
ಅಬುಧಾಬಿ(ಅ.25): ರಾಜಸ್ಥಾನ ರಾಯಲ್ಸ್ 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಉಳಿಯಬೇಕಿದ್ದರೆ ಭಾನುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಲೇಬೇಕಿದೆ. ಈ ಪಂದ್ಯ ರಾಯಲ್ಸ್‌ಗೆ ನಿರ್ಣಾಯಕ ಎನಿಸಿದೆ.
ಕಳೆದ ಪಂದ್ಯದಲ್ಲಿ ಹೈದ್ರಾಬಾದ್ ವಿರುದ್ಧ ಎದುರಾದ 8 ವಿಕೆಟ್‌ಗಳ ಸೋಲಿನಿಂದ ರಾಯಲ್ಸ್ ಹೊರಬಂದು, ಮುಂಬೈ ಎದುರು ಜಯಿಸಬೇಕಿದೆ. ನಂತರದ ಎಲ್ಲಾ ಪಂದ್ಯಗಳಲ್ಲೂ ರಾಜಸ್ಥಾನ ಗೆದ್ದರೆ ಮುಂದಿನ ಹಂತಕ್ಕೇರುವ ಸಾಧ್ಯತೆಯಿದೆ. ಸದ್ಯ 11 ಪಂದ್ಯಗಳಿಂದ 4ರಲ್ಲಿ ಗೆದ್ದಿರುವ ರಾಜಸ್ಥಾನ 8 ಅಂಕಗಳಿಸಿ 7ನೇ ಸ್ಥಾನದಲ್ಲಿದೆ.
ಮತ್ತೊಂದೆಡೆ ಮುಂಬೈ ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ 10 ವಿಕೆಟ್‌ಗಳ ಜಯ ಪಡೆದು, ಅತ್ಯಧಿಕ ನೆಟ್ ರನ್‌ರೇಟ್‌ನೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮುಂಬೈ 7 ಪಂದ್ಯ ಗೆದ್ದು 14 ಅಂಕಗಳಿಸಿದೆ. ಇದೀಗ ರಾಜಸ್ಥಾನ ವಿರುದ್ಧ ಗೆದ್ದು ಪ್ಲೇ ಆಫ್‌ಗೇರುವ ಉತ್ಸಾಹದಲ್ಲಿದೆ.
ದುಬೈನಲ್ಲಿಂದು ಆರ್‌ಸಿಬಿ-ಚೆನ್ನೈ ಫೈಟ್; ಅಗ್ರಸ್ಥಾನದ ಮೇಲೆ ಕೊಹ್ಲಿ ಕಣ್ಣು
ಒಟ್ಟಿನಲ್ಲಿ ಸೂಪರ್ ಸಂಡೇಯ ಎರಡನೇ ಪಂದ್ಯ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆಯಿದೆ. ಒಂದು ಕಡೆ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್, ಇಶನ್ ಕಿಶನ್, ಕೀರಾನ್ ಪೊಲ್ಲಾರ್ಡ್ ಹಾರ್ದಿಕ್ ಪಾಂಡ್ಯ ಅವರನ್ನು ಜೋಫ್ರಾ ಆರ್ಚರ್ ನೇತೃತ್ವದ ರಾಜಸ್ಥಾನ ರಾಯಲ್ಸ್ ಬೌಲರ್ ಯಾವ ರೀತಿ ಕಟ್ಟಿಹಾಕುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಪಿಚ್ ರಿಪೋರ್ಟ್: ಇಲ್ಲಿನ ಪಿಚ್ ಸ್ಪರ್ಧಾತ್ಮಕವಾಗಿದ್ದು, ಮೊದಲು ಬ್ಯಾಟಿಂಗ್ ಮಾಡುವ ತಂಡದ ಸರಾಸರಿ ಮೊತ್ತ 170 ರಿಂದ 180. ಟಾಸ್ ಪ್ರಮುಖ ಪಾತ್ರವಹಿಸಲಿದೆ.
ಸಂಭವನೀಯ ಆಟಗಾರರ ಪಟ್ಟಿ
ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿಕಾಕ್, ರೋಹಿತ್ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ನೇಥನ್ ಕಲ್ಟರ್-ನೈಲ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.
ರಾಜಸ್ಥಾನ ರಾಯಲ್ಸ್: ರಾಬಿನ್ ಉತ್ತಪ್ಪ. ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಸ್ಟೀವ್ ಸ್ಮಿತ್ (ನಾಯಕ), ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಅಂಕಿತ್ ರಜಪೂತ್, ಕಾರ್ತಿಕ್ ತ್ಯಾಗಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.