
ದುಬೈ(ಆ.25): ‘ಒಂದೇ ಒಂದು ತಪ್ಪು ಇಡೀ ಐಪಿಎಲ್ ಟೂರ್ನಿಯನ್ನೇ ಹಾಳುಮಾಡಲಿದೆ. ಪ್ರತಿಯೊಬ್ಬರೂ ಕೊರೋನಾ ಸೋಂಕು ತಡೆಗಟ್ಟಲು ಆಯೋಜಕರ ಸೂಚನೆಯಂತೆ ಬಯೋ ಬಬಲ್‌ನ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಸಹ ಆಟಗಾರರಿಗೆ ಸೂಚಸಿದ್ದಾರೆ.
ದುಬೈ ತಲುಪಿದ ಬಳಿಕ 6 ದಿನಗಳ ಕ್ವಾರಂಟೈನ್‌ಗೆ ಒಳಪಟ್ಟಿರುವ ತಂಡ, ಸೋಮವಾರ ವಿಡಿಯೋ ಕಾನ್ಫರೆನ್ಸ್ ನಡೆಸಿತು. ಯಾರೋ ಒಬ್ಬರು ಬಯೋ ಸೆಕ್ಯೂರ್ ಝೋನ್ ಉಲ್ಲಂಘಿಸಿ ತಪ್ಪು ಮಾಡಿದರೆ, ಅಕ್ಷರಶಃ ಐಪಿಎಲ್ ಟೂರ್ನಿಯನ್ನೇ ಹಾಳು ಮಾಡಲಿದೆ. ಹೀಗಾಗುವುದು ಯಾರಿಗೂ ಇಷ್ಟವಿಲ್ಲ ಎನ್ನುವುದು ನೆನಪಿರಲಿ ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಉಸೇನ್ ಬೋಲ್ಟ್‌ಗೂ ವಕ್ಕರಿಸಿದ ಕೊರೋನಾ; ಕ್ರಿಸ್ ಗೇಲ್‌ಗೂ ಶುರುವಾಯ್ತು ಭೀತಿ..!
‘ನಮ್ಮ ಮೊದಲ ಅಭ್ಯಾಸದ ಅವಧಿಗೆ ಕಾಯುತ್ತಿದ್ದೇನೆ. ಎಲ್ಲರೂ ಉತ್ಸುಕರಾಗಿದ್ದೀರಿ ಎಂದು ತಿಳಿದಿದೆ. ಮೊದಲ ದಿನದಿಂದಲೇ ತಂಡದೊಳಗೆ ಉತ್ತಮ ವಾತಾವರಣ ಸೃಷ್ಟಿಸಲು ಇದು ಉತ್ತಮ ಅವಕಾಶ’ ಎಂದು ಕೊಹ್ಲಿ ಹೇಳಿದರು.
ಕಳೆದ 12 ಆವೃತ್ತಿಗಳಲ್ಲಿ ಕಪ್ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಹೊಸ ಉತ್ಸಾಹದೊಂದಿಗೆ ದುಬೈಗೆ ಬಂದಿಳಿದಿದೆ. 2020ನೇ ಸಾಲಿನ ಐಪಿಎಲ್ ಟೂರ್ನಿ ನಿಗದಿಯಂತೆ ಭಾರತದಲ್ಲೇ ನಡೆಯಬೇಕಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಗೊಂಡಿದೆ. ಸೆಪ್ಟೆಂಬರ್ 19ರಿಂದ ಟೂರ್ನಿ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.