ಐಎಸ್‌ಎಲ್: ಬಿಎಫ್‌ಸಿ-ನಾರ್ಥ್‌ಈಸ್ಟ್‌ ಐಎಸ್‌ಎಲ್‌ ಪಂದ್ಯ ಡ್ರಾ

Kannadaprabha News   | Asianet News
Published : Jan 13, 2021, 12:04 PM IST
ಐಎಸ್‌ಎಲ್: ಬಿಎಫ್‌ಸಿ-ನಾರ್ಥ್‌ಈಸ್ಟ್‌ ಐಎಸ್‌ಎಲ್‌ ಪಂದ್ಯ ಡ್ರಾ

ಸಾರಾಂಶ

ಬೆಂಗಳೂರು ಎಫ್‌ಸಿ ಹಾಗೂ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಗೋವಾ(ಜ.13): ಏಳನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್‌ ಟೂರ್ನಿಯಲ್ಲಿ ಸತತ 4 ಸೋಲುಗಳನ್ನು ಕಂಡು ಕಂಗೆಟ್ಟಿದ್ದ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಕೊನೆಗೂ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಮಂಗಳವಾರ ನಡೆದ ನಾರ್ಥ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ವಿರುದ್ಧದ ಪಂದ್ಯವನ್ನು ಬೆಂಗಳೂರು ಎಫ್‌ಸಿ 1-1ರಲ್ಲಿ ಡ್ರಾ ಮಾಡಿಕೊಂಡಿತು. ಇದರೊಂದಿಗೆ ಸುನಿಲ್‌ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ 6ನೇ ಸ್ಥಾನ ಕಾಯ್ದುಕೊಂಡಿದೆ. 

ಪಂದ್ಯದ 27ನೇ ನಿಮಿಷದಲ್ಲೇ ಲುಯಿಸ್‌ ಮಚಾಡೋ ಗೋಲು ಬಾರಿಸಿ ನಾರ್ಥ್‌ಈಸ್ಟ್‌ಗೆ ಮುನ್ನಡೆ ಒದಗಿಸಿದರು. ಮೊದಲಾರ್ಧದ ಮುಕ್ತಾಯಕ್ಕೆ 1-0 ಮುನ್ನಡೆ ಸಾಧಿಸಿದ್ದ ಎದುರಾಳಿಗೆ 49ನೇ ನಿಮಿಷದಲ್ಲಿ ಬಿಎಫ್‌ಸಿಯ ರಾಹುಲ್‌ ಬೇಕೆ ಆಘಾತ ನೀಡಿದರು. ಆಕರ್ಷಕ ಗೋಲು ಬಾರಿಸುವ ಮೂಲಕ ಸಮಬಲ ಸಾಧಿಸಲು ನೆರವಾದರು. 

ಐಎಸ್‌ಎಲ್‌: ಬಿಫ್‌ಸಿಗಿಂದು ನಾರ್ತ್‌ಈಸ್ಟ್‌ ಸವಾಲು

11 ಪಂದ್ಯಗಳಿಂದ 13 ಅಂಕ ಗಳಿಸಿರುವ ಬಿಎಫ್‌ಸಿ ಸೆಮೀಸ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಮುಂದಿನ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಮುಂದಿನ ಪಂದ್ಯಗಳಲ್ಲಿ ಚೆಟ್ರಿ ಪಡೆ ಯಾವ ರೀತಿಯ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ

PREV
click me!

Recommended Stories

ಆರ್‌ಸಿಬಿ ತಂಡದ ನಾಯಕತ್ವಕ್ಕೆ ಹಿಂದಿರುಗಿದ ವಿರಾಟ್ ಕೊಹ್ಲಿ!
ಡೈಮಂಡ್‌ ಲೀಗ್ ಟ್ರೋಫಿ ಗೆಲ್ತಾರಾ ನೀರಜ್‌ ಚೋಪ್ರಾ, ಅವಿನಾಶ್ ಸಾಬ್ಳೆ?