಬಹಿರಂಗಗೊಂಡಿದೆ.

click me!