ಕೆಲಸ ಕಳೆದುಕೊಂಡು ಕಣ್ಣೀರಾಕಿದ ಬೆಂಗಳೂರಿನ ಅಮೆಜಾನ್ ಉದ್ಯೋಗಿ

By Anusha KbFirst Published May 16, 2023, 6:41 PM IST
Highlights

ಬೆಂಗಳೂರು ಕಚೇರಿಯಲ್ಲಿ ಹಿರಿಯ ಉತ್ಪನ್ನ ಅನುಸರಣೆ (enior product compliance) ಸಹಾಯಕಳಾಗಿ ಕೆಲಸ ಮಾಡುತ್ತಿರುವ ಮಹಿಳೆಯೂ ಕಳೆದ ತಿಂಗಳು ಕೆಲಸ ಕಳೆದುಕೊಂಡಿದ್ದಾರೆ

ಬೆಂಗಳೂರು: ವಿಶ್ವದಾದ್ಯಂತ ಹಣದುಬ್ಬರದ ಸಮಸ್ಯೆಯಿಂದಾಗಿ ಅನೇಕ ಕಂಪನಿಗಳು ವೆಚ್ಚ ಸರಿದೂಗಿಸುವ ಕಡಿಮೆಗೊಳಿಸುವ ಸಲುವಾಗಿ ಅನೇಕ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದು, ಅನೇಕರು ದಿಢೀರ್ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ.ಈ ವರ್ಷದ ಆರಂಭದಲ್ಲಿಯೇ  ಇ-ಕಾಮರ್ಸ್ ದೈತ್ಯ ಅಮೆಜಾನ್  ಎರಡನೇ ಸುತ್ತಿನ ಸಾಮೂಹಿಕ ಉದ್ಯೋಗ ಕಡಿತ ಘೋಷಣೆ ಮಾಡಿತ್ತು. ಅದರ ಭಾಗವಾಗಿ ಅಮೆಜಾನ್ ಭಾರತದಲ್ಲಿ ಕನಿಷ್ಠ 500 ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯಲ್ಲಿದೆ. 

ಈ ವಜಾಗೊಳಿಸುವ ಕಾರ್ಯವೂ ಅಮೆಜಾನ್ ವೆಬ್ ಸೇವೆ (AWS), ಮಾನವ ಸಂಪನ್ಮೂಲ(HR) ಮತ್ತು ಬೆಂಬಲಿಗ ಕಾರ್ಯಗಳು (Support System) ಸೇರಿದಂತೆ ವಿವಿಧ ವಿಭಾಗಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ವಿವಿ ಮೂಲಗಳು ದೃಢಪಡಿಸಿವೆ. ಈ ಉದ್ಯೋಗ ಕಡಿತದ ಭಾಗವಾಗಿ ಅಮೆಜಾನ್‌ನ ಬೆಂಗಳೂರು ಕಚೇರಿಯಲ್ಲಿ ಹಿರಿಯ ಉತ್ಪನ್ನ ಅನುಸರಣೆ (enior product compliance) ಸಹಾಯಕಳಾಗಿ ಕೆಲಸ ಮಾಡುತ್ತಿರುವ ಮಹಿಳೆಯೂ ಕಳೆದ ತಿಂಗಳು ಕೆಲಸ ಕಳೆದುಕೊಂಡಿದ್ದಾರೆ. ಈ ಹಠಾತ್ ಉದ್ಯೋಗ ಕಡಿತದ ಆಘಾತದಿಂದ ಹೊರಬರಲು ತನಗೆ ಸಾಧ್ಯವಾಗುತ್ತಿಲ್ಲ ತಾನು ದುಃಖ, ಕೋಪ ಮತ್ತು ಅನಿಶ್ಚಿತತೆ ಸೇರಿದಂತೆ ಹಲವಾರು ಭಾವನೆಗಳಿಂದ ತೊಳಲಾಡುತ್ತಿದ್ದೇನೆ ಎಂದು ಅವರು ಲಿಂಕ್ಡಿನ್‌ನಲ್ಲಿ ಹೇಳಿಕೊಂಡಿದ್ದಾರೆ. 

Meta Layoffs: ಎರಡನೇ ಸುತ್ತಿನಲ್ಲಿ 10,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಮೆಟಾ!

ನನ್ನ ಕೆಲಸದ ನಷ್ಟ, ನನ್ನ ಸಹೋದ್ಯೋಗಿಗಳೊಂದಿಗೆ ನಾನು ನಿರ್ಮಿಸಿದ ಬಂಧಗಳು ಮತ್ತು ನನ್ನ ಕೆಲಸದಲ್ಲಿ ನಾನು ಭಾವಿಸಿದ ಉದ್ದೇಶದಿಂದ ನಾನು ದುಃಖಿತನಾಗಿದ್ದೇನೆ, ಎಂದು ಅವರು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.  ನಾನು ಬೇಸರಗೊಂಡಿದ್ದು, ಭವಿಷ್ಯ ಏನಾಗಲಿದೆ ಎಂಬುದರ ಕುರಿತು ನನಗೆ ಅನಿಶ್ಚಿತತೆಯ ಭಾವ ಶುರುವಾಗಿದೆ. ಬೆಂಗಳೂರಿನ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ಓದಿದ ಈ ಮಹಿಳೆ ಅಮೆಜಾನ್‌ನಲ್ಲಿ ಒಂದು ವರ್ಷ ಕಳೆದಿದ್ದು, ಅಮೆಜಾನ್‌ ಅವರ ಮೊದಲ ಕೆಲಸವಾಗಿತ್ತು. 

ಇದು ನನ್ನೊಬ್ಬಳ ಅನುಭವವಲ್ಲ, ಪ್ರತಿ ವರ್ಷ ಅನೇಕ ಜನರನ್ನು ವಜಾಗೊಳಿಸಲಾಗುತ್ತದೆ ಮತ್ತು ಇದು ಕಷ್ಟಕರ ಸಮಯ. ಈ ಸಮಯದಲ್ಲಿ ನನ್ನ ಸ್ನೇಹಿತರು ಮತ್ತು ಕುಟುಂಬ ನೀಡಿರುವ ಬೆಂಬಲಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಈ ಸಂಕಷ್ಟದ ಸ್ಥಿತಿಯಿಂದ ಹೊರಬರುವೆನೆಂಬ ನಂಬಿಕೆ ನನಗಿದೆ.  ವೃತ್ತಿಪರ ಸಂಸ್ಥೆಗಳಿಂದ ಬೇರೆ ಉದ್ಯೋಗ ಗಳಿಸುವ ವಿಶ್ವಾಸದಲ್ಲಿ ನಾನಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ. 

ಅಮೆಜಾನ್ (Amazon)ತನ್ನ ಎರಡನೇ ಸುತ್ತಿನ ಉದ್ಯೋಗ ವಜಾ ಪ್ರಕ್ರಿಯೆಯನ್ನು ಮಾರ್ಚ್‌ನಲ್ಲಿ ಘೋಷಿಸಿತ್ತು. ಇದರಲ್ಲಿ 9,000 ಉದ್ಯೋಗಗಳನ್ನು ಕಡಿತಗೊಳಿಸಲಾಗುವುದು ಎಂದು ಅಮೆಜಾನ್ ಸಿಇಒ ಆಂಡಿ ಜಾಸ್ಸಿ (Amazon CEO Andy Jassy) ಹೇಳಿದ್ದರು.  . ಮಾರ್ಚ್ 20 ರಂದು ಉದ್ಯೋಗಿಗಳಿಗೆ ಕಳುಹಿಸಿದ ಸಂದೇಶದಲ್ಲಿ ಇದು ಕಂಪನಿಯ ದೀರ್ಘಾವಧಿಯ ಪ್ರಯೋಜನಕ್ಕಾಗಿ ತೆಗೆದುಕೊಂಡ ಕಷ್ಟಕರ ನಿರ್ಧಾರ ಎಂದು ಹೇಳಿದರು.

ಮನುಷ್ಯರು ಮಾತ್ರವಲ್ಲ, ರೋಬೋಟ್‌ಗಳನ್ನೂ ಕೆಲಸದಿಂದ ಕಿತ್ತು ಹಾಕಿದ ಗೂಗಲ್..!

ಅಮೆಜಾನ್‌ನ ಉದ್ಯೋಗ ಕಡಿತದಿಂದ ಕಳೆದ ಆರು ತಿಂಗಳಲ್ಲಿ ವಿಶ್ವದಾದ್ಯಂತ ಸಾವಿರಾರು ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್(Microsoft), ಮೆಟಾ(Meta), ಟ್ವಿಟರ್ (Twitter) ಮತ್ತು ಗೋಲ್ಡ್‌ಮನ್ ಸ್ಯಾಚ್‌ಗಳು (Goldman sachs) ಇತ್ತೀಚೆಗೆ ಉದ್ಯೋಗಿಗಳನ್ನು ವಜಾಗೊಳಿಸಿವೆ. ನಿಧಾನಗತಿಯ ಗ್ರಾಹಕ ಖರ್ಚು, ಹೆಚ್ಚಿನ ಬಡ್ಡಿದರಗಳು ಮತ್ತು ವಿಶ್ವಾದ್ಯಂತ ಹೆಚ್ಚುತ್ತಿರುವ ಹಣದುಬ್ಬರದ ಕಾರಣದಿಂದ  ನೇಮಕಾತಿಯನ್ನು ಸ್ಥಗಿತಗೊಳಿಸಿದ ಕಂಪನಿಗಳಲ್ಲಿಈ ಕಂಪನಿಗಳು ಸೇರಿವೆ.

click me!