13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆಯೋಜನೆ ತೂಗೂಯ್ಯಾಲೆಯಲ್ಲಿದೆ. ಹೀಗಿರುವಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಂದೂಡುವುದು ಖಚಿತ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಏ.13): ಕೊರೋನಾದಿಂದಾಗಿ ದೇಶದೆಲ್ಲೆಡೆ ಲಾಕ್‌ಡೌನ್ ವಿಸ್ತರಣೆ ಆಗುತ್ತಿರುವುದರಿಂದ 2020ರ 13ನೇ ಆವೃತ್ತಿ ಐಪಿಎಲ್ ಟೂರ್ನಿಯನ್ನು ಮತ್ತೆ ಮುಂದೂಡುವ ಸಾಧ್ಯತೆ ದಟ್ಟವಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರದ ಆದೇಶ ಬಂದ ಬಳಿಕ ಐಪಿಎಲ್ ನಡೆಸುವ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎನ್ನಲಾಗಿದೆ. ಮಾ.29ಕ್ಕೆ ಆರಂಭವಾಗಬೇಕಿದ್ದ ಐಪಿಎಲ್ ಅನ್ನು ಏ.15ಕ್ಕೆ ಮುಂದೂಡಲಾಗಿತ್ತು. ಇದೀಗ ಲಾಕ್‌ಡೌನ್ ವಿಸ್ತರಣೆಯಾಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಟೂರ್ನಿ ಮತ್ತೆ ಮುಂದಕ್ಕೆ ಹೋಗಲಿದೆ ಎನ್ನಲಾಗಿದೆ.
undefined
ಏಪ್ರಿಲ್ 15ರಿಂದ ಐಪಿಎಲ್ ಸಾಧ್ಯವಿಲ್ಲ ಎಂದ ರಾಜೀವ್ ಶುಕ್ಲಾ
ಈ ನಡುವೆ ರಾಷ್ಟ್ರೀಯ ಮಾಧ್ಯಮದ ಜೊತೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಬದುಕೇ ಅತಂತ್ರವಾಗಿರುವ ಈ ಸಂದರ್ಭದಲ್ಲಿ ಕ್ರೀಡೆಯ ಭವಿಷ್ಯವನ್ನು ಹೇಗೆ ನಿರ್ಧರಿಸಲು ಸಾಧ್ಯ ಎಂದಿದ್ದಾರೆ. ಸೋಮವಾರ ಬಿಸಿಸಿಐ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ನಿರ್ಧರಿಸಲಾಗುವುದು ಎಂದಿದ್ದಾರೆ.
3 ವಾರ, 3 ಮೈದಾನ, ಖಾಲಿ ಕ್ರೀಡಾಂಗಣ; IPL ಆಯೋಜನೆಗೆ ಹೊಸ ಪ್ಲಾನ್!
ಒಟ್ಟಿನಲ್ಲಿ ಕ್ರಿಕೆಟ್ ಮಾತ್ರವಲ್ಲದೇ ಜಗತ್ತಿನಾದ್ಯಂತ ಎಲ್ಲಾ ಕ್ರೀಡಾ ಚಟುವಟಿಕೆಗಳು ಕೊರೋನಾದಿಂದಾಗಿ ಸ್ಥಗಿತಗೊಂಡಿವೆ. ಇನ್ನು ಟೋಕಿಯೋ ಒಲಿಂಪಿಕ್ಸ್ ಕೂಡಾ 2021ಕ್ಕೆ ಮುಂದೂಡಲ್ಪಟ್ಟಿದೆ. ಈ ಹಿಂದೆಯೇ ಟೀಂ ಇಂಡಿಯಾ ಉಪನಾಯಕ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೂಡಾ ಜನರ ಪರಿಸ್ಥಿತಿ ಸರಿದಾರಿಗೆ ಬರಲಿ ಆಮೇಲೆ ಐಪಿಎಲ್ ಬಗ್ಗೆ ಆಲೋಚಿಸಿದರಾಯಿತು ಎಂದಿದ್ದರು.