
ದುಬೈ(ಸೆ.17): ಯುಎಇಯ ಅತಿಯಾದ ಉಷ್ಣ ಮತ್ತು ತೇವ ಭರಿತ ಹವಾಮಾನಕ್ಕೆ ಹೊಂದಿಕೊಳ್ಳುವುದೇ ಒಂದು ಸವಾಲಿನ ಸಂಗತಿ ಎಂದು ಬೆಂಗಳೂರು ರಾಯಲ್ ಚಾಲೆಂಜರ್ಸ್ ಸ್ಟಾರ್ ಆಟಗಾರ, ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಹೇಳಿದ್ದಾರೆ. ಇದೇ ವೇಳೆ ದುಬೈನಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.
ಆರ್‌ಸಿಬಿ ಟ್ವೀಟರ್ ಖಾತೆಗಾಗಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪಂದ್ಯಗಳು ರಾತ್ರಿಯಲ್ಲೇ ನಡೆಯುವುದಾಗಿದ್ದರಿಂದ ಹವಾಮಾನಕ್ಕೆ ಹೊಂದಿಕೊಂಡು ಆಡುವುದು ಪ್ರತಿಯೊಬ್ಬ ಆಟಗಾರರಿಗೂ ಸವಾಲೇ ಆಗಿರಲಿದೆ. ನಾನಂತೂ ಇಂತಹ ಹವಾಮಾನದಲ್ಲಿ ಹೆಚ್ಚು ಪಂದ್ಯಗಳನ್ನಾಡಿದ ಅನುಭವ ಹೊಂದಿಲ್ಲ. ಅಷ್ಟೊಂದು ಉಷ್ಣ ಹವಾಮಾನ ಇಲ್ಲಿಯದು ಎಂದು ಮಿಸ್ಟರ್ 360 ಖ್ಯಾತಿಯ ಎಬಿಡಿ ಹೇಳಿದ್ದಾರೆ.
ಹಿಂದೊಮ್ಮೆ ಚೆನ್ನೈನಲ್ಲಿ ಇಷ್ಟೇ ಉಷ್ಣ ಹವಾಮಾನದಲ್ಲಿ ಆಡಿದ್ದೆ. ಅಂದು ವೀರೇಂದ್ರ ಸೆಹ್ವಾಗ್ ತ್ರಿಬಲ್ ಸೆಂಚುರಿ ಭಾರಿಸಿದ್ದರು. ಅದೇ ಹವಾಮಾನ ಈಗ ದುಬೈನಲ್ಲಿದೆ ಎಂದು ಎಬಿಡಿ ನೆನಪು ಮಾಡಿಕೊಂಡಿದ್ದಾರೆ.
IPL 2020: RCB ನಾಯಕ ಕೊಹ್ಲಿ ಹೇಳಿದ್ರೆ ಬೌಲಿಂಗ್ ಮಾಡಲು ರೆಡಿ ಎಂದ ಎಬಿಡಿ..!
13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಲಿದ್ದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೆಪ್ಟೆಂಬರ್ 21ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.