ಐಎಸ್‌ಎಲ್ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡವಿಂದು ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಎದುರಿಸಲು ಸಜ್ಜಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬಂಬೋಲಿಮ್(ಜ.20): ಇಂಡಿಯನ್ ಸೂಪರ್ ಲೀಗ್ 7ನೇ ಆವೃತ್ತಿಯಲ್ಲಿ ಸತತ 4 ಸೋಲುಗಳಿಂದ ಕಂಗೆಟ್ಟಿದ್ದ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ, ಬುಧವಾರ ಇಲ್ಲಿನ ಜಿಎಂಸಿ ಸ್ಟೇಡಿಯಂನಲ್ಲಿ ನಡೆಯಲಿರುವ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ವಿರುದ್ಧ ಗೆಲುವಿನ ಲೆಕ್ಕಾಚಾರದಲ್ಲಿದೆ.
ಕಳೆದ ಪಂದ್ಯದಲ್ಲಿ ನಾರ್ತ್ ಈಸ್ಟ್ ಎದುರು ಡ್ರಾ ಸಾಧಿಸಿ ನಿಟ್ಟುಸಿರುವ ಬಿಟ್ಟಿದ್ದ ಸುನಿಲ್ ಚೆಟ್ರಿ ಪಡೆ, ಕೇರಳ ಎದುರು ಗೆದ್ದು, ಜಯದ ಲಯಕ್ಕೆ ಮರಳುವ ಉತ್ಸಾಹದಲ್ಲಿದೆ.
undefined
ಕೇರಳ-ಬೆಂಗಾಲ್ ಐಎಸ್‌ಎಲ್ ಪಂದ್ಯ 1-1ರಲ್ಲಿ ಡ್ರಾ
Airborne! makes the ball his in training ahead of the Blues' clash against the Blasters. pic.twitter.com/7gF1UntLdq
— Bengaluru FC (@bengalurufc)Interim Head Coach gave us his thoughts ahead of the Blues' game against Kerala Blasters at the GMC Stadium tomorrow. pic.twitter.com/A8N8aK9NeY
— Bengaluru FC (@bengalurufc)ಸದ್ಯ ಬಿಎಫ್‌ಸಿ 11 ಪಂದ್ಯಗಳಿಂದ 3ರಲ್ಲಿ ಗೆದ್ದಿದ್ದು 13 ಅಂಕಗಳಿಂದ 7ನೇ ಸ್ಥಾನದಲ್ಲಿದೆ. ಕೇರಳ 10 ಅಂಕಗಳಿಸಿ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದೆ. ಟೂರ್ನಿಯಲ್ಲಿ ಮುಂದಿನ ಹಂತಕ್ಕೇರಲು ಉಭಯ ತಂಡಗಳಿಗೆ ಗೆಲುವು ಅನಿವಾರ್ಯ ಎನಿಸಿದೆ.
ಸ್ಥಳ: ಬಂಬೋಲಿಮ್
ಆರಂಭ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್