ಐಪಿಎಲ್ 2020: ಮುಂಬೈ-ರಾಜಸ್ಥಾನ ನಡುವಿಂದು ಹೈವೋಲ್ಟೇಜ್ ಪಂದ್ಯ..!

By Kannadaprabha News  |  First Published Oct 6, 2020, 10:54 AM IST

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 20ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಅಬುಧಾಬಿ(ಅ.06): ಆಡಿರುವ 5 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್‌ಸ್, ರಾಜಸ್ಥಾನ ರಾಯಲ್‌ಸ್ ತಂಡದ ವಿರುದ್ಧ ಮಂಗಳವಾರ ಇಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯ 20ನೇ ಪಂದ್ಯದಲ್ಲಿ ಎದುರಾಗಲಿದೆ. 

ಈ ಆವೃತ್ತಿಯ ಮೊದಲೆರೆಡು ಪಂದ್ಯವನ್ನು ಶಾರ್ಜಾದ ಸಣ್ಣ ಮೈದಾನದಲ್ಲಿ ಆಡಿದ್ದ ರಾಜಸ್ಥಾನ ಗೆಲುವು ಸಾಧಿಸಿತ್ತು. ನಂತರದ 2 ಪಂದ್ಯಗಳಲ್ಲಿ ರಾಜಸ್ಥಾನ ಸೋತಿದೆ. ಇನ್ನು ಮುಂಬೈ ಸತತ 2 ಪಂದ್ಯ ಗೆದ್ದು ಆತ್ಮವಿಶ್ವಾಸದಲ್ಲಿ ತೇಲುತ್ತಿದೆ.

Tap to resize

Latest Videos

undefined

IPL 2020: ಡೆಲ್ಲಿ ದಾಳಿಗೆ ತತ್ತರಿಸಿದ RCB,ಕೊಹ್ಲಿ ಪಡೆಗೆ ಸೋಲಿನ ಶಾಕ್!
 
ಪಿಚ್ ರಿಪೋರ್ಟ್ ಈ ಐಪಿಎಲ್‌ನಲ್ಲಿ ಅಬುಧಾಬಿಯ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕಿಂತ 2ನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭ ದೊರೆಯಲಿದೆ. 180-190 ಸುರಕ್ಷಿತ ಮೊತ್ತ ಎಂದೇ ಪರಿಣಿಸಲಾಗಿದೆ.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕಿರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ

ರಾಜಸ್ಥಾನ ರಾಯಲ್ಸ್: ಜೋಸ್ ಬಟ್ಲರ್, ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರೆಯಾನ್ ಪರಾಗ್, ಮಹಿಪಾಲ್ ಲೊಮ್ರಾರ್, ರಾಹುಲ್ ತೆವಾಟಿಯಾ, ಟಾಮ್ ಕರ್ರನ್, ಶ್ರೇಯಸ್ ಗೋಪಾಲ್, ಜೋಪ್ರಾ ಆರ್ಚರ್, ಜಯ್‌ದೇವ್ ಉನಾದ್ಕತ್    

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
 

click me!