ಐಪಿಎಲ್ 2020: ಮುಂಬೈಗೆ ಟಕ್ಕರ್ ಕೊಡುವ ತವಕದಲ್ಲಿ ಕೋಲ್ಕತ ನೈಟ್‌ ರೈಡರ್ಸ್

By Kannadaprabha NewsFirst Published Sep 23, 2020, 9:18 AM IST
Highlights

13ನೇ ಆವೃತ್ತಿಯಲ್ಲಿ ಐಪಿಎಲ್‌ ಟೂರ್ನಿಯ 5ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಬಲಿಷ್ಠ ಕೋಲ್ಕತ ನೈಟ್ ರೈಡರ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಅಬುಧಾಬಿ(ಸೆ.23): ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್‌ ವಿರುದ್ಧ ಸೋಲುವ ಮೂಲಕ 13ನೇ ಆವೃತ್ತಿಯ ಐಪಿಎಲ್‌ ಅಭಿಯಾನ ಆರಂಭಿಸಿರುವ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಈ ಸೋಲಿನ ಆಘಾತದಿಂದ ಹೊರಬರುವ ನಿರೀಕ್ಷೆಯಲ್ಲಿದೆ. ಬುಧವಾರ ಕೋಲ್ಕತಾ ನೈಟ್‌ರೈಡ​ರ್‍ಸ್ ತಂಡ ವಿರುದ್ಧ ಮುಂಬೈ ಸೆಣಸಾಟ ನಡೆಸಲಿದ್ದು, ಗೆಲುವಿನ ಖಾತೆ ಆರಂಭಿಸುವ ನಿರೀಕ್ಷೆಯಲ್ಲಿದೆ.

ಅಂಕಿ-ಅಂಶಗಳ ಲೆಕ್ಕಾಚಾರದಲ್ಲಿ ಕೆಕೆಆರ್‌ಗಿಂತ ಮುಂಬೈ ಇಂಡಿಯನ್ಸ್‌ ಬಲಿಷ್ಠವಾಗಿದ್ದು, ಇದುವರೆಗೂ 2 ತಂಡಗಳು ಐಪಿಎಲ್‌ನಲ್ಲಿ 25 ಬಾರಿ ಮುಖಾಮುಖಿಯಾಗಿದ್ದು ಕೆಕೆಆರ್‌ 19 ಬಾರಿ ಗೆಲುವು ಸಾಧಿಸಿದೆ. ಆದರೆ, ಯುಎಇಯಲ್ಲಿ ಮುಂಬೈ ಇಂಡಿಯನ್ಸ್‌ ಅದೃಷ್ಟಚೆನ್ನಾಗಿಲ್ಲ ಎಂದೇ ಹೇಳಬಹುದು. ಅರಬ್ಬರ ನಾಡಿನಲ್ಲಿ ಮುಂಬೈ ಇದುವರೆಗೂ ಸತತ 6 ಪಂದ್ಯಗಳಲ್ಲಿ ಸೋಲುಂಡಿದೆ. ಟೂರ್ನಿಯಲ್ಲಿ ಕಮ್‌ಬ್ಯಾಕ್‌ ಆಗಬೇಕಾದರೆ ಮುಂಬೈ ಈ ಸೋಲಿನ ಸುಳಿಯಿಂದ ಹೊರಬರಬೇಕಿದೆ.

IPL 2020: ರಾಜಸ್ಥಾನ ರಾಯಲ್ಸ್ ಹೊಡೆತಕ್ಕೆ ಕೊಚ್ಚಿ ಹೋದ ಚೆನ್ನೈ!

ಮುಂಬೈ ಅನ್ನು ಮಣಿಸುವ ಮೂಲಕ ಶುಭಾರಂಭ ಮಾಡುವ ಲೆಕ್ಕಾಚಾರದಲ್ಲಿ ಕೆಕೆಆರ್‌ ಇದ್ದು, ಸುನೀಲ್‌ ನರೇನ್‌, ಆಂಡ್ರೆ ರಸೆಲ್‌ರಂತಹ ಮ್ಯಾಚ್‌ ವಿನ್ನಿಂಗ್‌ ಆಲ್‌ರೌಂಡರ್‌ಗಳು ಕೋಲ್ಕತಾದ ಪ್ರಮುಖ ಟ್ರಂಪ್‌ ಕಾರ್ಡ್‌ಗಳಾಗಿದ್ದಾರೆ. ಇಯಾನ್‌ ಮಾರ್ಗನ್‌, ದಿನೇಶ್‌ ಕಾರ್ತಿಕ್‌ರಂತಹ ಅನುಭವಿ ದಾಂಡಿಗರು, ಡೆತ್‌ ಓವರ್‌ ಸ್ಪೆಷಲಿಸ್ಟ್‌, ಕನ್ನಡಿಗ ಪ್ರಸಿದ್‌್ಧ ಕೃಷ್ಣ ಕುಲದೀಪ್‌ ಯಾದವ್‌ ಬೌಲಿಂಗ್‌ ಬಲ ತಂಡಕ್ಕಿದೆ.

ಸಂಭವನೀಯ ಆಟಗಾರರ ಪಟ್ಟಿ

ಕೆಕೆಆರ್‌

ಸುನಿಲ್‌ ನರೇನ್‌, ಶುಭ್‌ಮನ್‌ ಗಿಲ್‌, ನಿತೇಶ್‌ ರಾಣಾ, ಇಯಾನ್‌ ಮಾರ್ಗನ್‌, ದಿನೇಶ್‌ ಕಾರ್ತಿಕ್‌(ನಾಯಕ), ಆಂಡ್ರೆ ರಸೆಲ್‌, ಸಿದ್ಧೇಶ್‌ ಲ್ಯಾಡ್‌, ಪ್ಯಾಟಿ ಕಮಿನ್ಸ್‌, ಕುಲದೀಪ್‌ ಯಾದವ್‌, ಪ್ರಸಿದ್‌್ಧ ಕೃಷ್ಣ, ಶಿವಂ ಮಾವಿ/ ಕಮಲೇಶ್‌ ನಾಗರಕೋಟಿ

ಮುಂಬೈ

ಕ್ವಿಂಟನ್‌ ಡಿ ಕಾಕ್‌, ರೋಹಿತ್‌ ಶರ್ಮಾ(ನಾಯಕ), ಸೂರ್ಯಕುಮಾರ್‌ ಯಾದವ್‌, ಸೌರಭ್‌ ತಿವಾರಿ, ಹಾರ್ದಿಕ್‌ ಪಾಂಡ್ಯ, ಕೀರನ್‌ ಪೊಲ್ಲಾರ್ಡ್‌, ಕೃನಾಲ್‌ ಪಾಂಡ್ಯ, ಜೇಮ್‌ ಪ್ಯಾಟಿನ್‌ಸನ್‌, ರಾಹುಲ್‌ ಚಹಾರ್‌, ಜಸ್ಟ್ರೀತ್‌ ಬುಮ್ರಾ, ಟ್ರೆಂಟ್‌ ಬೌಲ್ಟ್‌

ಮುಖಾಮುಖಿ: 25

ಮುಂಬೈ: 19

ಕೆಕೆಆರ್‌: 6

ಪಿಚ್‌ ರಿಪೋರ್ಟ್‌: ಅಬುಧಾಬಿ ನಿಧಾನ ಗತಿಯ ಪಿಚ್‌ ಆಗಿದ್ದು, ಸ್ಪಿನ್ನರ್‌ಗಳ ಪಾತ್ರ ಮಹತ್ವದ್ದಾಗಿದೆ. ಟಾಸ್‌ ಗೆದ್ದ ತಂಡ ಫೀಲ್ಡಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 160-170 ರನ್‌ ನಿರೀಕ್ಷಿಸಲಾಗಿದೆ.

ಪಂದ್ಯ ಆರಂಭ: ರಾತ್ರಿ 7.30,

ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍

click me!