ಸಿಕ್ಸರ್ ಸುರಿಮಳೆ ಸುರಿಸಲು ಡೆಲ್ಲಿ-ಕೆಕೆಆರ್ ರೆಡಿ..!

By Kannadaprabha News  |  First Published Oct 3, 2020, 2:47 PM IST

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 16ನೇ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ ನೈಟ್‌ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಸಿಕ್ಸರ್‌ಗಳ ಸುರಿಮಳೆ ಸುರಿಯುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಶಾರ್ಜಾ(ಅ.03): ಐಪಿಎಲ್ ಟೂರ್ನಿಯಲ್ಲಿ ಆಡಿರುವ 3 ಪಂದ್ಯಗಳಲ್ಲಿ ತಲಾ 2 ಗೆಲುವು 1 ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಶನಿವಾರ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಎದುರಾಗಲಿವೆ. 

"

Tap to resize

Latest Videos

undefined

ಚಿಕ್ಕದಾಗಿರುವ ಈ ಕ್ರೀಡಾಂಗಣದಲ್ಲಿ ಸಿಕ್ಸರ್‌ಗಳ ಹಬ್ಬ ನಡೆಯುವ ನಿರೀಕ್ಷೆಯಿದೆ. ಈ ಕ್ರೀಡಾಂಗಣದಲ್ಲಿ ಇಲ್ಲಿವರೆಗೂ 2 ಪಂದ್ಯಗಳು ಮಾತ್ರ ನಡೆದಿದ್ದು, 62 ಸಿಕ್ಸರ್ ಸಿಡಿಸಲಾಗಿದೆ. ರಾಜಸ್ಥಾನ-ಚೆನ್ನೈ ವಿರುದ್ಧದ ಪಂದ್ಯದಲ್ಲಿ 33 ಹಾಗೂ ರಾಜಸ್ಥಾನ-ಪಂಜಾಬ್ ವಿರುದ್ಧದ ಪಂದ್ಯದಲ್ಲಿ 29 ಸಿಕ್ಸ್‌ಗಳು ದಾಖಲಾಗಿದ್ದವು. 

ಐಪಿಎಲ್ 2020: ಧೋನಿ ಪಡೆಗೆ ಹ್ಯಾಟ್ರಿಕ್ ಸೋಲು; ಹೈದರಾಬಾದ್ ಗೆದ್ದಿದ್ದು ಹೇಗೆ?

ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡಗಳು ಎನಿಸಿರುವ ಕೋಲ್ಕತ ನೈಟ್‌ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪೈಪೋಟಿ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆಯಿದೆ. 

ಸದ್ಯ ಡೆಲ್ಲಿ ತಂಡದಲ್ಲಿ ರಿಷಭ್ ಪಂತ್, ಸ್ಟೋಯ್ನಿಸ್, ನಾಯಕ ಶ್ರೇಯಸ್ ಅಯ್ಯರ್ ಹಾಗೂ ಕೆಕೆಆರ್‌ನಲ್ಲಿ ಆಲ್ರೌಂಡರ್ ಆ್ಯಂಡ್ರೆ ರಸೆಲ್, ಶುಭ್‌ಮನ್ ಗಿಲ್ ಮತ್ತು ಇಯಾನ್ ಮಾರ್ಗನ್ ಉತ್ತಮ ಫಾರ್ಮ್‌ನಲ್ಲಿದ್ದು ಬ್ಯಾಟಿಂಗ್‌ನಲ್ಲಿ ಅಬ್ಬರಿಸುವ ಸಾಧ್ಯತೆಯಿದೆ. 

ಪಂದ್ಯ: ರಾತ್ರಿ 7.30ಕ್ಕೆ, 
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
 

click me!