IPL 2020: ಬುಮ್ರಾ ದಾಳಿಗೆ ರಾಜಸ್ಥಾನ ಉಡೀಸ್, ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟ ಮುಂಬೈ!

By Suvarna News  |  First Published Oct 6, 2020, 11:18 PM IST

ರಾಜಸ್ಥಾನ ರಾಯಲ್ಸ್ ವಿರುದ್ಧದ 20 ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ನಗೆ ಬೀರಿದೆ.  ಜಸ್ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್ 136 ರನ್‌ಗೆ ಆಲೌಟ್ ಆಗಿದೆ


ಅಬು ಧಾಬಿ(ಅ.06):  ರಾಜಸ್ಥಾನ ರಾಯಲ್ಸ್ ವಿರುದ್ಧ 57 ರನ್ ಗೆಲುವು ದಾಖಲಿಸೋ ಮೂಲಕ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಜೋಸ್ ಬಟ್ಲರ್ ಅಬ್ಬರಿಸಿದರೂ, ಜಸ್ಪ್ರೀತ್ ಬುಮ್ರಾ ದಾಳಿಗೆ ರಾಜಸ್ಥಾನ ತತ್ತರಿಸಿತು. 137  ರನ್‌ಗೆ ಆಲೌಟ್ ಆಗೋ ಮೂಲಕ ಸೋಲೊಪ್ಪಿಕೊಂಡಿತು.

194 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಟ್ರೆಂಟ್ ಬೋಲ್ಟ್ ದಾಳಿಗೆ ರಾಜಸ್ಥಾನ ಬೆಚ್ಚಿ ಬಿದ್ದಿತು.  ಯಶಸ್ವಿ ಜೈಸ್ವಾಲ್ ಡಕೌಟ್ ಆದರು. ಇತ್ತ ನಾಯಕ ಸ್ಟೀವ್ ಸ್ಮಿತ್ ಕೇವಲ 6 ರನ್ ಸಿಡಿಸಿ ಔಟಾದರು. ಆದರೆ ಜೋಸ್ ಬಟ್ಲರ್ ತಂಡಕ್ಕೆ ಆಸರೆಯಾದರು.

Latest Videos

undefined

ಸಂಜು ಸಾಮ್ಸನ್ ಖಾತೆ ತೆರೆಯುವ ಮುನ್ನವೇ ನಿರ್ಗಮಿಸಿದರು. 12 ರನ್‌ಗೆ 3 ವಿಕೆಟ್ ಕಳೆದುಕೊಂಡ ರಾಜಸ್ಥಾನ ರಾಯಲ್ಸ್ ಸಂಕಷ್ಟಕ್ಕೆ ಸಿಲುಕಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಜೋಸ್ ಬಟ್ಲರ್‌ಗೆ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ಮಹಿಪಾಲ್ ಲೊಮ್ರೊರ್ 11 ರನ್ ಸಿಡಿಸಿ ಔಟಾದರು.

ದಿಟ್ಟ ಹೋರಾಟ ನೀಡಿದ ಜೋಸ್ ಬಟ್ಲರ್ ಹಾಫ್ ಸೆಂಚುರಿ ಸಿಡಿಸಿದರು. 44 ಎಸೆತದಲ್ಲಿ 70 ರನ್ ಸಿಡಿಸಿ ಜೋಸ್ ಬಟ್ಲರ್ ಔಟಾದರು. ಇತ್ತ ಟಾಮ್ ಕುರನ್ 15 ರನ್ ಸಿಡಿಸಿ ಔಟಾದರು. ರಾಹುಲ್ ಟಿವಾಟಿಯಾ ಕೇವಲ 5 ರನ್ ಸಿಡಿಸಿ ನಿರ್ಗಮಿಸಿದರು. 
  
ಅಂತಿಮವಾಗಿ ರಾಜಸ್ಥಾನ ರಾಯಲ್ಸ್ 18.1 ಓವರ್‌ಗಳಲ್ಲಿ 136 ರನ್ ಸಿಡಿಸಿ ಆಲೌಟ್ ಆಯಿತು.  ಮುಂಬೈ ಇಂಡಿಯನ್ಸ್ 57 ರನ್ ಗೆಲುವು ದಾಖಲಿಸಿತು.  ಜಸ್ಪ್ರೀತ್ ಬುಮ್ರಾ 4, ಟ್ರೆಂಟ್ ಬೋಲ್ಟ್ ಹಾಗೂ ಜೇಮ್ಸ್ ಪ್ಯಾಟಿಸನ್ಸ್ 2 ವಿಕೆಟ್ ಕಬಳಿಸಿ ಮಿಂಚಿದರು.

click me!