
ಅಬುಧಾಬಿ(ಅ.03): 3 ಪಂದ್ಯಗಳಲ್ಲಿ ತಲಾ 2 ಗೆಲುವು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಶನಿವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಎದುರಾಗಲಿವೆ.
ಈ ಆವೃತ್ತಿಯ ಮೊದಲ ಮಧ್ಯಾಹ್ನ ಪಂದ್ಯ ಇದಾಗಿದ್ದು, ಇಬ್ಬನಿಯ ಸಮಸ್ಯೆ ಇರುವುದಿಲ್ಲ. ಆದರೆ ಸುಡು ಬಿಸಿಲಿನಲ್ಲಿ ಆಟಗಾರರು ದಣಿಯಲಿದ್ದಾರೆ. ಈ ಆವೃತ್ತಿಯ ಮೊದಲೆರಡು ಪಂದ್ಯವನ್ನು ಶಾರ್ಜಾದ ಸಣ್ಣ ಮೈದಾನದಲ್ಲಿ ಆಡಿದ್ದ ರಾಜಸ್ಥಾನ, ಕಳೆದ ಪಂದ್ಯವನ್ನು ಕೆಕೆಆರ್ ವಿರುದ್ಧ ದುಬೈನಲ್ಲಿ ಆಡಿತ್ತು. ಈ ಪಂದ್ಯದಲ್ಲಿ ತಂಡದ ಲೆಕ್ಕಾಚಾರ ತಲೆಕೆಳಗಾಗಿತ್ತು. ಈ ಕ್ರೀಡಾಂಗಣವೂ ದೊಡ್ಡದಾಗಿದ್ದು, ದೊಡ್ಡ ಹೊಡೆತಗಳನ್ನು ಬಾರಿಸುವುದು ಸವಾಲಾಗಿ ಪರಿಣಮಿಸಲಿದೆ.
"
ಆರ್‌ಸಿಬಿ ತಂಡ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದ್ದರೂ ಡೆತ್ ಬೌಲಿಂಗ್ ಸಮಸ್ಯೆ ಇದ್ದೇ ಇದೆ. ಮುಂಬೈ ವಿರುದ್ಧ ಟೈ ಆದ ಪಂದ್ಯ ದಲ್ಲಿ ಆರ್‌ಸಿಬಿ ಕೊನೆ 4 ಓವರಲ್ಲಿ 79 ರನ್ ಚಚ್ಚಿಸಿಕೊಂಡಿತ್ತು. ಡೆತ್ ಓವರ್ ಬೌಲಿಂಗ್ ಸಮಸ್ಯೆ ಜೊತೆಗೆ ಕ್ಷೇತ್ರರಕ್ಷಣೆಯಲ್ಲೂ ಆರ್‌ಸಿಬಿ ಸುಧಾರಣೆ ಕಾಣಬೇಕಿದೆ. ದೇವದತ್ ಪಡಿಕ್ಕಲ್, ಎಬಿ ಡಿ ವಿಲಿಯರ್ಸ್, ಆ್ಯರೋನ್ ಫಿಂಚ್ ಲಯದಲ್ಲಿದ್ದಾರೆ. ಆದರೆ ನಾಯಕ ವಿರಾಟ್ ಕೊಹ್ಲಿ ಮೂರೂ ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದು, ಈ ಪಂದ್ಯದಲ್ಲಿ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.
IPL 2020: ಸೋಲಿನಿಂದ ಹೊರಬಂದ ಹೈದರಾಬಾದ್, CSK ವಿರುದ್ಧ 7 ರನ್ ಗೆಲುವು!
ರಾಯಲ್ಸ್ ಸಹ ತನ್ನ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿಕೊಳ್ಳಲು ಎದುರು ನೋಡುತ್ತಿದೆ. ತಂಡದ ಮಧ್ಯಮ ಕ್ರಮಾಂಕ ನಿರೀಕ್ಷಿತ ಪ್ರದರ್ಶನ ತೋರದಿರುವುದು ಸಹ ತಲೆನೋವು ತಂದಿದೆ. ಈ ಪಂದ್ಯ ದಲ್ಲಿ ಕೆಲ ಬದಲಾವಣೆಗಳನ್ನು ಕಾಣಬಹುದು.
ಪಿಚ್ ರಿಪೋರ್ಟ್: ಅಬುಧಾಬಿಯಲ್ಲಿ ಮೊದಲ ಇನ್ನಿಂಗ್‌ಸ್ನ ಸರಾಸರಿ ಮೊತ್ತ 160-170. ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟ್ ಮಾಡುವುದೇ ಉತ್ತಮ ಎಂದು ವಿಶ್ಲೇಷಿಸಲಾಗಿದೆ. ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ಸಿಗುವ ನಿರೀಕ್ಷೆ ಇದೆ.
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.