ಬೆಂಗಳೂರು (13): ರಾಜ್ಯದಲ್ಲಿ 13,487 ಕೋಟಿ ರು. ಬಂಡವಾಳ ಹೂಡಿಕೆಯಾಗುವ ಒಂಭತ್ತು ಹೊಸ ಯೋಜನೆಗಳಿಗೆ ಮತ್ತು ಒಂದು ಹೆಚ್ಚುವರಿ ಬಂಡವಾಳ ಹೂಡಿಕೆ ಯೋಜನೆಗೆ ರಾಜ್ಯ ಉನ್ನತಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಅನುಮೋದನೆ ನೀಡಿದೆ.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ 56ನೇ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಹೊಸ ಯೋಜನೆಗಳಿಂದ ಆರು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಬಹುದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ-3, ಬಳ್ಳಾರಿ-2, ಬೆಂಗಳೂರು ನಗರ, ಚಿತ್ರದುರ್ಗ, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ಮಂಗಳೂರು ತಲಾ ಒಂದೊಂದು ಸೇರಿದಂತೆ ಒಟ್ಟು 10 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
undefined
ರೈಲ್ವೆಯಲ್ಲಿ ಗ್ರೂಪ್ ಸಿ ಹುದ್ದೆಗೆ ನೇಮಕಾತಿ: ವಾಟ್ಸಾಪ್ ಮೂಲಕ ಅಪ್ಲೈ ಮಾಡಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 3,425 ಕೋಟಿ ರು., ಬಳ್ಳಾರಿಗೆ 1,204 ಕೋಟಿ ರು., ಬೆಂಗಳೂರು ನಗರಕ್ಕೆ 4,042 ಕೋಟಿ ರು., ಚಿತ್ರದುರ್ಗಕ್ಕೆ 555 ಕೋಟಿ ರು, ಚಾಮರಾಜನಗರಕ್ಕೆ 731 ಕೋಟಿ ರು., ಚಿಕ್ಕಬಳ್ಳಾಪುರಕ್ಕೆ ಒಂದು ಸಾವಿರ ಕೋಟಿ ರು. ಮತ್ತು ಮಂಗಳೂರಿಗೆ 2,527 ಕೋಟಿ ರು. ಸೇರಿದಂತೆ ಒಟ್ಟು 13,487 ಕೋಟಿ ರು. ಯೋಜನೆಗಳನ್ನು ಒದಗಿಸಲಾಗಿದೆ. ಆಮ್ಲಜನಕ, ಸಿಮೆಂಟ್, ಸಿರಾಮಿಕ್, ಪೆಟ್ರೋಲಿಯಂ ಉತ್ಪನ್ನಗಳು, ಇಂಜಿಯರಿಂಗ್ ಟೂಲ್ಸ್, ಸಾಫ್ಟ್‌ವೇರ್, ಸೋಲಾರ್ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಲಾಗುತ್ತದೆ.
ಕೊರೋನಾ 2ನೇ ಅಲೆ; ಎಪ್ರಿಲ್ ತಿಂಗಳಲ್ಲಿ 72 ಲಕ್ಷ ಮಂದಿ ಉದ್ಯೋಗಕ್ಕೆ ಕತ್ತರಿ! .
ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಭಾಗಿಯಾಗಿದ್ದರು.