ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ ಎಸ್ ಧೋನಿ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಅಬುಧಾಬಿ(ನ.01): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 53ನೇ ಪಂದ್ಯದಲ್ಲಿಂದು ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ನಾಯಕ ಎಂ ಎಸ್ ಧೋನಿ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.
Match 53. Chennai Super Kings win the toss and elect to field https://t.co/KOgK23WkNn
— IndianPremierLeague (@IPL)ನಿರೀಕ್ಷೆಯಂತೆಯೇ ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು ಮಯಾಂಕ್ ಅಗರ್‌ವಾಲ್ ಹಾಗೂ ಜೇಮ್ಸ್ ನೀಶಮ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಸಿಎಸ್‌ಕೆ ತಂಡದಲ್ಲಿ 3 ಬದಲಾವಣೆ ಮಾಡಲಾಗಿದ್ದು, ಫಾಪ್ ಡುಪ್ಲೆಸಿಸ್, ಇಮ್ರಾನ್ ತಾಹಿರ್ ಹಾಗೂ ಶಾರ್ದೂಲ್ ಠಾಕೂರ್ ತಂಡ ಕೂಡಿಕೊಂಡಿದ್ದಾರೆ.
undefined
ಅಯ್ಯೋ.. ಹೀಗಾಗದೇ ಇರಲಿ; ಸ್ವಲ್ಪ ಯಾಮಾರಿದ್ರೂ ಸಾಕು RCB ಲೀಗ್ ಹಂತದಲ್ಲೇ ಔಟ್..!
ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇ ರೇಸಿನಿಂದ ಹೊರಬಿದ್ದಿದ್ದು, ಗೆಲುವಿನೊಂದಿಗೆ ಟೂರ್ನಿಗೆ ಗುಡ್ ಬೈ ಹೇಳಲು ಎದುರು ನೋಡುತ್ತಿದೆ. ಇನ್ನೊಂದಿಗೆ ಕೆ.ಎಲ್. ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಪ್ಲೇ ಆಫ್ ಪ್ರವೇಶಿಸಲು ಕೊನೆಯ ಕ್ಷಣದ ಪೈಪೋಟಿ ನಡೆಸುತ್ತಿದೆ.
ತಂಡಗಳು ಹೀಗಿವೆ:
ಕಿಂಗ್ಸ್ ಇಲೆವನ್ ಪಂಜಾಬ್:
Match 53. Kings XI Punjab XI: KL Rahul, M Agarwal, C Gayle, M Singh, N Pooran, D Hooda, J Neesham, C Jordan, M Ashwin, R Bishnoi, M Shami https://t.co/KOgK23WkNn
— IndianPremierLeague (@IPL)ಚೆನ್ನೈ ಸೂಪರ್ ಕಿಂಗ್ಸ್:
Match 53. Chennai Super Kings XI: F du Plessis, R Gaikwad, A Rayudu, MS Dhoni, N Jagadeesan, S Curran, R Jadeja, D Chahar, S Thakur, I Tahir, L Ngidi https://t.co/KOgK23WkNn
— IndianPremierLeague (@IPL)