ಐಪಿಎಲ್‌ ವೇಳೆ ಆಟ​ಗಾ​ರ​ರಿಗೆ 5 ದಿನ​ಕ್ಕೊಮ್ಮೆ ಕೋವಿಡ್‌ ಪರೀಕ್ಷೆ

By Suvarna News  |  First Published Aug 5, 2020, 8:41 AM IST

ಯುಎಇನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿ 5 ದಿನಗಳಿಗೊಮ್ಮೆ ಕೋವಿಡ್ ಟೆಸ್ಟ್ ಮಾಡಲು ಬಿಸಿಸಿಐ ನಿರ್ಧರಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ನವ​ದೆ​ಹ​ಲಿ​(ಆ.05): ಕೊರೋನಾ ಸೋಂಕಿನ ಭೀತಿ ನಡುವೆಯೇ ಯುಎ​ಇ​ನಲ್ಲಿ ಈ ವರ್ಷದ ಐಪಿ​ಎಲ್‌ ನಡೆ​ಸಲು ಮುಂದಾ​ಗಿ​ರುವ ಬಿಸಿ​ಸಿ​ಐ ಕಠಿಣ ಕ್ರಮಗಳನ್ನು ಕೈಗೊ​ಳ್ಳು​ತ್ತಿ​ದೆ. 

ಐಪಿ​ಎಲ್‌ ವೇಳೆ ಆಟ​ಗಾ​ರ​ರಿಗೆ ಪ್ರತಿ 5 ದಿನ​ಕ್ಕೊಮ್ಮೆ ಪರೀಕ್ಷೆ ನಡೆ​ಸಲು ಬಿಸಿ​ಸಿಐ ನಿರ್ಧ​ರಿ​ಸಿದೆ. ಇದೇ ವೇಳೆ, ಯುಎ​ಇ​ನಲ್ಲಿ ಭಾರ​ತೀಯ ಆಟ​ಗಾ​ರ​ರು ಅಭ್ಯಾಸ ನಡೆ​ಸುವ ಮುನ್ನ 5 ಬಾರಿ ಕೋವಿಡ್‌ ಪರೀಕ್ಷೆಗೆ ಒಳ​ಗಾ​ಗ​ಬೇ​ಕಿದೆ. ಭಾರ​ತ​ದಲ್ಲಿ 2 ಬಾರಿ, ಯುಎ​ಇ​ನಲ್ಲಿ ಒಂದು ವಾರ ಕ್ವಾರಂಟೈನ್‌ ಅವ​ಧಿ​ಯಲ್ಲಿ 3 ಬಾರಿ ಪರೀಕ್ಷೆ ನಡೆ​ಸಲು ಬಿಸಿ​ಸಿಐ ನಿರ್ಧ​ರಿ​ಸಿದೆ. 

Tap to resize

Latest Videos

IPL 2020 ಟೈಟಲ್ ಪ್ರಾಯೋಜಕತ್ವದಿಂದ ವಿವೋ ಔಟ್; ಹೊಸ ಸ್ಪಾನ್ಸರ್‌ಗೆ ಹುಡುಕಾಟ!

5 ಪರೀಕ್ಷೆಯಲ್ಲೂ ವರದಿ ನೆಗೆ​ಟಿವ್‌ ಬಂದರಷ್ಟೇ ಆಟ​ಗಾ​ರ​ರನ್ನು ಬಯೋ ಸೆಕ್ಯೂರ್‌ ವ್ಯವಸ್ಥೆಯೊಳಗೆ ಬಿಡ​ಲಾ​ಗು​ವುದು ಎಂದು ಅಧಿ​ಕಾ​ರಿ​ಗಳು ತಿಳಿ​ಸಿ​ದ್ದಾರೆ.ಬಯೋ ಸೆಕ್ಯೂರ್ ವ್ಯವಸ್ಥೆಯೊಳಗೆ ಬಂದ ಬಳಿಕ ಹೊರಹೋಗುವಂತಿಲ್ಲ. ಒಂದು ವೇಳೆ ಬಯೋ ಸೆಕ್ಯೂರ್ ನಿಯಮವನ್ನು ಉಲ್ಲಂಘಿಸಿದರೆ ಆಟಗಾರರು 7 ದಿನಗಳ ಕಾಲ ಐಸೋಲೇಷನ್‌ನಲ್ಲಿರಬೇಕು. ಆರಂಭದಲ್ಲಿ ಎರಡು ಕೊರೋನಾ ಟೆಸ್ಟ್ ನೆಗೆಟಿವ್ ಬಂದರಷ್ಟೇ ವಿದೇಶಿ ಆಟಗಾರರಿಗೆ ಯುಎಇ ಪ್ಲೈಟ್ ಹತ್ತಲು ಅವಕಾಶ ದೊರೆಯಲಿದೆ.

ಕೊರೋನಾ ಭೀತಿಯಿಂದ ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ ಟೂರ್ನಿ ಇದೀಗ ಯುಎಇಗೆ ಸ್ಥಳಾಂತರಗೊಂಡಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಟೂರ್ನಿ ಜರುಗಲಿದೆ. 


 

click me!