
ಶಾರ್ಜಾ(ಸೆ.27): 13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ 2ನೇ ಶತಕ ದಾಖಲಾಗಿದೆ. ವಿಶೇಷ ಅಂದರೆ ಎರಡೂ ಶತಕ ಸಿಡಿಸಿರುವುದು ಕನ್ನಡಿಗರು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಯಾಂಕ್ ಅಗರ್ವಾಲ್ ಇದೀಗ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಅತೀ ವೇಗದ ಶತಕ ಸಿಡಿಸಿದ 2ನೇ ಭಾರತೀಯ ಬ್ಯಾಟ್ಸ್‌ಮನ್ ಅನ್ನೋ ದಾಖಲೆ ಬರೆದಿದ್ದಾರೆ.
IPL 2020: ಜೊತೆಯಾಟದ ಮೂಲದ ದಾಖಲೆ ಬರೆದ ರಾಹುಲ್-ಮಯಾಂಕ್!
IPLನಲ್ಲಿ ಅತೀ ವೇಗದಲ್ಲಿ ಸೆಂಚುರಿ ಪೂರೈಸಿದ ಭಾರತೀಯ ಬ್ಯಾಟ್ಸ್‌ಮನ್
37 ಯುಸೂಫ್ ಪಠಾಣ್ v ಮುಂಬೈ, 2010
45 ಮಯಾಂಕ್ ಅಗರ್ವಾಲ್ v ರಾಜಸ್ಥಾನ, 2020*
46 ಮುರಳಿ ವಿಜಯ್ v ರಾಜಸ್ಥಾನ, 2010
47 ವಿರಾಟ್ ಕೊಹ್ಲಿ v ಪಂಜಾಬ್, 2016
48 ವಿರೇಂದ್ರ ಸೆಹ್ವಾಗ್ v ಡೆಕ್ಕನ್ ಚಾರ್ಜಸ್, 2011
ಸ್ಫೋಟಕ ಬ್ಯಾಟಿಂಗ್ ಮೂಲಕ ಮಯಾಂಕ್ ಅಗರ್ವಾಲ್, ರಾಜಸ್ಥಾನ ರಾಯಲ್ಸ್ ತಂಡಕ್ಕೆ ನಡುಕು ಹುಟ್ಟಿಸಿದ್ದಾರೆ. 45 ಎಸೆತದಲ್ಲಿ ಮಯಾಂಕ್ ಸೆಂಚುರಿ ಪೂರೈಸಿದರು.
ಐಪಿಎಲ್ ಟೂರ್ನಿಯಲ್ಲಿ ಮಯಾಂಕ್ ಬೆಸ್ಟ್ ಪರ್ಫಾಮೆನ್ಸ್
106 vs ರಾಜಸ್ಥಾನ, ಶಾರ್ಜಾ, 2020*
89 vs ಡೆಲ್ಲಿ, ದುಬೈ, 2020
68 vs ಪಂಜಾಬ್, ಪುಣೆ ,2015
64* vs ಮುಂಬೈ, ಬೆಂಗಳೂರು 2012
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.