IPL 2020: ಬರೋಬ್ಬರಿ 2,500 ಕೋಟಿ ಆದಾಯ ನಿರೀಕ್ಷೆಯಲ್ಲಿ ಸ್ಟಾರ್ ಸ್ಪೋರ್ಟ್ಸ್!

By Suvarna NewsFirst Published Sep 19, 2020, 3:51 PM IST
Highlights

ಕೊರೋನಾ ವೈರಸ್ ಕಾರಣ IPL 2020 ಟೂರ್ನಿಗೆ ಅಭಿಮಾನಿಗಳಿಗೆ ಪ್ರವೇಶವಿಲ್ಲ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ನೇರ ಪ್ರಸಾರಕ್ಕೆ ಮುಗಿ ಬೀಳಲಿದ್ದಾರೆ. ಇತ್ತ ನೇರ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿ, ಈ ಆವೃತ್ತಿಯಲ್ಲಿ ದಾಖಲೆಯ ಪ್ರಮಾಣದ ಆದಾಯ ನಿರೀಕ್ಷೆಯಲ್ಲಿದೆ.

ಮುಂಬೈ(ಸೆ.19): ಬಹುನಿರೀಕ್ಷಿತ ಐಪಿಎಲ್ ಟೂರ್ನಿ ಇಂದಿನಿಂದ(ಸೆ.19) ಯುನೈಟೆಡ್ ಅರಬ್ ಎಮಿರೈಟ್ಸ್‌( UAE)ನಲ್ಲಿ ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿದೆ. ಕೊರೋನಾ ಕಾರಣ ಅಭಿಮಾನಿಗಳಿಗೆ ಕ್ರೀಡಾಂಗಣ ಪ್ರವೇಶವಿಲ್ಲ. ಇಷ್ಟೇ ಅಲ್ಲ ಭಾರತದಲ್ಲಿ ಈ ಬಾರಿ ಐಪಿಎಲ್ ಟೂರ್ನಿ ನಡೆಯುತ್ತಿಲ್ಲ. ಹೀಗಾಗಿ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಆಯ್ಕೆ ನೇರ ಪ್ರಸಾರ.

"

IPL 2020: ಉದ್ಘಾಟನಾ ಪಂದ್ಯಕ್ಕೆ CSK ತಂಡದ ಸಂಭಾವ್ಯ ಪ್ಲೇಯಿಂಗ್ XI

ಐಪಿಎಲ್ ನೇರ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋಟ್ಸ್  ಕಳೆದೆಲ್ಲಾ ಆವೃತ್ತಿಗಳಿಂದ ಹೆಚ್ಚಿನ ಆದಾಯ ನಿರೀಕ್ಷೆಯಲ್ಲಿದೆ. ಈಗಾಗಲೇ ಶೇಕಡಾ 95 ರಷ್ಟು ಜಾಹೀರಾತು ಸ್ಲಾಟ್ ಮಾರಾಟ ಮಾಡಲಾಗಿದೆ. ಇನ್ನು 18 ಪ್ರಾಯೋಜಕತ್ವ ಸಹಿ ಹಾಕಲಾಗಿದೆ. ಇನ್ನು ಹೋಸ್ಟಾರ್ ಡಿಜಿಟಲ್ ಮೂಲಕವೂ ಪಂದ್ಯ ನೇರಪ್ರಾಸರವಾಗಲಿದೆ.

IPL 2020 ಉದ್ಘಾಟನಾ ಪಂದ್ಯಕ್ಕೆ ಹೀಗಿದೆ ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ

ಕಳೆದೆಲ್ಲಾ ಆವೃತ್ತಿಗಳಿಗಿಂತ ಈ ಬಾರಿ 18 ಆನ್ ಏರ್ ಪ್ರಾಯೋಜಕತ್ವ ಸಿಕ್ಕಿದೆ. ಬಹುತೇಕ ಸ್ಲಾಟ್ ಮಾರಾಟವಾಗಿದೆ. ಹೀಗಾಗಿ ನೇರ ಪ್ರಸಾರದಿಂದ ಕನಿಷ್ಛ 2,000 ಕೋಟಿ ರೂಪಾಯಿ ಆದಾಯ ಹಾಗೂ ಡಿಜಿಟಲ್ ಮೂಲಕ ಕನಿಷ್ಠ 500 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಚೀಫ್ ಎಕ್ಸಿಕ್ಯೂಟೀವ್ ಆಫೀಸರ್ ಗೌತಮ್ ತಕ್ಕರ್ ಹೇಳಿದ್ದಾರೆ.

ಕೊರೋನಾ ವೈರಸ್ ಕಾರಣ ಹೆಚ್ಚಿನವರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇನ್ನು ಭಾರತದ ಟಿವಿ ಲೋಕದಲ್ಲಿ ಈಗಷ್ಟೇ ಕಾರ್ಯಕ್ರಮಗಳು ಆರಂಭಗೊಂಡಿದೆ. ಮೆಗಾ ಈವೆಂಟ್ ಆಯೋಜನೆಯಾಗಿಲ್ಲ. ಹೀಗಾಗಿ ಐಪಿಎಲ್‌ ನೇರ ಪ್ರಸಾರಕ್ಕೆ ದಾಖಲೆಯ ರೇಟಿಂಗ್ ಸಿಗಲಿದೆ. ಈ ಮೂಲಕ ಆದಾಯದಲ್ಲೂ  ಗಣನೀಯ ಏರಿಕೆಯಾಗಲಿದೆ ಎಂದು ತಕ್ಕರ್ ಹೇಳಿದ್ದಾರೆ.

"

ಇದರ ನಡುವೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಮುಂದಿನ ತಿಂಗಳು(ಅಕ್ಟೋಬರ್) ಬಿಗ್‌ಬಾಸ್ ಹಾಗೂ ಕೌನ್ ಬನೇಗಾ ಕರೋಡ್‌ಪತಿ ರಿಯಾಲಿಟಿ ಶೋ ಕೂಡ ಆರಂಭಗೊಳ್ಳುತ್ತಿದೆ. ಈ ವೇಳೆ ಟಿವಿ ವೀಕ್ಷರ ಸಂಖ್ಯೆ ಹಂಚಿಹೋಗಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಆದರೆ ಐಪಿಎಲ್ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಲಿದೆ ಎಂದು ತಕ್ಕರ್ ಹೇಳಿದ್ದಾರೆ.

click me!