
ಶಾರ್ಜಾ(ಅ.07): ಹಾಲಿ ಚಾಂಪಿಯನ್ ಸೂಪರ್‌ನೋವಾಸ್, ಟ್ರಯಲ್‌ಬ್ಲೇಜರ್ಸ್ ವಿರುದ್ಧ ಇಲ್ಲಿ ಶನಿವಾರ ನಡೆಯಲಿರುವ ಮಹಿಳಾ ಚಾಲೆಂಜ್ ಟಿ20 ಟೂರ್ನಿಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಪಂದ್ಯದಲ್ಲಿ ಸೂಪರ್‌ನೋವಾಸ್ ಗೆದ್ದರೇ ಮಾತ್ರ ಉಳಿಯಲಿದ್ದು, ಸೋತರೆ ಟೂರ್ನಿಯಿಂದ ಹೊರಬೀಳಲಿದೆ.
ಮೂರು ತಂಡಗಳು ಪೈಕಿ, ಟ್ರಯಲ್‌ಬ್ಲೇಜರ್ಸ್ ಹಾಗೂ ವೆಲಾಸಿಟಿ ತಂಡಗಳು ತಲಾ 1 ಪಂದ್ಯ ಗೆದ್ದಿವೆ. ಟ್ರಯಲ್‌ಬ್ಲೇಜರ್ಸ್ ಹಾಗೂ ವೆಲಾಸಿಟಿ ತಂಡಗಳು ತಲಾ 2 ಅಂಕಗಳಿಸಿ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ. ಈಗಾಗಲೇ ಟ್ರಯಲ್‌ಬ್ಲೇಜರ್ಸ್ ಮೊದಲ ಪಂದ್ಯದಲ್ಲಿ ಗೆಲುವು ಪಡೆದಿದ್ದು, ಇದೀಗ 2ನೇ ಪಂದ್ಯದಲ್ಲಿ ಸೂಪರ್‌ನೋವಾಸ್ ಮಣಿಸಿ ಫೈನಲ್‌ಗೇರುವ ವಿಶ್ವಾಸದಲ್ಲಿದೆ.
ಮಹಿಳಾ ಟಿ20 ಚಾಲೆಂಜ್; ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಮಿಥಾಲಿ ಪಡೆ!
ಮೊದಲ ಪಂದ್ಯದಲ್ಲಿ ಸೋತಿರುವ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಸೂಪರ್‌ನೋವಾಸ್, ತನ್ನ 2ನೇ ಪಂದ್ಯದಲ್ಲಿ ಟ್ರಯಲ್‌ಬ್ಲೇಜರ್ಸ್ ಎದುರು ಗೆದ್ದು ಉತ್ತಮ ನೆಟ್ ರನ್‌ರೇಟ್‌ನೊಂದಿಗೆ ವೆಲಾಸಿಟಿಯನ್ನು ಹಿಂದಿಕ್ಕುವ ಉತ್ಸಾಹದಲ್ಲಿದೆ.
ಪಿಚ್ ರಿಪೋರ್ಟ್: ಶಾರ್ಜಾ ಪಿಚ್ ನಿಧಾಗತಿಗೆ ತಿರುಗಿದ್ದು, ಆರಂಭದಲ್ಲಿ ವೇಗಿಗಳು ಯಶಸ್ಸು ಕಾಣಲಿದ್ದಾರೆ. ಸಮಯ ಕಳೆದಂತೆ ಪಿಚ್ ತಿರುವು ಪಡೆಯುವುದರಿಂದ ಸ್ಪಿನ್ನರ್‌ಗಳು ನಿರ್ಣಾಯಕ ಎನಿಸಲಿದ್ದಾರೆ. ಟಾಸ್ ಪ್ರಮುಖ ಪಾತ್ರವಹಿಸಲಿದೆ.
ಸಂಭವನೀಯ ಆಟಗಾರ್ತಿಯರ ಪಟ್ಟಿ
ಟ್ರಯಲ್‌ಬ್ಲೇಜರ್ಸ್: ಡೊಟಿನ್, ಸ್ಮೃತಿ (ನಾಯಕಿ), ರಿಚಾ, ಹರ್ಲಿನ್, ದೀಪ್ತಿ, ಹೇಮಲತಾ, ಚಂತಾಮ್, ಸಲ್ಮಾ, ಎಕ್ಲೆಸ್ಟೋನ್, ರಾಜೇಶ್ವರಿ, ಜೂಲನ್.
ಸೂಪರ್‌ನೋವಾಸ್: ಪ್ರಿಯಾ, ಅಟಪಟ್ಟು, ಜೆಮಿಮಾ, ಹರ್ಮನ್ (ನಾಯಕಿ), ಶಶಿಕಲಾ, ಪೂಜಾ, ರಾಧಾ, ಸೆಲ್ಮಾನ್, ತಾನಿಯಾ, ಪೂನಂ, ಅಯ್ಬೊಂಗಾ.
ಸ್ಥಳ: ಶಾರ್ಜಾ
ಆರಂಭ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.