ಸತತ ಸೋಲಿನಿಂದ ಕಂಗೆಟ್ಟಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಕ್ರಿಸ್ ಗೇಲ್ ಆಗಮ ಅದೃಷ್ಠ ಬದಲಾಯಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಪಂಜಾಬ್ 8 ವಿಕೆಟ್ ರೋಚಕ ಗೆಲುವು ದಾಖಲಿಸಿದೆ.
ಶಾರ್ಜಾ(ಅ.15): ಕೆಎಲ್ ರಾಹುಲ್ ಹಾಗೂ ಕ್ರಿಸ್ ಗೇಲ್ ಅರ್ಧಶತಕ ಹಾಗೂ ಮಯಾಂಕ್ ಅಗರ್ವಾಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆಗೂ ಗೆಲುವಿನ ಸಿಹಿ ಕಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಬ್ಬರಿಸಿದ ಪಂಜಾಬ್ 8 ವಿಕೆಟ್ ರೋಚಕ ಗೆಲುವು ಕಂಡಿದೆ.
ಬ್ಯಾಟಿಂಗ್ ಆರ್ಡರ್ ಬದಲಾವಣೆ; 171 ರನ್‌ಗೆ ತೃಪ್ತಿ ಪಟ್ಟ ಆರ್‌ಸಿಬಿ.
undefined
ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆರ್ಡರ್‌ನಲ್ಲಿ ಮಾಡಿದ ಕೆಲ ಬದಲಾವಣೆಗಳಿಂದ ಆರ್‌ಸಿಬಿ ಬೃಹತ್ ಮೊತ್ತದಿಂದ ವಂಚಿತವಾಗಿತ್ತು. ಹೀಗಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವಿಗೆ 172 ರನ್ ಟಾರ್ಗೆಟ್ ಪಡೆದಿತ್ತು. ಕ್ರಿಸ್ ಗೇಲ್ ಪಂಜಾಬ್ ತಂಡ ಸೇರಿಕೊಂಡಿದ್ದರು, ಆರಂಭಿಕರಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಎಂದಿನಂತೆ ಉತ್ತಮ ಆರಂಭ ನೀಡಿದರು.
ಸುಗಮವಾಗಿದೆ ಅಗ್ರಸ್ಥಾನದಲ್ಲಿರುವ ಡೆಲ್ಲಿ ತಂಡದ ಪ್ಲೇ ಆಫ್ ಹಾದಿ!.
ಮಯಾಂಕ್ ಹಾಗೂ ರಾಹುಲ್ ಮೊದಲ ವಿಕೆಟ್‌ಗೆ 78 ರನ್ ಜೊತೆಯಾಟ ನೀಡಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಯಾಂಕ್ ಅಗರ್ವಾಲ್ 25 ಎಸೆತದಲ್ಲಿ 45 ರನ್ ಸಿಡಿಸಿ ಔಟಾದರು. ದಿಟ್ಟ ಹೋರಾಟ ನೀಡಿದ ರಾಹುಲ್ ಹಾಫ್ ಸೆಂಚುರಿ ಪೂರೈಸಿದರು. ರಾಹುಲ್‌ಗೆ ಇತ್ತ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಉತ್ತಮ ಸಾಥ್ ನೀಡಿದರು.
KKR ವಿರುದ್ಧ ಐಪಿಎಲ್ ಇತಿಹಾಸದಲ್ಲೇ ಅಪರೂಪದ ದಾಖಲೆ ಮಾಡಿದ ಎಬಿಡಿ-ಕೊಹ್ಲಿ ಜೋಡಿ..!.
ಹಲವು ದಿನಗಳ ಬಳಿಕ ಕ್ರಿಕೆಟ್‌ಗೆ ಮರಳಿದ ಗೇಲ್ ಮೊದಲ ಪಂದ್ಯದಲ್ಲೇ ಹಾಫ್ ಸೆಂಚುರಿ ಸಿಡಿಸಿದರು. ಗೇಲ್ ಹಾಗೂ ರಾಹುಲ್ ಅಬ್ಬರದಿಂದ ಪಂಜಾಬ್ ಗೆಲುವಿಗೆ ಅಂತಿಮ 12 ಎಸೆತದಲ್ಲಿ 7 ರನ್ ಅವಶ್ಯಕತೆ ಇತ್ತು. ಆದರೆ ಇಸ್ರು ಉದಾನ ಹಾಗೂ ಚಹಾಲ್ ಅದ್ಬುತ ಡೆತ್ ಬೌಲಿಂಗ್ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಕ್ರಿಸ್ ಗೇಲ್ 53 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಈ ಮೂಲಕ ಪಂಜಾಬ್ ಪಾಳಯದಲ್ಲಿ ಆತಂಕ ಮತ್ತಷ್ಟು ಹೆಚ್ಚಾಯಿತು.
ಅಂತಿಮ 1 ಎಸೆತದಲ್ಲಿ ಪಂಜಾಬ್ ಗೆಲುವಿಗೆ 1 ರನ್ ಅವಶ್ಯಕತೆ ಇತ್ತು. ನಿಕೊಲಸ್ ಪೂರನ್ ಸಿಕ್ಸರ್ ಸಿಡಿಸೋ ಮೂಲಕ ಪಂಜಾಬ್‌ಗೆ 8 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು. ಕೆಎಲ್ ರಾಹುಲ್ ಅಜೇಯ 61 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.