ಕೇರಳ-ಬೆಂಗಾಲ್‌ ಐಎಸ್‌ಎಲ್‌ ಪಂದ್ಯ 1-1ರಲ್ಲಿ ಡ್ರಾ

Kannadaprabha News   | Asianet News
Published : Jan 16, 2021, 08:44 AM IST
ಕೇರಳ-ಬೆಂಗಾಲ್‌ ಐಎಸ್‌ಎಲ್‌ ಪಂದ್ಯ 1-1ರಲ್ಲಿ ಡ್ರಾ

ಸಾರಾಂಶ

7ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ ಟೂರ್ನಿಯಲ್ಲಿ ಕೇರಳ ಹಾಗೂ ಬೆಂಗಾಲ್‌ ನಡುವಿನ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ವಾಸ್ಕೋ(ಜ.16): ಐಎಸ್‌ಎಲ್‌ 7ನೇ ಆವೃತ್ತಿಯಲ್ಲಿ ಶುಕ್ರವಾರ ನಡೆದ ಕೇರಳ ಬ್ಲಾಸ್ಟರ್ಸ್‌ ಹಾಗೂ ಎಸ್‌ಸಿ ಈಸ್ಟ್‌ ಬೆಂಗಾಲ್‌ ನಡುವಿನ ಪಂದ್ಯ 1-1 ಗೋಲುಗಳಿಂದ ಡ್ರಾದಲ್ಲಿ ಅಂತ್ಯವಾಯಿತು. 

ಪಂದ್ಯದ ಕೊನೆಯ ನಿಮಿಷದಲ್ಲಿ ಬೆಂಗಾಲ್‌ನ ಸ್ಕಾಟ್‌ ನೆವಿಲ್ಲೆ ದಾಖಲಿಸಿದ ಆಕರ್ಷಕ ಗೋಲಿನ ನೆರವಿನಿಂದ ಪಂದ್ಯ ಡ್ರಾದಲ್ಲಿ ಮುಕ್ತಾಯವಾಯಿತು. ಮೊದಲಾರ್ಧದಲ್ಲಿ ಎರಡೂ ತಂಡಗಳು ಗೋಲುಗಳಿಸುವಲ್ಲಿ ವಿಫಲವಾದವು. 

ಐಎಸ್‌ಎಲ್: ಬಿಎಫ್‌ಸಿ-ನಾರ್ಥ್‌ಈಸ್ಟ್‌ ಐಎಸ್‌ಎಲ್‌ ಪಂದ್ಯ ಡ್ರಾ

ದ್ವಿತೀಯಾರ್ಧದಲ್ಲಿ ಉಭಯ ತಂಡಗಳಿಂದ ತಲಾ 1 ಗೋಲು ಮೂಡಿದವು. ಕೇರಳ ಪರ ಜೋರ್ಡನ್‌ ಮರ್ರೆ (64ನೇ ನಿ.) ಗೋಲು ಬಾರಿಸಿದರು. ಪಂದ್ಯ ಡ್ರಾದಲ್ಲಿ ಅಂತ್ಯವಾಗಿದ್ದರಿಂದ ಬೆಂಗಾಲ್‌ ಹಾಗೂ ಕೇರಳ ತಂಡಗಳು ಪಟ್ಟಿಯಲ್ಲಿ ಕ್ರಮವಾಗಿ 9, 10ನೇ ಸ್ಥಾನದಲ್ಲಿವೆ.

PREV
click me!

Recommended Stories

ಆರ್‌ಸಿಬಿ ತಂಡದ ನಾಯಕತ್ವಕ್ಕೆ ಹಿಂದಿರುಗಿದ ವಿರಾಟ್ ಕೊಹ್ಲಿ!
ಡೈಮಂಡ್‌ ಲೀಗ್ ಟ್ರೋಫಿ ಗೆಲ್ತಾರಾ ನೀರಜ್‌ ಚೋಪ್ರಾ, ಅವಿನಾಶ್ ಸಾಬ್ಳೆ?