ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ 518 ನಾನ್-ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಡಿಸೆಂಬರ್ 31, 2024 ರಿಂದ ಜನವರಿ 21, 2025 ರವರೆಗೆ ಅರ್ಜಿ ಸಲ್ಲಿಸಬಹುದು.
Non-Executive Job: ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ ನಲ್ಲಿ (National Aluminium Company Limited) ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಈ ಸಂಬಂಧ ಡಿಸೆಂಬರ್ 20ರಂದು ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಧಿಕೃತ ವೆಬ್‌ಸೈಟ್ ಮೂಲಕವೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 31, 2024ರಿಂದ ಜನವರಿ 21, 2025ರವರೆಗೆ ಅರ್ಜಿ ಸಲ್ಲಿಕೆ ಮಾಡಬಹುದು. S&P ಕಾಂಪ್ಲೆಕ್ಸ್, ಅಂಗುಲ್, ಮತ್ತು M&R ಕಾಂಪ್ಲೆಕ್ಸ್, ದಮಂಜೋಡಿ ಅಡಿಯಲ್ಲಿ ನಾನ್-ಎಕ್ಸಿಕ್ಯುಟಿವ್ ಹುದ್ದೆಗಳ ನೇಮಕಾತಿಗಾಗಿ ಡಿಸೆಂಬರ್ 20, 2024 ರಂದು ಜಾಹೀರಾತು ಪ್ರಕಟಿಸಲಾಗಿದೆ/ ಒಟ್ಟು 518 ಖಾಲಿ ಹುದ್ದೆಗಳಿವೆ. ಈ ಕೆಳಗಿನ ಪಿಡಿಎಫ್ ಫೈಲ್ ಮೂಲಕ ಹುದ್ದೆಗಳ ಮಾಹಿತಿಯನ್ನು ನೋಡಬಹುದು.
ದೇಶ |
ಭಾರತ |
ಸಂಸ್ಥೆ | National Aluminium Company Limited (NALCO) |
ಹುದ್ದೆ ಹೆಸರು | ನಾನ್ ಎಕ್ಸಿಕ್ಯೂಟಿವ್ (SUPT, Dresser, Laboratory Technician, etc.) |
ಒಟ್ಟು ಹುದ್ದೆಗಳು | 518 |
ವಯೋಮಿತಿ | 18 ರಿಂದ 27 (ವಿಶೇಷ ಪ್ರಕರಣಗಳಲ್ಲಿ 37 ವರ್ಷ) |
ವಿದ್ಯಾರ್ಹತೆ | ಐಟಿಐ, ಬಿಎಸ್‌ಸಿ, ಡಿಪ್ಲೋಮಾ/ ತತ್ಸಮಾನ |
ಅರ್ಜಿ ಶುಲ್ಕ | 100 ರೂ (ಎಸ್‌ಸಿ, ಎಸ್‌ಟಿ,PwBD, ಮಾಜಿ ಸೈನಿಕರಿಗೆ ವಿನಾಯ್ತಿ) |
ನೋಟಿಫಿಕೇಶನ್ ದಿನಾಂಕ | 20 ಡಿಸೆಂಬರ್ 2024 |
ಅರ್ಜಿ ಸಲ್ಲಿಕೆ ಆರಂಭ | 31 ಡಿಸೆಂಬರ್ 2024 |
ಅರ್ಜಿ ಸಲ್ಲಿಕೆ ಕೊನೆ ದಿನಾಂಕ | 21 ಜನವರಿ 2024 |
undefined
NALCO ಅಡಿಯಲ್ಲಿ ನಾನ್-ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಕಾಯ್ದಿರಿಸದ, ಇತರೆ ಹಿಂದುಳಿದ ವರ್ಗ ಅಥವಾ ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ ಸೇರಿದ ಅಭ್ಯರ್ಥಿಯು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, NET ಅನ್ನು ಬಳಸಿಕೊಂಡು ₹100/- ಅರ್ಜಿ ಶುಲ್ಕವನ್ನು ಠೇವಣಿ ಮಾಡಬೇಕಾಗುತ್ತದೆ. ಜನವರಿ 21, 2025ಕ್ಕೂ ಮೊದಲು ಶುಲ್ಕ ಪಾವತಿಸಬೇಕಾಗುತ್ತದೆ
ಗಮನಿಸಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಮಾನದಂಡದ ಅಂಗವೈಕಲ್ಯ ಹೊಂದಿರುವ ವ್ಯಕ್ತಿ ಅಥವಾ ಮಾಜಿ ಸೈನಿಕರು ಮತ್ತು ಆಂತರಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದ ಪಾವತಿಯಿಂದ ವಿನಾಯಿತಿ ನೀಡಲಾಗಿದೆ
ಆಯ್ಕೆ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಅವಶ್ಯವಿದ್ದಲ್ಲಿ ಟ್ರೇಡ್ ಟೆಸ್ಟ್ ನಡೆಸಲಾಗುತ್ತದೆ. ದಾಖಲೆಗಳ ಪರಿಶೀಲನೆ
ದಾಖಲೆ ಸಲ್ಲಿಸುವ ವೆಬ್‌ಸೈಟ್: nalcoindia.com
ಇದನ್ನೂ ಓದಿ:NHPC ನಲ್ಲಿ ಭರ್ಜರಿ ಉದ್ಯೋಗ! ₹1,80,000 ವರೆಗೆ ಸಂಬಳ! ಯಾರ್ಯಾರು ಅರ್ಜಿ ಹಾಕಬಹುದು?