ಐಎಸ್‌ಎಲ್‌: ಬಿಎಫ್‌ಸಿಗಿಂದು ಹೈದ್ರಾಬಾದ್‌ ಸವಾಲು

By Suvarna News  |  First Published Jan 28, 2021, 1:06 PM IST

ಇಂಡಿಯನ್‌ ಸೂಪರ್‌ ಲೀಗ್ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ತಂಡವಿಂದು ಬಲಿಷ್ಠ ಹೈದ್ರಾಬಾದ್ ಎಫ್‌ಸಿ ತಂಡವನ್ನು ಎದುರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 


ವಾಸ್ಕೋ(ಜ.28): ಐಎಸ್‌ಎಲ್‌ 7ನೇ ಆವೃತ್ತಿಯಲ್ಲಿ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ, ಅಂತಿಮ ನಾಲ್ವರ ಹಂತಕ್ಕೇರುವುದು ಅನುಮಾನ ಮೂಡಿಸಿದೆ. 

ಕಳೆದ ಪಂದ್ಯದಲ್ಲಿ ಉಭಯ ತಂಡಗಳು ಡ್ರಾಗೆ ತೃಪ್ತಿಪಟ್ಟುಕೊಂಡಿದ್ದವು. ಬೆಂಗಳೂರು ಎಫ್‌ಸಿ ತಂಡವು 1-1 ಅಂತರದಲ್ಲಿ ಒಡಿಶಾ ಎದುರು ಡ್ರಾ ಸಾಧಿಸಿದ್ದರೆ, ಹೈದ್ರಾಬಾದ್ ತಂಡವು ಜೆಮ್ಶಡ್‌ಪುರ ಎಫ್‌ಸಿ ಎದುರು ಡ್ರಾ ಮಾಡಿಕೊಂಡಿತ್ತು. ಈ ಆವೃತ್ತಿಯ ಆರಂಭದಲ್ಲೇ ಬೆಂಗಳೂರು ಹಾಗೂ ಹೈದ್ರಾಬಾದ್ ತಂಡಗಳು ಸೆಣಸಾಡಿದ್ದವು. ಆದರೆ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು.

Tap to resize

Latest Videos

undefined

ಐಎಸ್‌ಎಲ್‌: ಬಿಎಫ್‌ಸಿ-ಒಡಿಶಾ ಪಂದ್ಯ 1-1 ಡ್ರಾ..!

ಕಳೆದ 7 ಪಂದ್ಯಗಳಲ್ಲಿ ಗೆಲುವನ್ನೇ ಕಾಣದ ಬಿಎಫ್‌ಸಿ ಗುರುವಾರ ಹೈದ್ರಾಬಾದ್‌ ಎಫ್‌ಸಿ ವಿರುದ್ಧ ಸೆಣಸಲು ಸಜ್ಜಾಗಿದೆ. 13 ಪಂದ್ಯಗಳನ್ನಾಡಿರುವ ಸುನಿಲ್‌ ಚೆಟ್ರಿ ಪಡೆ ಕೇವಲ 3 ಪಂದ್ಯಗಳನ್ನು ಗೆದ್ದು 14 ಅಂಕಗಳಿಸಿ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇನ್ನು ಹೈದ್ರಾಬಾದ್ ಎಫ್‌ಸಿ ತಂಡವು 13 ಪಂದ್ಯಗಳನ್ನಾಡಿದ್ದು, 4 ಗೆಲುವು, 6 ಡ್ರಾ  ಹಾಗೂ 3 ಸೋಲುಗಳೊಂದಿಗೆ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ.

Can make the most of 's recent form and register their first win over the former champions?

Our preview of 👇 https://t.co/KZNBsL8Jnv

— Indian Super League (@IndSuperLeague)
click me!