
ಮುಂಬೈ(ಆ.09): ಐಪಿಎಲ್ 2020 ಟೂರ್ನಿ ಹಲವು ಅಡೆ ತಡೆಯನ್ನು ನಿವಾರಿಸಿಕೊಂಡು ಇದೀಗ ಆಯೋಜನೆಗೆ ಸಜ್ಜಾಗಿದೆ. ಕೊರೋನಾ ವೈರಸ್ ನಿಯಂತ್ರಣಕ್ಕೆ ಬರದ ಕಾರಣ ದುಬೈನಲ್ಲಿ ಐಪಿಎಲ್ ಟೂರ್ನಿ ನಡೆಯಲಿದೆ. ಸೆಪ್ಟೆಂಬರ್ 19 ರಿಂದ ಟೂರ್ನಿ ಆರಂಭಗೊಳ್ಳಲಿದ್ದು, ಬಿಸಿಸಿಐ ಅಂತಿಮ ಹಂತದ ಸಿದ್ಧತೆಯಲ್ಲಿದೆ. ಇದರ ನಡುವೆ ಚೀನಾ ವಿರುದ್ಧ ಆಕ್ರೋಷ ಹೆಚ್ಚಾದ ಕಾರಣ ಚೀನಿ ವಸ್ತುಗಳನ್ನು ಭಾರತೀಯರು ಬಹಿಷ್ಕರಿಸುವ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಹೀಗಾಗಿ ಐಪಿಎಲ್ ಟೂರ್ನಿ ಟೈಟಲ್ ಪ್ರಾಯೋಜಕತ್ವದ ವಿವೋ ಹಿಂದೆ ಸರಿದಿತ್ತು. ಈ ಬೆಳವಣಿಗೆಗಳ ಬಳಿಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ.
ಐಪಿಎಲ್ ಪ್ರಾಯೋಜಕತ್ವ: ರೇಸ್‌ನಲ್ಲಿ ಅಮೆಜಾನ್ ಎಂಟ್ರಿ..!.
ಪ್ರತಿ ಐಪಿಎಲ್ ಆವೃತ್ತಿಗೆ ವಿವೋ ಮೊಬೈಲ್ ಬಿಸಿಸಿಐಗೆ 439 ಕೋಟಿ ರೂಪಾಯಿ ನೀಡುತ್ತಿತ್ತು. 2017ರಿಂದ 2021ರ ವರೆಗೆ ಒಪ್ಪಂದ ಮಾಡಿಕೊಂತ್ತು. ಆದರೆ ದಿಢೀರ್ ಬೆಳವಣಿಗೆ ಕಾರಣದಿಂದ ವಿವೋ ಹಿಂದೆ ಸರಿಯಿತು. ಇದು ಬಿಸಿಸಿಐಗೆ ಆರ್ಥಿಕ ನಷ್ಟ ತರಲಿದೆ ಎಂದು್ ಅಭಿಪ್ರಾಯಪಟ್ಟಿದ್ದರು. ಇದೀಗ ಈ ಕುರಿತು ಮಾತನಾಡಿರುವ ಸೌರವ್ ಗಂಗೂಲಿ, ಇದು ಸಣ್ಣ ಬೆಳವಣಿಗೆ. ಇದರಿಂದ ಬಿಸಿಸಿಐ ಆರ್ಥಿಕತೆಗೆ ಯಾವುದೇ ಸಮಸ್ಯೆ ಇಲ್ಲ. ವಿವೋ ಹಿಂದೆ ಸರಿದ ಕಾರಣ ಬಿಸಿಸಿಐಗೆ ಯಾವುದೇ ಸಂಕಷ್ಟವೂ ಎದುರಾಗಲ್ಲ ಎಂದಿದ್ದಾರೆ.
ಇಂಡೋ-ಚೀನಾ ಗಡಿ ಸಮಸ್ಯೆಯಿಂದ ಚೀನಾ ವಸ್ತುಗಳು, ಚೀನಾ ಆ್ಯಪ್, ಚೀನಾ ಕಂಪನಿಗಳು ಸಂಕಷ್ಟಕ್ಕೆ ಬಿದ್ದಿದೆ. ವಿವೋ ಒಪ್ಪಂದ ರದ್ದು ಮಾಡಿರುವುದು ಅವರ ನಿರ್ಧಾರ. ಬಿಸಿಸಿಐ ವಿವೋ ನಿರ್ಧಾರವನ್ನು ಗೌರವಿಸುತ್ತದೆ. ಇದೀಗ ದಿಢೀರ್ ಬೆಳವಣಿಗೆಯಿಂದ ಹಿಂದೆ ಸರಿದಿದೆ. ಇದರಿಂದ ಬಿಸಿಸಿಐಗೆ ಯಾವುದೇ ಸಮಸ್ಯೆ ಇಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.