13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅದ್ಭುತ ಪ್ರದರ್ಶನ ತೋರಿದ ಆರ್‌ಸಿಬಿ ಸ್ಪಿನ್ನರನ್ನು ಟೀಂ ಇಂಡಿಯಾ ಕೋಚ್ ಗುಣಗಾನ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ದುಬೈ(ಸೆ.29): ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಮೈದಾನ ಸಾಕ್ಷಿಯಾಯಿತು. ಎರಡು ತಂಡಗಳ ಬ್ಯಾಟ್ಸ್‌ಮನ್‌ಗಳು ಮೈದಾನದಲ್ಲಿ ಅಬ್ಬರಿಸಿ ಬೊಬ್ಬಿರಿದರು.
ಬ್ಯಾಟ್ಸ್‌ಮನ್‌ಗಳ ಆರ್ಭಟದ ನಡುವೆಯೂ ಒಬ್ಬ ಬೌಲರ್ ಮಾತ್ರ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಅದು ಬೇರೆ ಯಾರು ಅಲ್ಲ, ಆರ್‌ಸಿಬಿಯ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್. 4 ಓವರ್ ಬೌಲಿಂಗ್ ಮಾಡಿದ ಸುಂದರ್ ಕೇವಲ 12 ರನ್ ನೀಡಿ 1 ವಿಕೆಟ್ ಕಬಳಿಸುವ ಮೂಲಕ ಗಮನಾರ್ಹ ಪ್ರದರ್ಶನ ತೋರಿದರು.
ಸುಂದರ್ ಅಮೋಘ ಬೌಲಿಂಗ್ ಪ್ರದರ್ಶನ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿಯ ಮನ ಗೆದ್ದಿದೆ. ಚೆನ್ನೈನಿಂದ ವಾಷಿಂಗ್ಟನ್‌ವರೆಗೆ ಇದು ಬ್ಯಾಟ್ಸ್‌ಮನ್‌ಗಳ ಜಗತ್ತು. ಇದು 2020ನೇ ಆವೃತ್ತಿಯ ಐಪಿಎಲ್‌ನಲ್ಲಿದು ಬೆಸ್ಟ್ ಪ್ರದರ್ಶನ ಎಂದು ರವಿಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.
ಸೂಪರ್ ಓವರ್ ಮ್ಯಾಜಿಕ್; ಕೊನೆಗೂ ಗೆದ್ದು ಬೀಗಿದ ಆರ್‌ಸಿಬಿ
In a batsman’s world - from Chennai to Washington. Best IPL performance so far in 2020. Special ✊ pic.twitter.com/xIW97CnIxB
— Ravi Shastri (@RaviShastriOfc)ವಾಷಿಂಗ್ಟನ್ ಸುಂದರ್ ಮುಂಬೈ ಇಂಡಿಯನ್ಸ್‌ನ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಪರದಾಡುವಂತೆ ಮಾಡಿದರು. ಅಪಾಯಕಾರಿ ಬ್ಯಾಟ್ಸ್‌ಮನ್, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರನ್ನು ಸುಂದರ್ ತಾವೆಸೆದ ಮೊದಲ ಓವರ್‌ನಲ್ಲೇ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾಗಿದ್ದರು. ಉಳಿದ 3 ಓವರ್‌ಗಳಲ್ಲಿ ಸುಂದರ್ ಕೇವಲ ಒಂದು ಬೌಂಡರಿಯನ್ನು ಮಾತ್ರ ಬಿಟ್ಟುಕೊಟ್ಟಿದ್ದರು.