ಐಪಿಎಲ್ 2020: ಕೆಕೆಆರ್ ಎದುರು ಟಾಸ್ ಗೆದ್ದ ಹೈದರಾಬಾದ್ ಬೌಲಿಂಗ್ ಆಯ್ಕೆ

By Suvarna NewsFirst Published Oct 18, 2020, 3:08 PM IST
Highlights

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 35ನೇ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಫೀಲ್ಡಿಂಗ್ ಆಯ್ದುಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಅಬುಧಾಬಿ(ಅ.18): ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ ನೈಟ್‌ ರೈಡರ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ನಾಯಕ ಡೇವಿಡ್ ವಾರ್ನರ್ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 

have won the toss and they will bowl first against . pic.twitter.com/zvGyv7oFXs

— IndianPremierLeague (@IPL)

ಇನ್ನು ನಿರೀಕ್ಷೆಯಂತೆಯೇ ಕೋಲ್ಕತ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಿದ್ದು, ಹೈದರಾಬಾದ್ ತಂಡದಲ್ಲಿ ಖಲೀಲ್ ಅಹಮ್ಮದ್ ಬದಲಿಗೆ ಬಾಸಿಲ್ ಥಂಪಿ ತಂಡ ಕೂಡಿಕೊಂಡಿದ್ದಾರೆ. ಇನ್ನು ಕೆಕೆಆರ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಕುಲ್ದೀಪ್ ಯಾದವ್ ಹಾಗೂ ಲುಕಿ ಫರ್ಗ್ಯೂಸನ್ ತಂಡ ಕೂಡಿಕೊಂಡಿದ್ದಾರೆ

ಈಗಾಗಲೇ ಕೋಲ್ಕತ ನೈಟ್‌ ರೈಡರ್ಸ್ ತಂಡ ಆಡಿದ 8 ಪಂದ್ಯಗಳ ಪೈಕಿ ತಲಾ 4 ಗೆಲುವು ಹಾಗೂ ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, ಇನ್ನೊಂದು ಕಡೆ ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ 8 ಪಂದ್ಯಗಳಲ್ಲಿ 3  ಗೆಲುವು ಹಾಗೂ 5 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಪ್ರವೇಶದ ದೃಷ್ಟಿಯಿಂದ ಉಭಯ ತಂಡಗಳಿಗೂ ಈ ಪಂದ್ಯ ತುಂಬಾ ಮಹತ್ವದ್ದೆನಿಸಿದೆ.

ತಂಡಗಳು ಹೀಗಿವೆ:

ಸನ್‌ರೈಸರ್ಸ್ ಹೈದರಾಬಾದ್:

Match 35. Sunrisers Hyderabad XI: D Warner, J Bairstow, M Pandey, K Williamson, P Garg, A Samad, V Shankar, R Khan, S Sharma, B Thampi, T Natarajan https://t.co/cGlqOGlOiO

— IndianPremierLeague (@IPL)

ಕೋಲ್ಕತ ನೈಟ್‌ ರೈಡರ್ಸ್:

 

Match 35. Kolkata Knight Riders XI: R Tripathi, S Gill, N Rana, D Karthik, E Morgan, A Russell, P Cummins, L Ferguson, K Yadav, S Mavi, V Chakravarthy https://t.co/cGlqOGlOiO

— IndianPremierLeague (@IPL)
click me!