IPL 2020: ಬಲಿಷ್ಠ ಡೆಲ್ಲಿ ಮಣಿಸಿದ ಪಂಜಾಬ್, ಅಂಕಪಟ್ಟಿಯಲ್ಲಿ 5ನೇ ಸ್ಥಾನ!

By Suvarna News  |  First Published Oct 20, 2020, 11:03 PM IST

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಪಂದ್ಯವನ್ನು ಸೂಪರ್ ಓವರ್ ಮೂಲಕ ಕಳೆದುಕೊಂಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಇದೀಗ 2ನೇ ಪಂದ್ಯವನ್ನು ರೋಚಕ ರೀತಿಯಲ್ಲಿ ಗೆದ್ದುಕೊಂಡಿದೆ.


ದುಬೈ(ಅ.20): ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 5 ವಿಕೆಟ್ ರೋಚಕ ಗೆಲುವು ದಾಖಲಿಸಿದೆ. ನಿಕೊಲಸ್ ಪೂರನ್ ಸಿಡಿಸಿದ ಹಾಫ್ ಸೆಂಚುರಿ ನೆರವಿನಿಂದ ಪಂಜಾಬ್ ಪಂದ್ಯ ಗೆದ್ದುಕೊಂಡಿದೆ. ಈ ಮೂಲಕ ಪಂಜಾಬ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಡೆಲ್ಲಿ ಪರ ಏಕಾಂಗಿ ಹೋರಾಟ ನೀಡಿದ ಶಿಖರ್ ಧವನ್ ಶತಕ ವ್ಯರ್ಥವಾಯಿತು.

ಸತತ 2ನೇ ಸೆಂಚುರಿ, ಐಪಿಎಲ್ ಟೂರ್ನಿಯಲ್ಲಿ ಧವನ್ ದಾಖಲೆ!...

Latest Videos

ಗೆಲುವಿಗೆ 165 ರನ್ ಟಾರ್ಗೆಟ್ ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಎಂದಿನ ಆರಂಭ ಪಡೆಯಲಿಲ್ಲ. ಪ್ರತಿ ಪಂದ್ಯದಲ್ಲಿ ಉತ್ತಮ ಆರಂಭ ನೀಡುತ್ತಿದ್ದ ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಜೋಡಿ ಡೆಲ್ಲಿ ವಿರುದ್ಧ ಕೇವಲ 17 ರನ್ ಜೊತೆಯಾಟ ನೀಡಿತು. ಕೆಎಲ್ ರಾಹುಲ್ 15 ರನ್ ಸಿಡಿಸಿ ನಿರ್ಗಮಿಸಿದರು. 

ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 29 ರನ್ ಸಿಡಿಸಿ ಔಟಾದರು.  ಮಯಾಂಕ್ ಅಗರ್ವಾಲ್ ಕೇವಲ 5 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ನಿಕೊಲಸ್ ಪೂರನ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಹೋರಾಟದಿಂದ ಪಂಜಾಬ್ ಚೇತರಿಸಿಕೊಂಡಿತು.

ನಿಕೊಲಸ್ ಪೂರನ್ ಹಾಫ್ ಸೆಂಚುರಿ ಸಿಡಿಸಿದರು. ಪೂರನ್ 28 ಎಸೆತದಲ್ಲಿ 53 ರನ್ ಸಿಡಿಸಿ ಔಟಾದರು. ಗೆಲುವಿನತ್ತ ಸಾಗುತ್ತಿದ್ದ ಪಂಜಾಬ್ ತಂಡದಲ್ಲಿ ಮತ್ತೆ ಆತಂಕ ಹೆಚ್ಚಾಯಿತು. ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ದೀಪಕ್ ಹೂಡ ಮೇಲೆ ಎಲ್ಲರ ಚಿತ್ತ ನೆಟ್ಟಿತು. ಆದರೆ ಮ್ಯಾಕ್ಸ್‌ವೆಲ್ 32 ರನ್ ಸಿಡಿಸಿ ಔಟಾದರು. 

ಪಂಜಾಬ್ ಗೆಲುವಿಗೆ ಅಂತಿಮ 18 ಎಸೆತದಲ್ಲಿ 14 ರನ್ ಅವಶ್ಯಕತೆ ಇತ್ತು. ಆದರೆ ಪ್ರಮುಖ ಬ್ಯಾಟ್ಸ್‌ಮನ್ ಪೆವಿಲಿಯನ್ ಸೇರಿದ್ದರು. ದೀಪಕ್ ಹೂಡ ಸಮಯೋಚಿತ ಬ್ಯಾಟಿಂಗ್ ಹಾಗೂ ಜೇಮ್ಸ್ ನೀಶನ್ ಸಿಕ್ಸರ್ ನೆರವಿನಿಂದ ಪಂಜಾಬ್ 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ದೀಪಕ್ ಹೂಡ ಅಜೇಯ 15 ರನ್ ಸಿಡಿಸಿದರು. ನೀಶನ್ ಅಜೇಯ 10 ರನ್ ಸಿಡಿಸಿದರು. ಈ ಗೆಲುವಿನೊಂದಿಗೆ ಪಂಜಾಬ್ 5ನೇ ಸ್ಥಾನಕ್ಕೇರಿದೆ. ಇಷ್ಟೇ ಅಲ್ಲ ಪ್ಲೇ ಆಫ್ ರೇಸ್‌ಗೆ ಮತ್ತಷ್ಟು  ವೇಗ ನೀಡಿದೆ.

click me!