ಸತತ ಸೋಲುಗಳಿಂದ ಕಂಗೆಟ್ಟಿರುವ ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡವಿಂದು ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ತಂಡವನ್ನು ಎದುರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ವಾಸ್ಕೋ(ಜ.12): ಸತತ 4 ಸೋಲುಗಳಿಂದ ಕಂಗೆಟ್ಟಿರುವ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ, ಮಂಗಳವಾರ ಇಲ್ಲಿ ನಡೆಯಲಿರುವ ಐಎಸ್‌ಎಲ್ 7ನೇ ಆವೃತ್ತಿಯ 56ನೇ ಪಂದ್ಯದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ಎದುರು ಸೆಣಸಲು ಸಜ್ಜಾಗಿದೆ.
ಆರಂಭದಲ್ಲಿ ಉಭಯ ತಂಡಗಳು ಅತ್ಯದ್ಭುತ ಪ್ರದರ್ಶನ ತೋರುವ ಮೂಲಕ ಅಗ್ರ 4ರಲ್ಲಿ ಸ್ಥಾನ ಪಡೆದಿದ್ದವು. ನಂತರ ಎರಡೂ ತಂಡಗಳು ಸೋಲಿನ ಸುಳಿಯಲ್ಲಿ ಸಿಲುಕಿವೆ.
Tomorrow, we fight! 🔥 pic.twitter.com/TTQiooKChi
— Bengaluru FC (@bengalurufc)SHOT! 💥 Juanan takes a swipe in training earlier today. The Spaniard is one of few Bengaluru FC players to play every single minute of the campaign so far. pic.twitter.com/q3KCtRNgFd
— Bengaluru FC (@bengalurufc)undefined
ಸತತ ನಾಲ್ಕನೇ ಪಂದ್ಯ ಸೋತು ಕಂಗಾಲಾದ ಬೆಂಗಳೂರು ಎಫ್‌ಸಿ!
10 ಪಂದ್ಯಗಳನ್ನಾಡಿರುವ ಬಿಎಫ್‌ಸಿ 3 ಜಯದೊಂದಿಗೆ 12 ಅಂಕಗಳಿಸಿ 6ನೇ ಸ್ಥಾನ ಪಡೆದಿದೆ. ಸರಣಿ ಸೋಲುಗಳು ನಾಯಕ ಸುನಿಲ್ ಚೆಟ್ರಿಯನ್ನು ಒತ್ತಡಕ್ಕೆ ಸಿಲುಕಿಸಿದೆ. ಇನ್ನು ನಾರ್ತ್‌ಈಸ್ಟ್ ಕೂಡಾ 10 ಪಂದ್ಯಗಳನ್ನಾಡಿದ್ದು 2 ಗೆಲುವಿನೊಂದಿಗೆ 11 ಅಂಕಗಳಿಸಿ 7ನೇ ಸ್ಥಾನದಲ್ಲಿದೆ.