13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ದಿಢೀರನೇ ಹೊರಬಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ವಿರುದ್ಧ ಸಿಎಸ್‌ಕೆ ಬಾಸ್ ಕಿಡಿಕಾರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಚೆನ್ನೈ(ಸೆ.01): ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಸುರೇಶ್ ರೈನಾ ಹೊರಬಿದ್ದ ಬೆನ್ನಲ್ಲೇ ಸಿಎಸ್‌ಕೆ ಮಾಲೀಕ ಎನ್. ಶ್ರೀನಿವಾಸನ್ ಎಡಗೈ ಬ್ಯಾಟ್ಸ್‌ಮನ್ ಮೇಲೆ ಕಿಡಿಕಾರಿದ್ದಾರೆ.
ಸುರೇಶ್ ರೈನಾ ಹೋಟೆಲ್ ವಿಚಾರದಲ್ಲಿ ಜಗಳ ಮಾಡಿಕೊಂಡು ಭಾರತಕ್ಕೆ ಮರಳಿದ್ದಾರೆ ಎಂದು ವರದಿಯಾಗಿತ್ತು. ಧೋನಿಗೆ ನೀಡಲಾಗಿದ್ದ ಅತ್ಯುತ್ತಮ ಸೌಲಭ್ಯವಿರುವ ಹೋಟೆಲ್ ಕೊಠಡಿಯ ರೀತಿಯ ಕೊಠಡಿಯೇ ನನಗೂ ಬೇಕು ಎಂದು ರೈನಾ ಜಗಳ ಮಾಡಿದ್ದರು ಎಂದೆಲ್ಲಾ ವರದಿಯಾಗಿತ್ತು. ಇದರ ಬೆನ್ನಲ್ಲೇ ಶ್ರೀನಿವಾಸನ್ ಎಡಗೈ ಬ್ಯಾಟ್ಸ್‌ಮನ್ ಮೇಲೆ ಹರಿಹಾಯ್ದಿದ್ದಾರೆ.
undefined
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಇಬ್ಬರು ಆಟಗಾರರು ಸೇರಿದಂತೆ 13 ಮಂದಿಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದು, ಎಲ್ಲಾ ಆಟಗಾರರು ಸದ್ಯ ಹೋಟೆಲ್‌ನಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಕೊರೋನಾ ಭೀತಿಯಿಂದಾಗಿ ರೈನಾ ಹಿಂದೆ ಸರಿದಿದ್ದರು ಎನ್ನಲಾಗಿತ್ತು.
ಕೆಲವರಿಗೆ ಯಶಸ್ಸು ತಲೆಗೇರಿದಾಗ ಹೀಗಾಗುತ್ತದೆ. ನಾನು ಈಗಾಗಲೇ ಧೋನಿ ಅವರೊಂದಿಗೆ ಮಾತನಾಡಿದ್ದಾನೆ. ಇನ್ನೂ ಆಟಗಾರರ ಸಂಖ್ಯೆ ಕಡಿಮೆಯಾದರೂ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಇದೇ ವೇಳೆ ನಡೆದ ಜೂಮ್ ಮೀಟಿಂಗ್ ವೇಳೆ ಎಲ್ಲರೂ ಸೇಫ್ ಆಗಿರಲು ಧೋನಿ ತಿಳಿಸಿದ್ದಾರೆ ಎಂದು ಶ್ರೀನಿವಾಸನ್ ಹೇಳಿದ್ದಾರೆ.
ಸುರೇಶ್ ರೈನಾ ಕಹಾನಿಗೆ ಮತ್ತೊಂದು ಟ್ವಿಸ್ಟ್; ಜಗಳ ಮಾಡಿಕೊಂಡು ಹೊರ ಬಂದ್ರಾ ಸಿಎಸ್‌ಕೆ ಬ್ಯಾಟ್ಸ್‌ಮನ್.!
ಟೂರ್ನಿ ಆರಂಭವಾಗುವುದಕ್ಕಿಂತ ಮೊದಲೇ ಸುರೇಶ್ ರೈನಾ ದುಬೈ ಬಿಟ್ಟು ಭಾರತಕ್ಕೆ ಬಂದಿದ್ದರಿಂದ ಅವರಿಗೆ ಸಿಗಬೇಕಿದ್ದ 11 ಕೋಟಿ ರುಪಾಯಿ ಹಣವನ್ನು ಅವರು ಕಳೆದುಕೊಳ್ಳಲಿದ್ದಾರೆ ಎಂದು ಶ್ರೀನಿವಾಸನ್ ತಿಳಿಸಿದ್ದಾರೆ.
ಸುರೇಶ್ ರೈನಾ ಮಾವ ಡಕಾಯಿತರ ಹೇಯ ಕೃತ್ಯಕ್ಕೆ ಬಲಿಯಾಗಿದ್ದರು. ಇದರ ಬೆನ್ನಲ್ಲೇ ತಮ್ಮ ಮಕ್ಕಳು ಭಯಗೊಂಡಿದ್ದು ಅವರಿಗೋಸ್ಕರ ನಾನು ತವರಿಗೆ ಮರಳಿದ್ದೇನೆ. ನನ್ನ ಮಕ್ಕಳಿಗಿಂತ ಐಪಿಎಲ್ ದೊಡ್ಡದೇನಲ್ಲ ಎಂದು ಸುರೇಶ್ ರೈನಾ ಹೇಳಿದ್ದರು.