ಮುಂದಿನ ಆವೃತ್ತಿಯಲ್ಲಿ ಹೊಚ್ಚ ಹೊಸ CSK ತಂಡ; ಸೂಚನೆ ನೀಡಿದ ಧೋನಿ!

Published : Nov 01, 2020, 10:09 PM IST
ಮುಂದಿನ ಆವೃತ್ತಿಯಲ್ಲಿ ಹೊಚ್ಚ ಹೊಸ CSK ತಂಡ; ಸೂಚನೆ ನೀಡಿದ ಧೋನಿ!

ಸಾರಾಂಶ

IPL ಟೂರ್ನಿಯಿಂದ ಹೊರಬಿದ್ದ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಮುಂದಿನ ಐಪಿಎಲ್ ಟೂರ್ನಿಯತ್ತ ಗಮನಹರಿಸಿದೆ. ಮುಂದಿನ ಐಪಿಎಲ್ ಟೂರ್ನಿಗೆ ಸಿಎಸ್‌ಕೆ ತಂಡ ಸಂಪೂರ್ಣ ಬದಲಾಗಲಿದೆ. ಇಷ್ಟೇ ಅಲ್ಲ ನಾಯಕತ್ವವೂ ಬದಲಾಗುತ್ತಾ? ಈ ಕುರಿತು ಸ್ವತಃ ಎಂ.ಎಸ್.ಧೋನಿ ಸೂಚನೆ ನೀಡಿದ್ದಾರೆ.  

ಶಾರ್ಜಾ(ನ.01): ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ 13ನೇ ಆವೃತ್ತಿಯಲ್ಲಿ ಮೊದಲ ತಂಡವಾಗಿ ಟೂರ್ನಿಯಿಂದ ಹೊರಬಿದ್ದಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಈ ವರ್ಷದ ಪಯಣ ಅಂತ್ಯಗೊಳಿಸಿದ ಸಿಎಸ್‌ಕೆ ಮುಂದಿನ ಐಪಿಎಲ್ ಟೂರ್ನಿಗೆ ತಯಾರಿ ನಡೆಸುತ್ತಿದೆ. ಮುಂದಿನ ಐಪಿಎಲ್ ಟೂರ್ನಿಗೆ ಚೆನ್ನೈ ಸೂಪರ್ ಕಿಂಗ್ಸ್ ಸಂಪೂರ್ಣ ತಂಡವನ್ನು ಬದಲಿಸುವ ಸೂಚನೆ ನೀಡಿದೆ.

ಪಂಜಾಬ್‌ ಪ್ಲೇ ಆಫ್‌ ಕನಸು ಛಿದ್ರ; ಧೋನಿ ಪಡೆ ಐಪಿಎಲ್ ಟೂರ್ನಿಗೆ ಗೆಲುವಿನ ವಿದಾಯ..!...

ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ ಇದೀಗ ಮುಂದಿನ ವರ್ಷದ ಐಪಿಎಲ್ ಟೂರ್ನಿಗೆ ಸಿಎಸ್‌ಕೆ ತಯಾರಿ ಕುರಿತ ಮಾಹಿತಿ ಬಿಚ್ಚಿಟ್ಟಿದ್ದಾರೆ. ಹರಾಜಿನಲ್ಲಿ ಹಲವು ಆಟಗಾರರನ್ನೂ ಖರೀದಿಸಿದರೂ ಚೆನ್ನೈ ತಂಡದಲ್ಲಿನ ಮೂಲ ಆಟಗಾರರನ್ನು ಉಳಿಸಿಕೊಂಡಿದೆ. ಇದೀಗ ಮೂಲ ಆಟಗಾರರನ್ನೇ ಬದಲಿಸುವ ಕುರಿತು ಧೋನಿ ಸೂಚನೆ ನೀಡಿದ್ದಾರೆ.

ಕೇವಲ ಆಟಗಾರರನ್ನು ಮಾತ್ರವಲ್ಲ, ನಾಯಕತ್ವ ಬದಲಾವಣೆ ಕುರಿತು ಸೂಚನೆ ನೀಡಿದ್ದಾರೆ. ಮುಂದಿನ ಪೀಳಿಗೆಗೆ ತಂಡವನ್ನು ನೀಡಬೇಕಿದೆ. ಯುವ ಕ್ರಿಕೆಟಿಗರಿಗೆ ಜವಾಬ್ದಾರಿ ನೀಡಲು ಧೋನಿ ರೆಡಿಯಾಗಿದ್ದಾರೆ. 

13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಧೋನಿ ಸೈನ್ಯ 14 ಲೀಗ್ ಪಂದ್ಯದಲ್ಲಿ ಕೇವಲ 6 ಗೆಲುವು ಕಂಡಿದೆ. ಈ ಮೂಲಕ 12 ಅಂಕ ಸಂಪಾದಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನಿರೀಸ ಪ್ರದರ್ಶನ ನೀಡಿದ ಸಿಎಸ್‌ಕೆ ಐಪಿಎಲ್ ಇತಿಹಾಸದಲ್ಲೇ ಪ್ಲೇ ಆಫ್ ಪ್ರವೇಶಿಸಿದೆ ಟೂರ್ನಿಯಿಂದ ಹೊರಬಿದ್ದಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 ಐಪಿಎಲ್ ಹರಾಜಿನಿಂದ ಹಿಂದೆ ಸರಿದ ಮತ್ತಿಬ್ಬರು ಸ್ಟಾರ್ ಆಲ್ರೌಂಡರ್ಸ್!
IPL 2026 ಆಟಗಾರರ ಹರಾಜಿನ ಲಿಸ್ಟ್‌ ಫೈನಲ್: 2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರ ಪಟ್ಟಿ ಔಟ್, ಕೇವಲ 2 ಭಾರತೀಯರಿಗೆ ಸ್ಥಾನ!