KKRಗೆ ತಲೆಬಾಗಿದ ಧೋನಿ ಪಡೆ.. ಸೋಲಿಗೆ ಕಾರಣವಾಯ್ತಾ ಮಹಿ ಈ ನಿರ್ಧಾರ!

Published : Oct 07, 2020, 11:47 PM ISTUpdated : Oct 07, 2020, 11:51 PM IST
KKRಗೆ ತಲೆಬಾಗಿದ ಧೋನಿ ಪಡೆ.. ಸೋಲಿಗೆ ಕಾರಣವಾಯ್ತಾ ಮಹಿ ಈ ನಿರ್ಧಾರ!

ಸಾರಾಂಶ

ಪ್ರಮುಖ ಪಂದ್ಯದಲ್ಲಿ ಎಡವಿದ ಸಿಎಸ್‌ಕೆ/ ಸಿಎಸ್‌ಕೆ ವಿರುದ್ಧ ಹತ್ತು ರನ್ ಜಯ ದಾಖಲಿಸಿದ ಕೆಕೆಆರ್/ ಪಾಯಿಂಟ್ಸ್ ಟೇಬಲ್ ನಲ್ಲಿ ಮೂರನೇ ಸ್ಥಾನಕ್ಕೇರಿದ ಕೆಕೆಆರ್

ಅಬುದಾಬಿ(ಅ. 07) ಪ್ರಮುಖ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾಗೆ ತಲೆಬಾಗಿದೆ. ಅತ್ಯುತ್ತಮ ಬೌಲಿಂಗ್ ಸಂಘಟನೆ ಮಾಡಿದ ನೈಟ್ ರೈಡರ್ಸ್ 10 ರನ್‌ಗಳಿಂದ ಪಂದ್ಯ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ 167  ರನ್ ಕಲೆ ಹಾಕಿತ್ತು. ಭರ್ಜರಿ ಬ್ಯಾಟಿಂಗ್ ಮಾಡಿದ ರಾಹುಲ್ ತ್ರಿಪಾಠಿ 51 ಎಸೆತದಲ್ಲಿ 81 ರನ್ ಬಾರಿಸಿ ಕೊಡುಗೆ ನೀಡಿದರು.

ಮಂಕಡಿಂಗ್ ಬಿಡದ ಅಶ್ವಿನ್.. ಅಶ್ವಿನ್ ಕಾಂಟ್ರವರ್ಸಿ

168 ಚೇಸಿಂಗ್ ಗೆ ಇಳಿದ ಸಿಎಸ್‌ಕೆ ಆರಂಭ ಉತ್ತಮವಾಗಿಯೇ ಇತ್ತು. ಅಚ್ಚರಿಸಿದ ವಾಟ್ಸನ್ ಅರ್ಧಶತಕ ದಾಖಲಿಸಿದರು. ಆದರೆ ವಾಟ್ಸನ್ ವಿಕೆಟ್ ಒಪ್ಪಿಸಿದ ಮೇಲೆ ಸಿಎಸ್‌ಕೆ ರನ್ ಗಳಿಕೆ ನಿಧಾನವಾಗುತ್ತಾ ಹೋಯಿತು. ಮಹೇಂದ್ರ ಸಿಂಗ್ ಧೋನಿ ಅವರಿಂದಲೂ ಕೊಡುಗೆ ಬರಲಿಲ್ಲ. ಕೇದಾರ್ ಜಾಧವ್  12 ಚೆಂಡುಗಳಲ್ಲಿ ಕೇವಲ  7 ರನ್ ದಾಖಲಿಸಿದ್ದು ಚೆನ್ನೈಗೆ ಭಾರಿ ಹೊಡೆತ ನೀಡಿತು.

ಕೊನೆಯಲ್ಲಿ ಅದ್ಭುತ ಬೌಲಿಂಗ್ ಮಾಡಿದ ಸುನೀಲ್ ನರೇನ್ ಮತ್ತು ರಸಲ್ ಕೋಲ್ಕತ್ತಾಕ್ಕೆ ಕೈತಪ್ಪಿದ್ದ ಪಂದ್ಯವನ್ನು ತಂದುಕೊಟ್ಟರು.  ಹಿಂದಿನ ಪಂದ್ಯದಲ್ಲಿ ಗೆದ್ದು ಬೀಗಿದ್ದ ಸಿಎಸ್‌ಕೆಗೆ ಕೋಲ್ಕತ್ತಾ ಆಘಾತ ನೀಡಿತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಿಂದ ಆರ್‌ಸಿಬಿ ಮ್ಯಾಚ್ ಪುಣೆಗೆ ಶಿಫ್ಟ್ ಮಾಡಲು ಬಿಸಿಸಿಐ ಮೇಲೆ ಮಹಾರಾಷ್ಟ್ರ ಒತ್ತಡ!
ಮುಸ್ತಾಫಿಜುರ್‌ ರಹಮಾನ್ ಕೆಕೆಆರ್‌ ತಂಡದಿಂದ ಗೇಟ್‌ಪಾಸ್; ಮೊದಲ ಸಲ ಮೌನ ಮುರಿದ ಬಾಂಗ್ಲಾದೇಶ ವೇಗಿ!