ಎನ್‌ಸಿಎ ಫಿಸಿಯೋಗೆ ಐಪಿಎಲ್‌ ಫ್ರಾಂಚೈಸಿಗಳಿಂದಲೇ ವಿರೋಧ..!

Suvarna News   | Asianet News
Published : Aug 10, 2020, 08:34 AM IST
ಎನ್‌ಸಿಎ ಫಿಸಿಯೋಗೆ ಐಪಿಎಲ್‌ ಫ್ರಾಂಚೈಸಿಗಳಿಂದಲೇ ವಿರೋಧ..!

ಸಾರಾಂಶ

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾರತೀಯ ಫಿಸಿಯೋ ಥೆರಪಿಸ್ಟ್‌ಗಳನ್ನು ಬಳಸಿಕೊಳ್ಳಲು ಬಿಸಿಸಿಐ ಮುಂದಾಗಿದೆ. ಆದರೆ ಇದಕ್ಕೆ ಫ್ರಾಂಚೈಸಿಗಳಿಂದ ವಿರೋಧ ವ್ಯಕ್ತವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಆ.10): ಯುಎಇಯಲ್ಲಿ ನಡೆಯಲಿರುವ 2020ರ ಐಪಿಎಲ್‌ ಟೂರ್ನಿಗೆ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಫಿಸಿಯೋ ಆಶಿಶ್‌ ಕೌಶಿಕ್‌ ರನ್ನು ಕಳುಹಿಸಲು ಬಿಸಿಸಿಐ ಮುಂದಾಗಿದೆ. ಆದರೆ ಬಿಸಿಸಿಐನ ಈ ನಿರ್ಧಾರಕ್ಕೆ ಐಪಿಎಲ್‌ ಫ್ರಾಂಚೈಸಿಗಳು ವಿರೋಧ ವ್ಯಕ್ತಪಡಿಸಿವೆ. 

ಎನ್‌ಸಿಎ ಫಿಸಿಯೋ, ಟೀಂ ಇಂಡಿಯಾ ಆಟಗಾರರ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿದ್ದಾರೆ. ಹೀಗಾಗಿ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ. ಆದರೆ ಆಯಾ ಫ್ರಾಂಚೈಸಿಗಳು ಈಗಾಗಲೇ ಫಿಸಿಯೋವನ್ನು ಹೊಂದಿವೆ. ಮತ್ತೊಬ್ಬ ಫಿಸಿಯೋ ಅವಶ್ಯಕತೆ ಇಲ್ಲ. ಪಂದ್ಯಾವಳಿಯಲ್ಲಿ ಯಾವುದೇ ಹೊರಗಿನವರಿಗೆ ಆಟಗಾರರೊಂದಿಗೆ ಸಂವಹನ ನಡೆಸಲು ಅವಕಾಶ ನೀಡಬಾರದು ಎಂದು ಫ್ರಾಂಚೈಸಿಗಳು ಅಭಿಪ್ರಾಯಪಟ್ಟಿವೆ ಎನ್ನಲಾಗಿದೆ.

ಈಗಾಗಲೇ ಡೆಲ್ಲಿ ಫ್ರಾಂಚೈಸಿ ಟೀಂ ಇಂಡಿಯಾ ಮಾಜಿ ಫಿಸಿಯೋಥೆರಪಿಸ್ಟ್ ಪ್ಯಾಟ್ರಿಕ್ ಫರ್ಹತ್, ಕೆಕೆಆರ್ ಫ್ರಾಂಚೈಸಿ ಕಮ್ಲೇಶ್ ಜೈನ್, ರಾಜಸ್ಥಾನ ರಾಯಲ್ಸ್ ತಂಡವು ಮಾಜಿ ಟೀಂ ಇಂಡಿಯಾ ಫಿಸಿಯೀ ಜಾನ್ ಗ್ಲಾಸ್ಟರ್ ಅವರನ್ನು ಹೊಂದಿದೆ. ಇಂತಹ ಶ್ರೇಷ್ಠ ಫಿಸಿಯೋಗಳಿರುವಾಗ ತಮಗೆ ಎನ್‌ಸಿಎ ಫಿಸಿಯೋಗಳ ಅವಶ್ಯಕತೆಯಿಲ್ಲ ಎನ್ನುವುದು ಫ್ರಾಂಚೈಸಿಗಳ ವಾದ.

ಚೀನಾ ಪ್ರಾಯೋಜಕತ್ವ ಹಿಂದೆ ಸರಿದ ಬಳಿಕ ಬಿಸಿಸಿಐ ಬಿಗ್‌ಬಾಸ್ ಸೌರವ್ ಗಂಗೂಲಿ ಪ್ರತಿಕ್ರಿಯೆ!

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಟೂರ್ನಿಗೆ ಆತಿಥ್ಯ ವಹಿಸಲಿದ್ದು, ಶಾರ್ಜಾ, ದುಬೈ ಹಾಗೂ ಅಬುದಾಬಿ ಮೈದಾನದಲ್ಲಿ ಟೂರ್ನಿ ನಡೆಯಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 ಐಪಿಎಲ್ ಹರಾಜಿನಿಂದ ಹಿಂದೆ ಸರಿದ ಮತ್ತಿಬ್ಬರು ಸ್ಟಾರ್ ಆಲ್ರೌಂಡರ್ಸ್!
IPL 2026 ಆಟಗಾರರ ಹರಾಜಿನ ಲಿಸ್ಟ್‌ ಫೈನಲ್: 2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರ ಪಟ್ಟಿ ಔಟ್, ಕೇವಲ 2 ಭಾರತೀಯರಿಗೆ ಸ್ಥಾನ!