ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ RR,ಕೆಕೆಆರ್ ತಂಡದಲ್ಲಿ ಮಹತ್ವದ ಬದಲಾವಣೆ!

By Suvarna NewsFirst Published Nov 1, 2020, 7:03 PM IST
Highlights

ಐಪಿಎಲ್ ಲೀಗ್ ಟೂರ್ನಿ ಅಂತಿಮ ಹಂತ ತಲುಪಿದೆ. ಇದೀಗ ಪ್ಲೇ ಆಫ್ ಸ್ಥಾನಕ್ಕೇರಲು ಕೊನೆಯ ಅವಕಾಶ. ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಎರಡೂ ತಂಡಕ್ಕೆ ಗೆಲ್ಲಲೇಬೇಕು. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ದುಬೈ(ನ.01):  ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ 13ನೇ ಆವೃತ್ತಿ ಐಪಿಎಲ್ ಟೂರ್ನಿಯ ಅಂತಿಮ ಲೀಗ್ ಪಂದ್ಯ ಆಡಲು ಸಜ್ಜಾಗಿದೆ. ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳಲು ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ರಾಜಸ್ಥಾನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಕೆಕೆಆರ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಆ್ಯಂಡ್ರೆ ರಸೆಲ್ ಹಾಗೂ ಶಿವಂ ಮಾವಿ ತಂಡ ಸೇರಿಕೊಂಡಿದ್ದಾರೆ.

 

Match 54. Rajasthan Royals XI: R Uthappa, B Stokes, S Samson, S Smith, J Buttler, R Parag, R Tewatia, J Archer, S Gopal, K Tyagi, V Aaron https://t.co/1McKPduIki

— IndianPremierLeague (@IPL)

Match 54. Kolkata Knight Riders XI: S Gill, N Rana, R Tripathi, D Karthik, E Morgan, A Russell, S Narine, P Cummins, K Nagarkoti, S Mavi, V Chakravarthy https://t.co/1McKPduIki

— IndianPremierLeague (@IPL)

ಕೆಕೆಆರ್ ಹಾಗೂ ರಾಜಸ್ಥಾನ 13 ಲೀಗ್ ಪಂದ್ಯದಲ್ಲಿ 6 ಗೆಲುವು ಸಾಧಿಸಿದೆ. ಈ ಮೂಲಕ 12 ಅಂಕ ಸಂಪಾದಿಸಿ ಕ್ರಮವಾಗಿ 6 ಮತ್ತು 7ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದ ತಂಡ 14 ಅಂಕ ಸಂಪಾದಿಸಲಿದೆ. ಈ ಮೂಲಕ ಪ್ಲೇ ಆಫ್ ಸ್ಥಾನದ ಅವಕಾಶ ಸಿಗಲಿದೆ. 
 

click me!