ಸಿರಾಜ್ ಬೆಂಕಿ ಎಸೆತ 84 ರನ್‌ಗೆ ಉರುಳಿ ಕೆಕೆಆರ್‌ ಕಳಪೆ ಮೊತ್ತ!

Published : Oct 21, 2020, 09:24 PM IST
ಸಿರಾಜ್ ಬೆಂಕಿ ಎಸೆತ 84 ರನ್‌ಗೆ ಉರುಳಿ ಕೆಕೆಆರ್‌ ಕಳಪೆ ಮೊತ್ತ!

ಸಾರಾಂಶ

ಅತಿ ಕನಿಷ್ಠ ಮೊತ್ತಕ್ಕೆ ಕೆಕೆಆರ್ ಕಟ್ಟಿಹಾಕಿದ ಆರ್‌ಸಿಬಿ/  ನೈಟ್ ರೈಡರ್ಸ್ ತಂಡವನ್ನು ಕೇವಲ 84 ರನ್ ನಿಯಂತ್ರಿಸಿದ ಬೆಂಗಳೂರು/ ಈ ಸೀಸನ್ ನ ಅತಿ ಕಡಿಮೆ ಮೊತ್ತ/ 

ಅಬುದಾಬಿ(ಅ. 21)  ಭರ್ಜರಿ ಬೌಲಿಂಗ್ ಪ್ರದರ್ಶನ ಮಾಡಿದ ಆರ್ ಸಿಬಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಕೇವಲ 84 ರನ್ ಗೆ ಕಟ್ಟಿಹಾಕಿದೆ. ಮಾರಕ ಎಸೆತಗಳನ್ನು ಎಸೆದ ಮಹಮದ್ ಸಿರಾಜ್ ಕೋಲ್ಕತ್ತಾದ ಬ್ಯಾಟಿಂಗ್ ಶಕ್ತಿ ಪುಡಿಪುಡಿ ಮಾಡಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತ್ತಾಗೆ ಆರಂಭದಲ್ಲೆ ಸಿರಾಜ್ ಆಘಾತ ನೀಡಿದ್ದರು.  ತಮ್ಮ ವೃತ್ತಿ ಜೀವನ್ ಮೂನ್ನೂರನೇ ಇಯಾನ್ ಮಾರ್ಗನ್ ಒಬ್ಬರನ್ನು ಬಿಟ್ಟರೆ ಯಾರೂ ಪ್ರತಿರೋಧ ತೋರಲಿಲ್ಲ. ಕೊನೆಯಲ್ಲಿ ಪೆರ್ಗೂಸನ್ ಮತ್ತು ಕುಲದೀಪ್ ಯಾದವ್ ತಡೆ ಹಾಕಿ ರನ್ ಗತಿ ಕೊಂಚ ಏರಿಸಿದರು. ನಾಲ್ಕು ಓವರ್  ನಲ್ಲಿ ಕೇವಲ ಎಂಟು ರನ್ ನೀಡಿ ಮೂರು ವಿಕೆಟ್ ಕಿತ್ತ ಸಿರಾಜ್ ಮೊದಲಾರ್ಧದ ಹೀರೋ ಆದರು.

ಮೊದಲಿನಿಂದಲೂ ಆಕ್ರಮಣಕಾರಿ ತಂತ್ರಗಾರಿಗೆ ಪ್ರದರ್ಶನ ಮಾಡಿದ ಆರ್ಸಿಬಿ ಕ್ಷೇತ್ರ ರಕ್ಷಣೆಯಲ್ಲೂ ಹಿಡಿತ ಸಾಧಿಸಿತ್ತು. ಇದೀಗ ತಂಡ ಚೇಸಿಂಗ್ ಗೆ ಇಳಿಯಬೇಕಾಗಿದ್ದು ಎಷ್ಟು ಓವರ್ ನಲ್ಲಿ ಗುರಿ ಮುಟ್ಟಿ ತನ್ನ ರನ್ ರೇಟ್ ಹೆಚ್ಚಳ ಮಾಡಿಕೊಳ್ಳುತ್ತದೆ ನೋಡಬೇಕಿದೆ. ಭಾರೀ ಅಂತರದಲ್ಲಿ ಜಯ ಸಾಧಿಸಿದರೆ ದೆಹಲಿ ಹಿಂದಿಕ್ಕಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ಇದು ಈ ಸೀಸನ್ ನ ಅತಿ ಕಡಿಮೆ ಸ್ಕೋರ್ ಆಗಿದ್ದು ಈ ಹಿಂದೆ ಆರ್ ಸಿಬಿ ಕೆಕೆಆರ್ ಎದುರೆ 49 ರನ್  ದಾಖಲಿಸಿತ್ತು. 

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 ಐಪಿಎಲ್ ಹರಾಜಿನಿಂದ ಹಿಂದೆ ಸರಿದ ಮತ್ತಿಬ್ಬರು ಸ್ಟಾರ್ ಆಲ್ರೌಂಡರ್ಸ್!
IPL 2026 ಆಟಗಾರರ ಹರಾಜಿನ ಲಿಸ್ಟ್‌ ಫೈನಲ್: 2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರ ಪಟ್ಟಿ ಔಟ್, ಕೇವಲ 2 ಭಾರತೀಯರಿಗೆ ಸ್ಥಾನ!