ವಿರಾಟ್ ಕೊಹ್ಲಿ, ಗಂಗೂಲಿಗೆ ಮದ್ರಾಸ್‌ ಹೈಕೋರ್ಟ್‌ ನೋಟಿಸ್‌

By Kannadaprabha NewsFirst Published Nov 4, 2020, 10:07 AM IST
Highlights

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಏನಾಯ್ತು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಚೆನ್ನೈ(ನ.04): ಫ್ಯಾಂಟಸಿ ಗೇಮ್ಸ್‌ ಆ್ಯಪ್‌ಗಳ ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಗೆ ಮದ್ರಾಸ್‌ ಹೈಕೋರ್ಟ್‌ ನೋಟಿಸ್‌ ನೀಡಿದೆ. 
 
ಮದ್ರಾಸ್ ಹೈಕೋರ್ಟ್‌ನ ಮದುರೈ ಬ್ರಾಂಚ್‌ನ ನ್ಯಾಯಮೂರ್ತಿ ಬಿ ಪುಂಗಲೇನಿದಿ, ಮತ್ತು ಎನ್‌. ಕಿರುಬಾಕರನ್ ಅವರನ್ನೊಳಗೊಂಡ ಪೀಠ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಲ್ಲದೇ ನಟ ಪ್ರಕಾಶ್‌ರಾಜ್‌, ನಟಿ ತಮನ್ನಾ, ರಾಣಾ ಮತ್ತು ಸುದೀಪ್‌ ಖಾನ್‌ಗೆ ನೋಟಿಸ್‌ ನೀಡಲಾಗಿದೆ. ಈ ನೋಟಿಸ್‌ಗೆ ನ.19 ರೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ. 

ಸ್ಥಳೀಯ ಯುವಕನೊಬ್ಬ ಫ್ಯಾಂಟಸಿ ಗೇಮ್ಸ್‌ ಆಡಿ ಸಾಲ ಮಾಡಿಕೊಂಡು, ಸಾಲ ತೀರಿ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಮೊಹಮ್ಮದ್ ರಿಜ್ವಿ ಎನ್ನುವ ಅಡ್ವೋಕೇಟ್ ಕೇಸ್ ದಾಖಲಿಸಿದ್ದರು. 

ಐಪಿಎಲ್ ಅಭಿಮಾನಿಗಳಿಗೆ ವಿಶೇಷ ಸಂದೇಶ ಕಳಿಸಿದ ಯೂನಿವರ್ಸೆಲ್ ಬಾಸ್..!

ಈ ಆ್ಯಪ್‌ಗಳು ಐಪಿಎಲ್‌ ತಂಡಗಳಾದ ಚೆನ್ನೈ ಸೂಪರ ಕಿಂಗ್ಸ್‌, ರಾಜಸ್ಥಾನ ರಾಯಲ್ಸ್‌ನ ಹೆಸರಿನಲ್ಲಿವೆ. ಮತ್ತು ಕೆಲ ಆ್ಯಪ್‌ಗಳು ರಾಜ್ಯದ ಹೆಸರಿನಲ್ಲಿವೆ. ಈ ತಂಡಗಳು ರಾಜ್ಯದ ಪರವಾಗಿ ಆಡುತ್ತಿದೆಯೇ ಎಂದು ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠ ಕೇಳುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

click me!