
ನವದೆಹಲಿ(ಅ.10): ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ ಜನಪ್ರಿಯ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದ ವಿಶ್ವದ ಟಾಪ್ 5 ಕ್ರೀಡಾ ತಂಡಗಳಲ್ಲಿ 4ನೇ ಸ್ಥಾನ ಪಡೆದಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಇನ್‌ಸ್ಟಾಗ್ರಾಮ್ ಬಳಕೆದಾರರು ಈ ಕ್ರೀಡಾ ತಂಡಗಳ ಬಗ್ಗೆ ಅತಿ ಹೆಚ್ಚು ಚರ್ಚೆ ನಡೆಸಿದ್ದಾರೆ ಎಂದು ಡಿಪೋರ್ಟಸಿ ಫೈನಾನ್ಜಸ್.ಕಾಂ ತನ್ನ ಸಮೀಕ್ಷೆ ವರದಿಯಲ್ಲಿ ಹೇಳಿಕೊಂಡಿದೆ. ಸಮೀಕ್ಷೆಗೆ ಲೈಕ್ ಹಾಗೂ ಕಾಮೆಂಟ್ ಎರಡನ್ನೂ ಪರಿಗಣಿಸಲಾಗಿದ್ದು, ಆರ್‌ಸಿಬಿ ತಂಡವನ್ನು 84.6 ಕೋಟಿ ಜನರು ತಮ್ಮ ಚರ್ಚೆಗೆ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.
ಟಾಪ್ 5 ಪಟ್ಟಿಯಲ್ಲಿ ಬಾರ್ಸಿಲೋನಾ ಎಫ್‌ಸಿ (188 ಕೋಟಿ), ಮ್ಯಾನ್ ಯುಟಿಡಿ (94.0 ಕೋಟಿ), ಎಲ್‌ಎಫ್‌ಸಿ (86.6 ಕೋಟಿ) ಮೊದಲ 3 ಸ್ಥಾನದಲ್ಲಿವೆ. ಆರ್‌ಸಿಬಿ ನಂತರದ ಸ್ಥಾನದಲ್ಲಿ ಚೆಲ್ಸಾ ಎಫ್‌ಸಿ (79.9 ಕೋಟಿ) ಇದೆ.
ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ಸಿಕ್ಕಾಪಟ್ಟೆ ಚುರುಕಾಗಿದ್ದು, ಸಾಕಷ್ಟು ವಿಭಿನ್ನ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದೆ. ಇದರ ಜತೆಗೆ ಪ್ರತಿ ಪಂದ್ಯದ ಮುಕ್ತಾಯದ ಬಳಿಕ ಅನಾಲಿಸಿಸ್ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿದೆ. ಈ ಕಾರಣಕ್ಕಾಗಿಯೇ 10 ಲಕ್ಷ ಚಂದದಾರರನ್ನು ಹೊಂದಿದ ಏಕೈಕ ಐಪಿಎಲ್ ಫ್ರಾಂಚೈಸಿ ಎನ್ನುವ ಹೆಗ್ಗಳಿಕೆ ಆರ್‌ಸಿಬಿಯದ್ದು. ಇನ್ನು ಕಳೆದ ತಿಂಗಳನಲ್ಲಿ ಹೊಸದಾಗಿ ಆರ್‌ಸಿಬಿ ಯೂಟ್ಯೂಬ್ ಚಾನೆಲ್‌ಗೆ 5 ಲಕ್ಷ ಚಂದಾದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.
"
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.