ಶಾರ್ಜಾ(ಅ.09): ರಾಜಸ್ಥಾನ ರಾಯಲ್ಸ್ ವಿರುದ್ಧದ 23ನೇ ಐಪಿಎಲ್ ಲೀಗ್ ಪಂದ್ಯದಲ್ಲಿ 46 ರನ್ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೇರಿದೆ. ಇಷ್ಟೇ ಅಲ್ಲ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ತಂಡ ಅನ್ನೋದನ್ನು ಮತ್ತೆ ಸಾಬೀತು ಮಾಡಿದೆ.
185 ರನ್ ಟಾರ್ಗೆಟ್ ಪೆಡದ ರಾಜಸ್ಥಾನ ರಾಯಲ್ಸ್ ಕೂಡ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಜೋಸ್ ಬಟ್ಲರ್ 13 ರನ್ ಸಿಡಿಸಿ ಔಟಾದರು. ಆದರೆ ಯಶಸ್ವಿ ಜೈಸ್ವಾಲ್ ಹೋರಾಟ ಮುಂದುವರಿಸಿದರು. ಇತ್ತ ನಾಯಕ ಸ್ಟೀವ್ ಸ್ಮಿತ್ 24 ರನ್ ಸಿಡಿಸಿ ನಿರ್ಗಿಸಿದರು.
undefined
ಸಂಜು ಸಾಮ್ಸನ್ ಹಾಗೂ ಮಹೀಪಾಲ್ ಲೊಮ್ರೊರ್ ಅಬ್ಬರಿಸಿಲ್ಲ. ಹಿಂದಿನ ಪಂದ್ಯದಲ್ಲಿ ಬೌಂಡರಿ ಸಿಕ್ಸರ್ ಮೂಲಕ ಅಬ್ಬರಿಸಿದ ಜೋಫ್ರಾ ಆರ್ಚರ್, ಡೆಲ್ಲಿ ವಿರುದ್ಧ ಸೈಲೆಂಟ್ ಆದರು. ಇನ್ನು ಆ್ಯಂಡ್ರೂ ಟೈ 6 ರನ್ ಸಿಡಿಸಿ ನಿರ್ಗಿಸಿದರು. ಹೀಗಾಗಿ ತಂಡವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ರಾಹುಲ್ ಟಿವಾಟಿಯಾ ಹೆಗಲ ಮೇಲಿ ಬಿತ್ತು.
ರಾಹುಲ್ ಟಿವಾಟಿಯಾ ಅಬ್ಬರ ಆರಂಭಿಸಿದರು. ರನ್ ಗಳಿಸಲು ಪರದಾಡಿದ ರಾಜಸ್ಥಾನ ತಂಡಕ್ಕೆ ರಾಹುಲ್ ಟಿವಾಟಿಯಾ ಬ್ಯಾಟಿಂಗ್ ಗೆಲುವಿನ ಆಸೆ ಚಿಗುರಿಸಿತು. ರಾಜಸ್ತಾನ ಗೆಲುವಿಗೆ ಅಂತಿಮ 12 ಎಸೆತದಲ್ಲಿ 56 ರನ್ ಅವಶ್ಯಕತೆ ಇತ್ತು. ರಾಹುಲ್ ಟಿವಾಟಿಯಾ 38 ರನ್ ಸಿಡಿಸಿ ಔಟಾದರು. ಇದರೊಂದಿಗೆ ರಾಜಸ್ಥಾನ ರಾಯಲ್ಸ್ ಸೋಲು ಖಚಿತಗೊಂಡಿತು.
ಕಾರ್ತಿಕ್ ತ್ಯಾಗಿ ಹಾಗೂ ವರುಣ್ ಆ್ಯರೋನ್ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಿಲ್ಲ. 19.4 ಓವರ್‌ಗಳಲ್ಲಿ ರಾಜಸ್ಥಾನ ರಾಯಲ್ಸ್ 138 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಡೆಲ್ಲಿ 46 ರನ್ ಗೆಲುವು ದಾಖಲಿಸಿತು. ರಾಜಸ್ಥಾನ 4ನೇ ಸೋಲಿಗೆ ಗುರಿಯಾಯಿತು.