
ದುಬೈ(ಅ.20): ಐಪಿಎಲ್ ಟೂರ್ನಿಯಲ್ಲಿ ಶಿಖರ್ ಧವನ್ ಅಪರೂಪದ ದಾಖಲೆ ಬರೆದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಸತತ 2 ಸೆಂಚುರಿ ಸಿಡಿಸಿದ ಏಕೈಕ ಹಾಗೂ ಮೊದಲ ಬ್ಯಾಟ್ಸ್‌ಮನ್ ನ್ನೋ ದಾಖಲೆ ಬರೆದಿದಿದ್ದಾರೆ.
IPL 2020: ಮತ್ತೊಂದು ದಾಖಲೆ ಬರೆದ ಶಿಖರ್ ಧವನ್!.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಂಚುರಿ ಸಿಡಿಸಿದ್ದ ಧವನ್, ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಧವನ್ ಶತಕ ದಾಖಲಿಸಿದ್ದಾರೆ. ಧವನ್ 61 ಎಸೆತದಲ್ಲಿ ಅಜೇಯ 106 ರನ್ ಸಿಡಿಸಿದ್ದಾರೆ. ಒಂದು ಆವೃತ್ತಿಯಲ್ಲಿ ಗರಿಷ್ಠ ಶತಕ ಬಾರಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್ ಕೊಹ್ಲಿ 2016ರ ಐಪಿಎಲ್ ಟೂರ್ನಿಯ ಒಂದೇ ಆವೃತ್ತಿಯಲ್ಲಿ 4 ಸೆಂಚುರಿ ಬಾರಿಸಿದ್ದರು.
ಐಪಿಎಲ್ ಒಂದು ಆವೃತ್ತಿಯಲ್ಲಿ ಒಂದಕ್ಕಿಂತ ಹೆಚ್ಚು 100+ ಸ್ಕೋರ್ ಸಿಡಿಸಿದ ಸಾಧಕರು
4 ವಿರಾಟ್ ಕೊಹ್ಲಿ, 2016 (RCB)
2 ಕ್ರಿಸ್ ಗೇಲ್, 2011 (RCB)
2 ಹಾಶೀಂ ಆಮ್ಲಾ, 2017 (KXIP)
2 ಶೇನ್ ವ್ಯಾಟ್ಸನ್, 2018 (CSK)
2 ಶಿಖರ್ ಧವನ್, 2020 (DC)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.